ಅಭಿವೃದ್ಧಿಯ ಹರಿಕಾರ ಸಂಸದ ಬಿ ವೈ ರಾಘವೇಂದ್ರ

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಸದಾ ಅಭಿವೃದ್ಧಿ ಚಿಂತನೆ, ದೂರದೃಷ್ಟಿ ಹಾಗೂ ನಿರಂತರ ಪ್ರಯತ್ನದ ಫಲವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಮುಂಚೂಣಿಯಲ್ಲಿದೆ. ರಸ್ತೆ, ರೈಲ್ವೇ ಹಾಗೂ ವಿಮಾನ ಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಮೈಲುಗಲ್ಲುಗಳನ್ನು ಸಾಧಿಸಿದೆ.

ಸಾಧನೆಯ ಹರಿಕಾರ, ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಜನ್ಮದಿನದ ಸಂಭ್ರಮ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಲೇ ಇದ್ದಾರೆ ರಾಘವೇಂದ್ರ. ನೀರಾವರಿ, ವಿವಿಧ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಪ್ರವಾಸೋದ್ಯಮ, ಹೊಸ ರೈಲುಗಳ ಸಂಚಾರ ಹೀಗೆ ವಿವಿಧ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದಾರೆ.

ನಾಲ್ಕು ಬಾರಿ ಲೋಕಸಭಾ ಸದಸ್ಯ, ಒಮ್ಮೆ ಶಾಸಕರಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಆಶ್ಚರ್ಯ ಮೂಡಿಸುವಂತಿದೆ. ಶಿವಮೊಗ್ಗ ಜಿಲ್ಲೆಯಲ್ಲಿದ್ದರೆ ನಿರಂತರವಾಗಿ ಕ್ಷೇತ್ರದ ವಿವಿಧೆಡೆ ಸಂಚಾರ ಮಾಡುವ ಬಿ.ವೈ.ರಾಘವೇಂದ್ರ, ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸ ಮಾಡುತ್ತಾರೆ.
ಯೋಜನೆಗಳ ಕಲ್ಪನೆ ಮೂಡಿದರೆ ಸಂಬಂಧಿಸಿದ ಸಚಿವರಿಗೆ ಮನವಿ ಸಲ್ಲಿಸಿದ ಅವಧಿಯಿಂದ ಯೋಜನೆ ಸಂಪೂರ್ಣ ಆಗುವವರೆಗೂ ವಿರಮಿಸುವುದಿಲ್ಲ.

ಅಂತರಾಷ್ಟ್ರೀಯ ಗುಣಮಟ್ಟದ ವಿಮಾನ ನಿಲ್ದಾಣ ಕನಸು ನನಸು ಮಾಡಿದವರು ಬಿ.ವೈ.ರಾಘವೇಂದ್ರ.
ರೈಲ್ವೇ ಕ್ಷೇತ್ರದಲ್ಲಿ ಮಹತ್ತರ ಯೋಜನೆಗಳನ್ನು ಶಿವಮೊಗ್ಗಕ್ಕೆ ತರುವಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಶ್ರಮಿಸಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಸದ ಬಿ ವೈ ರಾಘವೇಂದ್ರ ಪ್ರಮುಖ ಅಭಿವೃದ್ಧಿ ಕಾರ್ಯಗಳು

