ಶಿವಮೊಗ್ಗ,ಜು.17:ಕರ್ನಾಟಕ ಸಂಘ, ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್, ಸಾತ್ವಿಕ ಸಾಂಸ್ಕøತಿಕ ಪ್ರತಿಷ್ಠಾನ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜು.21ರಂದು ಸಂಜೆ 5.30ಕ್ಕೆ ಕರ್ನಾಟಕ ಸಂಘದಲ್ಲಿ ಕನ್ನಡ ಕವಿಗಳ ಕಾವ್ಯ ಲಹರಿ “ಕಾವ್ಯ ಸಂಗೀತ” ಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್‍ನ ಸ್ಥಾಪಕ ಅಧ್ಯಕ್ಷೆ ಎಸ್.ಶಾಂತಶೆಟ್ಟಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾವ್ಯ ಸಂಗೀತ ಎಂಬುವುದು ಒಂದು ವಿನೋತನ ಪ್ರಯೋಗವಾಗಿದೆ. ನಮ್ಮ ಟ್ರಸ್ಟ್ 25 ವರ್ಷ ಪೂರೈಸಿದ್ದು, ವರ್ಷದಲ್ಲಿ 25 ಕಾರ್ಯಕ್ರಮಗಳನ್ನು ಆಯೋಜಿಸುವ ಆಶಯ ಹೊಂದಲಾಗಿದ್ದು, ಅದರಲ್ಲಿ ಕಾವ್ಯ ಸಂಗೀತವು ಒಂದಾಗಿದೆ ಎಂದರು.
ಕಾವ್ಯ ಸಂಗೀತ ಕಾರ್ಯಕ್ರಮವನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸುವರು. ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ ಅಧ್ಯಕ್ಷತೆ ವಹಿಸುವರು. ಈ ಕಾರ್ಯಕ್ರಮವು ಖ್ಯಾತ ಗಾಯಕ ಶಂಕರ ಶ್ಯಾನ್‍ಭೋಗ್‍ರವರ ನೇತೃತ್ವದಲ್ಲಿ ನಡೆಯಲಿದೆ. ಸಾತ್ವಿಕ ಪ್ರತಿಷ್ಠಾನದ ಟ್ರಸ್ಟಿ ಜಗದೀಶ್ ಕಾಮತ್ ಉಪಸ್ಥಿತರಿರುವರು ಎಂದರು.
ಸಾತ್ವಿಕ ಸಾಂಸ್ಕøತಿಕ ಪ್ರತಿಷ್ಠಾನದ ಮುಖ್ಯಸ್ಥ ಹಾಗೂ ಗಾಯಕ ಶಂಕರ್ ಶ್ಯಾನ್‍ಭೋಗ್ ಮಾತನಾಡಿ, ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಸುಗಮ ಸಂಗೀತವೆಂದರೆ ಕೇವಲ ಭಾವಗೀತೆಗಳೇ ಅಲ್ಲ. ಹಾಗೆಯೇ ಕಾವ್ಯ ಸಂಗೀತ ಎಂಬುವುದು ಷಟ್ಪಧಿಗಳು, ದಾಸ ಸಾಹಿತ್ಯ, ತತ್ವಪದಗಳು, ಭಾವಗೀತೆಗಳು, ದೇಶಭಕ್ತಿಗೀತೆಗಳು, ಜನಪದ ಸಂಗೀತ, ಚುಟುಕ, ಗಮಕ ಹೀಗೆ ಎಲ್ಲಾ ರೀತಿಯ ಕಾವ್ಯ ವೈವಿಧ್ಯತೆಗಳನ್ನು ಕಾವ್ಯ ಸಂಗೀತದಲ್ಲಿ ಕಾಣಬಹುದಾಗಿದೆ ಎಂದರು.
ಕೇವಲ ಮನೋರಂಜನೆ ಮಾತ್ರವಲ್ಲ, ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮನೋವಿಕಾಸಗೊಳಿಸುವ ಸಾತ್ವಿಕತೆಯನ್ನು ಜಾಗೃತಿಗೊಳಿಸುವ ಎಲ್ಲಾ ಪ್ರಕಾರದ ಕವಿಗಳನ್ನು ಸಂಗೀತಗಾರರನ್ನು ತೊಡಗಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಎನ್.ಸುಂದರರಾಜ್, ವಿನಯ್, ಜಿ.ವಿಜಯ್‍ಕುಮಾರ್, ವಿಶ್ವಾಸ್, ಶೋಭಾ ಸತೀಶ್, ಉಮಾ ಇದ್ದರು.