ಬದಲಾಗುತ್ತಿರುವ ಭಾರತದ ಭರವಸೆಯ ಶಿಕ್ಷಣ, ರಾಷ್ಟ್ರೀಯ ಶಿಕ್ಷಣ ನೀತಿ, ಶಿಕ್ಷಣದ ರೀತಿ ನೀತಿ ವಿಚಾರದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಇತ್ತೀಚಿಗೆ ಪದ್ಮಶ್ರೀ ಪುರಸ್ಕೃತರಾದ ಚಾಣಕ್ಯ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪದ್ಮಶ್ರೀ ಡಾ ಎಂ ಕೆ ಶ್ರೀಧರ್ ಅವರಿಗೆ ಅಭಿನಂದನೆ ಹಾಗೂ ಸಂವಾದ ಕಾರ್ಯಕ್ರಮವನ್ನು ಶನಿವಾರ ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಪೀಪಲ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ಆಯೋಜಿಸಲಾಗಿತ್ತು

ಪದ್ಮಶ್ರೀ ಪುರಸ್ಕೃತ ಎಂ ಕೆ ಶ್ರೀಧರ್ ಅವರನ್ನು ಶಿವಮೊಗ್ಗ ಜಿಲ್ಲೆಯ ಜನತೆ ಪರವಾಗಿ ಅಭಿನಂದಿಸಲಾಯಿತು ಶಿವಮೊಗ್ಗ ಜಿಲ್ಲೆಯ ಹೃದಯ ಸ್ಪರ್ಶ ಅಭಿನಂದನಾ ಸಮಾರಂಭದಲ್ಲಿ ಪದ್ಮಶ್ರೀ ಡಾ ಶ್ರೀಧರ್ ಮಾತನಾಡುವಾಗ ಭಾವುಕರಾದ ಪ್ರಸಂಗ ನಡೆಯಿತು

ಅತ್ಯಂತ ಸರಳ ಸಹೃದಯಿ ಪದ್ಮಶ್ರೀ ಎಮ್ ಕೆ ಶ್ರೀಧರ್ ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳೊಂದಿಗೆ ಚಿಂತನ ಮಂಥನ ನಡೆಸಿದರು

ವಿಧಾನ ಪರಿಷತ್ ಸದಸ್ಯ ಬಿಎಸ್ ಅರುಣ್ ಮಾತನಾಡಿದೇಶದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ಕೊಡಲಾಯಿತು ಆದರೆ ರಾಜ್ಯದಲ್ಲಿ ಸರ್ಕಾರ ಅದನ್ನು ವಿರೋಧಿಸುತ್ತಿದೆ ಅದರ ಮಹತ್ವವನ್ನು ಪರಿಚಯಿಸುವ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಪ್ರತಿ ತಯಾರಿಕೆಯಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಪದ್ಮಶ್ರೀ ಡಾ ಶ್ರೀಧರ್ ಶಿವಮೊಗ್ಗಕ್ಕೆ ಆಗಮಿಸಿದ್ದು ಅವರ ಜೊತೆಯಲ್ಲಿ ಚಿಂತನ ಮಂಥನ ನಡೆಸಿ ಅಭಿನಂದಿಸುವ ಕಾರ್ಯಕ್ರಮ ನಡೆಸಿದ್ದೇವೆ

ಡಿಎಸ್ ಅರುಣ್ ವಿಧಾನ ಪರಿಷತ್ ಸದಸ್ಯರು ಮಾತನಾಡಿ ದೇಶದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ಕೊಡಲಾಯಿತು ಆದರೆ ರಾಜ್ಯದಲ್ಲಿ ಸರ್ಕಾರ ಅದನ್ನು ವಿರೋಧಿಸುತ್ತಿದೆ ಅದರ ಮಹತ್ವವನ್ನು ಪರಿಚಯಿಸುವ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಪ್ರತಿ ತಯಾರಿಕೆಯಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಪದ್ಮಶ್ರೀ ಡಾ ಶ್ರೀಧರ್ ಶಿವಮೊಗ್ಗಕ್ಕೆ ಆಗಮಿಸಿದ್ದು ಅವರ ಜೊತೆಯಲ್ಲಿ ಚಿಂತನ ಮಂಥನ ನಡೆಸಿ ಅಭಿನಂದಿಸುವ ಕಾರ್ಯಕ್ರಮ ನಡೆಸಿದ್ದೇವೆ