ರೈಲ್ವೆ ಕ್ಷೇತ್ರದ ಅಭಿವೃದ್ಧಿ

  • 2009ಕ್ಕೂ ಮೊದಲು ಕೇವಲ 8-10 ಟ್ರೇನುಗಳು ಮಾತ್ರ ಓಡಾಟ ಇತ್ತು. ಇದೀಗ 28 ಟ್ರೇನುಗಳ ಓಡಾಟವಾಗಿದೆ.
  • ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗ ಅಂದಾಜು ವೆಚ್ಚ ರೂ.994.47 ಕೋಟಿ.
  • ಶಿವಮೊಗ್ಗ-ತಾಳಗುಪ್ಪ ಬ್ರಾಡ್ ಗೇಜ್ ಮಾರ್ಗ ಮೇಲ್ರ‍್ಜೆಗೆ ರೂ. 280 ಕೋಟಿ.
  • ಬೀರೂರು-ಶಿವಮೊಗ್ಗ- ತಾಳಗುಪ್ಪ ಮಾರ್ಗ ವಿದ್ಯುದ್ದೀಕರಣ ರೂ. 165 ಕೋಟಿ
  • 1) ಶಿವಮೊಗ್ಗದ ಸೋಮಿನಕೊಪ್ಪ ರಸ್ತೆಯಲ್ಲಿ ಎಲ್.ಸಿ. 52, 2) ಸೌಳಂಗ ರಸ್ತೆಯಲ್ಲಿ ಎಲ್.ಸಿ. 49 ಹಾಗೂ 3) ಭದ್ರಾವತಿ ಕಡದಕಟ್ಟೆ ಬಳಿ ರೈಲ್ವೆ ಎಲ್.ಸಿ. 34.  ರೈಲ್ವೆ ಓವರ್ ಬ್ರಿಡ್ಜ್ ಗಳ ನಿರ್ಮಾಣ ರೂ.116 ಕೋಟಿ, 4) ಅರಸಾಳು ಸಮಿಪ ಎಲ್.ಸಿ.93ಕ್ಕೆ ಲೋ ಕಾಸ್ಟ್ ಆರ್.ಓ.ಬಿ. – 2.17 ಕೋಟಿ
  • ಶಿವಮೊಗ್ಗದ ಪಿ&ಟಿ ಕಾಲೋನಿಯ ಐಅ 51 ಗೆ ರೈಲ್ವೆ ಅಂಟರ್ ಪಾಸ್ ನಿರ್ಮಾಣ – 3.65 ಕೋಟಿ.
  • ಶಿವಮೊಗ್ಗ ವಿದ್ಯಾನಗರ, ಶಿವಮೊಗ್ಗ, ಭದ್ರಾವತಿ, ಕುಂಸಿ, ಅರಸಾಳು, ಆನಂದಪುರ, ಸಾಗರ, ತಾಳಗುಪ್ಪ  ಮತ್ತು ಬೈಂದೂರಿನ ಮೂಕಾಂಬಿಕ ರೈಲ್ವೆ ನಿಲ್ದಾಣಗಳಲ್ಲಿ ಫ್ಲಾಟ್ ಫಾರಂ ವಿಸ್ತರಣೆ, ಸ್ಕೆöÊವಾಕ್, ಶೌಚಾಲಯ, ಫ್ಲಾಟ್ ಫಾರಂ ಶೆಡ್, ಕುಡಿಯುವ ನೀರಿನ ಸೌಕರ್ಯ, ಬೀದಿ ದೀಪ, ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ 38 ಕೋಟಿ.
  • ಅರಸಾಳು ಹಳೆ ರೈಲ್ವೆ ನಿಲ್ದಾಣ ಕಟ್ಟಡವನ್ನು ಮಾಲ್ಗುಡಿ ಡೇಸ್ ನೆನಪಿನಲ್ಲಿ ಮಾದರಿ ರೈಲ್ವೆ ನಿಲ್ದಾಣವಾಗಿ ಪರಿವರ್ತಿಸಲಾಗಿದೆ ರೂ.38 ಲಕ್ಷ.
