ಶಿವಮೊಗ್ಗ, ಡಿಸೆಂಬರ್ -07: ತಾಂತ್ರಿಕ ಶಿಕ್ಷಣ ಹಿನ್ನೆಲೆಯ ಹೊಸ ಪದವೀಧರರಿಗೆ ಸಿವಿಲ್ ಕಾಮಗಾರಿ ನಿರ್ವಹಣೆ, ನಗರ ಯೋಜನೆ, ಹಣಕಾಸು, ಪರಿಸರ ಸೇರಿದಂತೆ ಹಲವಾರು ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿ ಪಡೆಯಲು ಅನುವಾಗುವ ಟುಲಿಪ್ ಯೋಜನೆಯಲ್ಲಿ ಇಂಟರ್ನ್ಶಿಪ್ಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಪದವೀಧರರು ರೂ. 5000/- ಸ್ಟೈಫಂಡ್ನೊಂದಿಗೆ ಒಂದು ವರ್ಷ ಹಾಗೂ ಸ್ಟೈಫಂಡ್ ರಹಿತವಾಗಿ 6 ತಿಂಗಳ ಇಂಟರ್ನ್ಶಿಪ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯು ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿಯ ಸಹಯೋಗದೊಂದಿಗೆ ನಿರ್ವಹಿಸಲ್ಪಡುವ ಜಂಟಿ ಕಾರ್ಯಾಚರಣೆಯಾಗಿದ್ದು, ಆಸಕ್ತ ಅರ್ಹ ಪದವೀಧರರು ದಿ: 15/12/2022 ರೊಳಗೆ https://internship.aicte-india.org ಲಿಂಕ್ ಬಳಸಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಲಿಂಕ್ ಬಳಸಬಹುದು ಅಥವಾ ಕಛೇರಿಗೆ ಭೇಟಿ ನೀಡುವಂತೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