ಮಾಜಿ ಶಿಕ್ಷಣ ಸಚಿವರಾದ ಡಿಎಚ್ ಶಂಕರಮೂರ್ತಿ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಪದ್ಮ ಪ್ರಶಸ್ತಿಗಳನ್ನು ನಿಜವಾಗಿ ಕೆಲಸ ಮಾಡುತ್ತಿರುವ ಪ್ರಾಮಾಣಿಕರನ್ನು ಹುಡುಕಿ ಸರ್ಕಾರ ಪುರಸ್ಕಾರ ನೀಡುತ್ತಿದೆ ಅಂಥವರಲ್ಲಿ ಡಾಕ್ಟರ್ ಶ್ರೀಧರ್ ಕೂಡ ಒಬ್ಬರು ತಮ್ಮ ಇಡೀ ಬದುಕನ್ನು ಸಾರ್ವಜನಿಕ ಸೇವೆ ಮತ್ತು ಶಿಕ್ಷಣಕ್ಕಾಗಿ ಇವರು ಮೀಸಲಿಟ್ಟಿದ್ದಾರೆ ದೇಶದಲ್ಲಿ ಶಿಕ್ಷಣವನ್ನು ಕಟ್ಟಿಕೊಟ್ಟ ಅಪರೂಪದಲ್ಲಿ ಅಪರೂಪದ ವ್ಯಕ್ತಿ ಶ್ರೀಧರ್ ಎಂದು ತಿಳಿಸಿದರು

ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಡಾ. ಎಂಕೆ ಶ್ರೀಧರ್ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಶಿಕ್ಷಣ ತಜ್ಞ ಒಬ್ಬ ವ್ಯಕ್ತಿಗೆ ಪ್ರಶಸ್ತಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು ಎಂದರೆ ಅದು ಆ ವ್ಯಕ್ತಿಯ ವಿಕಸನಕ್ಕೆ ಸಹಕರಿಸಿದ ಇಡೀ ಸಮುದಾಯಕ್ಕೆ ಸಂದ ಪುರಸ್ಕಾರ ಎಂದು ತಿಳಿದುಕೊಳ್ಳಬೇಕು ಪ್ರತಿಯೊಬ್ಬ ಮನುಷ್ಯನಿಗೂ ಆದರ್ಶ ಗುರಿ ಇದ್ದರೆ ಮಾತ್ರ ಜೀವನ ಅರ್ಥಪೂರ್ಣವಾಗುತ್ತದೆ ನನ್ನೊಂದಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತವನ್ನು ನಾನು ಗಮನಿಸಿದಾಗ ನಾನು ಮಾಡಿದ ಕೆಲಸ ಏನೂ ಇಲ್ಲ ಎಂಬ ಭಾವನೆ ನನ್ನನ್ನು ಆವರಿಸುತ್ತಿತ್ತು ನಾನು ಒಬ್ಬ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಎಂಬುದನ್ನು ಜನತೆ ಗುರುತಿಸಿದ್ದಾರೆ ಅದು ನನಗೆ ಅತ್ಯಂತ ಸಂತಸ ತಂದಿದೆ ಎಂದರು

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್, ರುದ್ರೇಗೌಡ, ಪ್ರೊಸಸರ್ ಜೆಎಸ್ ಸದಾನಂದ್, ಭೂಪಾಳo ಶಶಿಧರ್ ಡಾಕ್ಟರ್ ರವಿಕಿರಣ್, ಇತರರು ಹಾಜರಿದ್ದರು ವಿದುಷಿ ರೇಖಾ ರವರಿಂದ ವೀಣಾ ವಾದನ ನಡೆಯಿತು

error: Content is protected !!