  • ಶಿವಮೊಗ್ಗದ ಕೋಟೆಗಂಗೂರಿನಲ್ಲಿ ರೈಲ್ವೆ ಕೊಚಿಂಗ್ ಡಿಪೋ ಹಾಗೂ ಟರ್ಮಿನಲ್ ಸ್ಟೇಷನ್ ನಿರ್ಮಾಣಕ್ಕೆ ಒಟ್ಟು ರೂ. 100 ಕೋಟಿ.
  • ಶಿವಮೊಗ್ಗ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ಹಾಗು 2ನೇ ಫುಟ್ ಓವರ್ ಬ್ರಿಡ್ಜ್ ನಿರ್ಮಾಣ ರೂ. 1.00 ಕೋಟಿ.
  • ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ರಿಂಗ್ ರೋಡ್ ನಿರ್ಮಾಣ ರೂ. 10.00 ಕೋಟಿ.
  • ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅತೀ ಎತ್ತರದ ಭಾರತದ ಧ್ವಜ ಸ್ಥಾಪನೆ ಮಾಡಲಾಗಿದೆ.
  • ಶಿವಮೊಗ್ಗದಿಂದ ರೇಣಿಗುಂಟ (ತಿರುಪತಿ) ಚೆನ್ನೆಗೆ ವಾರದಲ್ಲಿ 2 ದಿನ ಸಂಚರಿಸುವ ಎಕ್ಸ್ ಪ್ರೆಸ್ ರೈಲು ಪುನರ್ ಪ್ರಾರಂಭಗೊAಡಿದೆ.
  • ಶಿವಮೊಗ್ಗದಿಂದ ತಾಳಗುಪ್ಪವರೆಗೆ 20ಕ್ಕೂ ಹೆಚ್ಚಿನ ರೈಲ್ವೆ ಕೆಳಸೇತುವೆಗಳನ್ನು ಅಭಿವೃದ್ಧಿಪಡಿಸಲಾಗಿದೆ. (ರೂ. 9.42 ಕೋಟಿ)
  • ಅಮೃತ್ ಭಾರತ್ ಸ್ಟೇಷನ್ ಸ್ಕೀಂ ಅಡಿಯಲ್ಲಿ ಶಿವಮೊಗ್ಗ, ಸಾಗರ ಮತ್ತು ತಾಳಗುಪ್ಪ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ರೂ. 100.00 ಕೋಟಿ.
  • ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಎಲ್.ಸಿ. ಗೇಟ್ ನಂಬರ್ 47 ರಲ್ಲಿ ಅಂಡರ್ ಪಾಸ್ ನರ‍್ಮಾಣಕ್ಕೆ ರೂ. 6 ಕೋಟಿ.
  • ಸಾಗರ ತಾಲ್ಲೂಕಿನ ಸೊರಬ ರಸ್ತೆಯ ಎಲ್.ಸಿ. ಗೇಟ್ ನಂಬರ್ 130 ರಲ್ಲಿ ನೂತನ ರೈಲ್ವೆ ಮೇಲ್ಸೇತುವೆ ನರ‍್ಮಾಣಕ್ಕೆ ರೂ.25.00 ಕೋಟಿ
www.newsnext.co | Online Digital News Portal

