ಬೆಂಗಳೂರು, ಡಿಸೆಂಬರ್ ೦೮
ರಾಜ್ಯ ಸರಕಾರದ ಮಹತ್ವಾಕಾಂಕ್ಷೆ, ಗ್ರಾಮೀಣ ರಸ್ತೆ ಸಂಪರ್ಕ, ಯೋಜನೆಯಡಿ ತೀರ್ಥಹಳ್ಳಿ ತಾಲೂಕಿನಲ್ಲಿ, ಸುಮಾರು ೭೫ ಕೋಟಿ ರೂಪಾಯಿಗಳ ವೆಚ್ಚದ ಎರಡು ಕಾಮಗಾರಿಗಳಿಗೆ, ಇಂದು ನಡೆದ ರಾಜ್ಯ ಸಚಿವ ಸಂಪುಟ ಹಸಿರು ನಿಶಾನೆ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ, ಗೃಹ ಸಚಿವರೂ, ತೀರ್ಥಹಳ್ಳಿ ಶಾಸಕರೂ ಆದ, ಶ್ರೀ ಆರಗ ಜ್ಞಾನೇಂದ್ರ ರವರು,
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ರಾಜ್ಯ ಸರಕಾರ ಸುಮಾರು ೫೦ ಕೋಟಿ ರೂಪಾಯಿಗಳ ವೆಚ್ಚದ ತೀರ್ಥಹಳ್ಳಿ ತಾಲೂಕಿನ ತೂದೂರು – ಮುಂಡುವಳ್ಳಿ ಗ್ರಾಮಗಳನ್ನು ಸಂಪರ್ಕಿಸುವ, ೪೯.೮೭ ಕೋಟಿ ರೂಪಾಯಿಗಳ ಯೋಜನೆಗೆ, ಆಡಳಿತಾತ್ಮಕ ಮಂಜೂರಾತಿ ಪಡೆದು ಕೊಳ್ಳಲಾಗಿದೆ.
ಅದೇ ರೀತಿಯಾಗಿ ನೂತನ ಸೇತುವೆ ಯೋಜನೆಗೆ ೪೯.೮೭ ಕೋಟಿ ರೂಪಾಯಿಗಳ ನಡುವೆ ತುಂಗಾ ನದಿಗೆ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ ೨೫.೬೫ ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ಹಾಗೂ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು, ಕಾರಣಗಿರಿ – ಬಪ್ಪನಮನೆ ಸಂಪರ್ಕ ರಸ್ತೆಯ, ಶರಾವತಿ ಹಿನ್ನೀರಿನ, ಬಿಲ್ಸಾಗರ ದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ 24.36 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದ್ದು, ಶೀಘ್ರವಾಗಿ, ಯೋಜನೆ ಅನುಷ್ಠಾನಕ್ಕೆ, ಟೆಂಡರ್ ಕರಯಲಾಗುವುದು.
ಕ್ಷೇತ್ರದ ಶಾಸಕರೂ ಹಾಗೂ ರಾಜ್ಯ ಗೃಹ ಸಚಿವರೂ ಆದ ಶ್ರೀ ಆರಗ ಜ್ಞಾನೇಂದ್ರ ರವರು ಈ ಎರಡು ಯೋಜನೆಗಳ ಮಂಜೂರಾತಿಗೆ, ಬೇಡಿಕೆ ಮಂಡಿಸಿ, ಪ್ರಸ್ತಾವನೆ ಸಲ್ಲಿಸಿದ್ದರು.
ತೂದೂರು- ಮುಂಡುವಳ್ಳಿ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಯೋಜನೆ ಕಾರ್ಯಗತ ಗೊಳಿಸಬೇಕೆಂದು, ದಶಕಗಳಿಂದ ಬೇಡಿಕೆ ಇದ್ದರೂ, ಇದುವರೆಗೆ ಮಾನ್ಯತೆ ದೊರೆತಿರಲಿಲ್ಲ.
ಈ ಎರಡೂ ಕಾಮಗಾರಿಗಳನ್ನು, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ವತಿಯಿಂದ ಕಾರ್ಯಗತ ಗೊಳಿಸಲಾಗುವುದು.
Eom