ರಸ್ತೆಗಳ ಅಭಿವೃದ್ದಿ

  • ರಾ.ಹೆ.206 ತುಮಕೂರಿನಿಂದ ಶಿವಮೊಗ್ಗವರೆಗಿನ 214.45 ಕಿ.ಮೀ ಉದ್ದದ 4 ಪಥದ ರಸ್ತೆಯ  ನಿರ್ಮಾಣ – ರೂ.7158 ಕೋಟಿ.    
  • ರಾ.ಹೆ.369 ಇ ಸಾಗರ ತಾಲ್ಲೋಕಿನ ಸಿಗಂಧೂರು ಬಳಿ ಶರಾವತಿ ಹಿನ್ನೀರಿಗೆ 2.25 ಕಿ.ಮೀ ಉದ್ದದ ಕೇಬಲ್ ಆದಾರಿತ ವಿನೂತನ ಸೇತುವೆ ನಿರ್ಮಾಣ – ರೂ.423.15 ಕೋಟಿ        
  • ರಾ.ಹೆ.206 ಶಿವಮೊಗ್ಗದ ಎಂ.ಆರ್.ಎಸ್.ವೃತ್ತದಿAದ ಸಿಂಹಧಾಮದವರೆಗೆ ನಾಲ್ಕು ಪಥದ ರಸ್ತೆ ಅಗಲೀಕರಣ ರೂ. 96.00 ಕೋಟಿ
  • ರಾ.ಹೆ.206ರ ಚೋರಡಿ ಹತ್ತಿರ ಕುಮಧ್ವತಿ ನದಿಗೆ ಸೇತುವೆ ನಿರ್ಮಾಣ – ರೂ. 11.00 ಕೋಟಿ
  • ರಾ.ಹೆ.169 ತೀರ್ಥಹಳ್ಳಿಯಿಂದ ಕೊಪ್ಪ ವgಗೆ ದ್ವಿಪಥ ರಸ್ತೆ ನಿರ್ಮಾಣ –  ರೂ 96 ಕೋಟಿ 
  • ರಾ.ಹೆ. 169 ತೀರ್ಥಹಳ್ಲೀ ಪಟ್ಟಣದಲ್ಲಿ ತುಂಗಾ ನದಿಗೆ ಸೇತುವೆ ಹಾಗು ಬೈಪಾಸ್ ರಸ್ತೆ ನಿರ್ಮಾಣ -ರೂ 55.62 ಕೋಟಿ
  • ರಾ.ಹೆ.169 ಎ ತೀರ್ಥ ಹಳ್ಳಿಯಿಂದ ಆಗುಂಬೆ ವರೆಗಿನ ರಸ್ತೆಯಲ್ಲಿ 3 ಕಿರು ಸೇತುವೆಗಳ ನಿರ್ಮಾಣ – ರೂ 8.20 ಕೋಟಿೆ
  • ರಾ.ಹೆ. 766 (ಸಿ) ನಾಗೋಡಿ ಬಳಿ ಗೇಬಿಯನ್ ತಡೆಗೋಡೆ ನಿರ್ಮಾಣ – ರೂ 4.23 ಕೋಟಿ.
  • ರಾ.ಹೆ. 766 (ಸಿ)  ಮಡೋಡಿ, ಮತ್ತಿಮನೆ, ನಗರ, ಆರೋಡಿ, ಕಾರಣಗಿರಿ, ಮಾವಿನಕೊಪ್ಪ ಹಾಗು  ಬ್ರಹ್ಮೇಶ್ವರ ಬಳಿಯ 7 ಕಿರು ಸೇತುವೆಗಳ ನಿರ್ಮಾಣ – ರೂ 19.77 ಕೋಟಿ
  • ರಾ.ಹೆ. 13 ಚಿತ್ರದುರ್ಗ – ಶಿವಮೊಗ್ಗ ರಸ್ತೆ ಮತ್ತು ಹೋಳೆಹೊನ್ನೂರಿನ ಭದ್ರಾ ನದಿಗೆ ಸೇತುವೆ ನಿರ್ಮಾಣ ರೂ 516.96 ಕೋಟಿ
  • ರಾ.ಹೆ. 13 ಚಿತ್ರದುರ್ಗ – ಶಿವಮೊಗ್ಗ ರಸ್ತೆಯ ವಿದ್ಯಾನಗರ ಬಳಿ ಎಲ್.ಸಿ. 45ರಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣ – ರೂ 43.96 ಕೋಟಿ 
  • ರಾ.ಹೆ. 206 ಶಿವಮೊಗ್ಗ ನಗರದ ಬೈಪಾಸ್ ರಸ್ತೆಯಲ್ಲಿ ತುಂಗಾ ನದಿಗೆ ಮತ್ತೊಂದು ಸೇತುವೆ ನಿರ್ಮಾಣ –  ರೂ 20.12 ಕೋಟಿ
  • ರಾ.ಹೆ.206 ಸಾಗರ ಪಟ್ಟಣದಲ್ಲಿ 8.40 ಕಿ.ಮೀ ಉದ್ದದ 4 ಪಥದ ರಸ್ತಯೆ ನಿರ್ಮಾಣ – ರೂ 77.12  ಕೋಟಿ
  • ರಾ.ಹೆ. 206, 766 ಸಿ, 369 ಇ ಗಳಲ್ಲಿ ರೂ ರಸ್ತೆ ಡಾಂಬರೀಕರಣ(ಪಿ.ಆರ್) – ರೂ 47.89 ಕೋಟಿ
  • ರಾ.ಹೆ. 766 (ಸಿ) ಬೈಂದೂರು – ರಾಣೇ ಬೆನ್ನೂರು ರಸ್ತೆಯ ಕೊಲ್ಲೋರು ಪಟ್ಟಣ, ನಾಗೋಡಿ, ಜಯನಗರದಿಂದ ಹೊಸನಗರ , ಬಟ್ಟೆಮಲ್ಲಪ್ಪದಿಂದ ಯಡೇಹಳ್ಳಿ, ಕಿಟ್ಟದಹಳ್ಳಿಯಿಂದ ಮಾಸೂರು , ರಟ್ಟೆಹಳ್ಳಿ ಪಟ್ಟಣ ಹಾಗು ಹಲಗೇರಿ ಬಳಿ ದ್ವಿಪಥದ ರಸ್ತೆ ನಿರ್ಮಾಣ – ರೂ 218.98 ಕೋಟಿ
  • ರಾ.ಹೆ. 169 ಕಿ.ಮೀ 53.775 ರಿಂದ 56.06ರರ ವರೆಗೆ ತೀರ್ಥಹಳ್ಳಿ ತಾಲ್ಲೋಕಿನ ಭಾರತೀಪುರ ಬಳಿಯ ತಿರುವಿನ ಅಭಿವೃದ್ದಿ ಹಾಗು 4 ಪಥದ ರಸ್ತೆ ನಿರ್ಮಾಣ – ರೂ 56.56 ಕೋಟಿ  
  • ರಾ.ಹೆ. 169 ಎ ತೀರ್ಥಹಳ್ಳಿ ತಾಲ್ಲೋಕಿನ ಮೇಗರವಳ್ಳಿಯಿಂದ ಆಗುಂಬೆವರೆಗೆ ದ್ವಿಪಥ ರಸ್ತೆ ನಿರ್ಮಾಣ –  96.30 ಕೋಟಿ
  • ರಾ.ಹೆ. 766 ಸಿ ಹೊಸನಗರದ ಮಾವಿನಕೊಪ್ಪ ದಿಂದ ಆಡುಗೋಡಿರವರೆಗೆ ಬೈಪಾಸ್ ರಸ್ತೆ ನಿರ್ಮಾಣ  ಹಾಗು 2 ಭಾರೀ ಸೇತುವೆಗಳ ನಿರ್ಮಾಣಕ್ಕೆ ಕ್ರಮ – ರೂ. 313.56 ಕೋಟಿ.
  • ರಾ.ಹೆ. 766 ಸಿ ನ ಶಿಕಾರಿಪುರ ಪಟ್ಟಣದ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕ್ರಮ – ರೂ. 66.44 ಕೋಟಿ 
  • ಶಿವಮೊಗ್ಗದಿಂದ  ಆನಂದಪುರ ರವರೆಗೆ 4 ಪಥದ ರಸ್ತೆ ನಿರ್ಮಾಣಕ್ಕೆ – ರೂ.653.00 ಕೋಟಿ
  • ಹೊಸೂರು ಬಳಿ ಎಲ್.ಸಿ. 110 ಕ್ಕೆ ಹಾಗು ತಾಳಗುಪ್ಪ ಬಳಿ ಎಲ್.ಸಿ. 152 ಕ್ಕೆ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ  ರೂ. 198.38 ಕೋಟಿ
  • ರಾ.ಹೆ. 766 ಸಿ ಬೈಂದೂರಿನಿAದ  ದಿಂದ ನಾಗೋಡಿ ರವರೆಗೆ ದ್ವಿಪಥ ರಸ್ತೆ ನಿರ್ಮಾಣಕ್ಕೆ – ರೂ.394.95 ಕೋಟಿ
  • ರಾ.ಹೆ. 169 ಶಿವಮೊಗ್ಗ  ದಿಂದ ಹರಕೆರೆ ವರೆಗೆ 4 ಪಥ ರಸ್ತೆ ನಿರ್ಮಾಣಕ್ಕೆ – ರೂ 38.6 ಕೋಟಿ
  • ರಾ.ಹೆ. 169 ಶಿವಮೊಗ್ಗ ಮುಡಬದಿಂದ  ರಿಂದ ತೀರ್ಥ ಹಳ್ಳಿಯವರೆಗೆ 4 ಪಥದ ರಸ್ತೆ ನಿರ್ಮಾಣಕ್ಕೆ – ರೂ 538.71 ಕೋಟಿ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಸಂಪೂರ್ಣ ಅಭಿವೃದ್ದಿಗೆ ಪ್ರಯತ್ನ ಮುಂದುವರೆಸಲಾಗಿದ್ದು ಯೋಜನೆಗಳು

  • ರಾ.ಹೆ. 766 ಸಿ ನ ಬಾಕಿ ಉಳಿದ ನಾಗೋಡಿಯಿಂದ ನಗರ ಮೂಲಕ ಜಯನಗರದವರೆಗೆ ,ಹೊಸ ನಗರದ ಬಟ್ಟೆ ಮಲ್ಲಪ್ಪ ವರೆಗೆ , ಶಿಕಾರಿಪುರದಿಂದ ಕಿಟ್ಟದಹಳ್ಳಿವರೆಗೆ ಮಾಸೂರಿನಿಂದ ರಟ್ಟೆಹಳ್ಳಿ ವರೆಗೆ, ರಟ್ಟೆ ಹಳ್ಳಿಯಿಂದ ಹಲಗೇರಿ ವರೆಗಿನ ಬಾಗದಲ್ಲಿ ದ್ವಿಪಥ ರಸ್ತೆಯ ನಿರ್ಮಾಣಕ್ಕೆ – ರೂ.700 ಕೋಟಿ.
  • ಶಿವಮೊಗ್ಗ ನಗರದ ಅಶೋಕ ವೃತ್ತ(ಬಸ್ ನಿಲ್ದಾಣ) ಹಾಗು ಆಲ್ಕೊಳ ವೃತ್ತ ದಲ್ಲಿ 2 ಮೇಲ್ಸೇತುವೆಗಳ ನಿರ್ಮಾಣಕ್ಕೆ ಕ್ರಮ.
  • ರಾ.ಹೆ. 369 ಇ ಸಾಗರ ದಿಂದ ಮರಕುಟಕವರೆಗೆ ದ್ವಿಪಥ ರಸ್ತೆ ನಿರ್ಮಾಣಕ್ಕೆ – ರೂ. 700 ಕೋಟಿ.
  • ರಾ.ಹೆ.169ಎ ಆಗುಂಬೆ ಘಾಟಿ ರಸ್ತೆಯ ಅಭಿವೃದ್ದಿಗೆ  ಕ್ರಮ.
  • ಕೊಡಚಾದ್ರಿ ಬೆಟ್ಟದಿಂದ ಕೊಲ್ಲೋರಿಗೆ ಕೇಬಲ್ ಕಾರ್ (3.80 ಕಿ.ಮೀ ಉದ್ದದ ರೋಪ್ ವೇ) ನಿರ್ಮಾಣಕ್ಕೆ – ರೂ.320 ಕೋಟಿ. 
  • ರಾ.ಹೆದ್ದಾರಿ 66 ಮರವಂತೆ ಮತ್ತು ಸೋಮೇಶ್ವರ ಬೀಚ್ ಅಭಿವೃದ್ದಿ  – ರೂ. 25.00 ಕೋಟಿ
  • ರಾ.ಹೆದ್ದಾರಿ 66 ಬೈಂದೂರಿನಿAದ ಕುಂದಾಪುರದವರೆಗೆ ಬರುವ 5 ಪ್ರಮುಖ ರಸ್ತೆಗಳ ಜಂಕ್ಷನ್ ಗಳಿಗೆ ಬದಲಾಗಿ ವೆಹಿಕಲ್ ಅಂಡರ್ ಪಾಸ್ ಗಳ ನಿರ್ಮಾಣಕ್ಕೆ ಕ್ರಮ.
  • ಕುಂದಾಪುರದಿAದ ಗಂಗೊಳ್ಳಿವರೆಗೆ ಸೇತುವೆ ನಿರ್ಮಾಣಕ್ಕೆ ಕ್ರಮ.
  • ಕುಂದಾಪುರ ಬಳಿಯ ಸಮುದ್ರ ದಡದಲ್ಲಿ ಜಟ್ಟಿಗಳ ನಿರ್ಮಾಣಕ್ಕೆ ಕ್ರಮ.

ಪಿ.ಎಂ.ಜಿ.ಎಸ್.ವೈ:  ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಮತ್ತು ಸೇತುವೆ ನಿರ್ಮಾಣ : (ಒಟ್ಟು 567 ಕಿ.ಮಿ. ರಸ್ತೆ ನಿರ್ಮಾಣ ಹಾಗೂ 6 ಸೇತುವೆಗಳ ನಿರ್ಮಾಣ-ರೂ. 375 ಕೋಟಿ)

ವಿಮಾನ ನಿಲ್ದಾಣ:

  • ಶಿವಮೊಗ್ಗದ ಸೋಗಾನೆಯಲ್ಲಿ 3.2 ಕಿ.ಮಿ. ರನ್ ವೇ ಹೊಂದಿರುವ ಸುಸಜ್ಜಿತ ವಿಮಾನ ನಿಲ್ದಾಣ ಸ್ಥಾಪನೆ – ರೂ. 449 ಕೋಟಿ

ಸ್ಮಾರ್ಟ್ಸಿಟಿ ಯೋಜನೆ :

  • ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರೂ. 990 ಕೋಟಿ ವೆಚ್ಚದಲ್ಲಿ 73 ಯೋಜನೆಗಳ ಅನುಷ್ಟಾನ

ರಾಪಿಡ್ ಆಕ್ಷನ್ ಫೋರ್ಸ್ (RAF):

  • ಭದ್ರಾವತಿಯ ಬುಳ್ಳಾಪುರ ಗ್ರಾಮದಲ್ಲಿ 50.29 ಎಕರೆ ಪ್ರದೇಶದಲ್ಲಿ ರಾಪಿಡ್ ಆಕ್ಷನ್ ಫರ‍್ಸ್ ಸ್ಥಾಪನೆ.

ಖೇಲೋ ಇಂಡಿಯಾ :

  • ಶಿವಮೊಗ್ಗದ ವಾಜಪೇಯಿ ಬಡಾವಣೆಯಲ್ಲಿ ಮಲ್ಟಿರ‍್ಪಸ್ ಒಳಾಂಗಣ ಹಾಲ್ ನರ‍್ಮಾಣಕ್ಕೆ ರೂ. 11.83 ಕೋಟಿ.

ಪಾಸ್ ಪೋರ್ಟ್ ಸೇವಾ ಕೇಂದ್ರ :

  • ಪಾಸ್ ಪೋರ್ಟ್ ಸೇವಾ ಕೇಂದ್ರ ಈವರೆಗೆ ಅಂದಾಜು 50,000 ಜನರು ಈ ಸೇವಾ ಕೇಂದ್ರದಿಂದ ಪಾಸ್ ಪೋರ್ಟ್ ಪಡೆದುಕೊಂಡಿದ್ದಾರೆ.

ವಿ..ಎಸ್.ಎಲ್ ಕಾರ್ಖಾನೆ:

  • ಭದ್ರಾವತಿ ವಿ.ಐ.ಎಸ್.ಎಲ್. ಕಾರ್ಖಾನೆಯನ್ನು ಬಂಡವಾಳ ಹೂಡಿಕೆ ಪಟ್ಟಿಯಿಂದ ಹಿಂಪಡೆದಿದ್ದನ್ನು ರದ್ದುಪಡಿಸಲಾಗಿದ್ದು, ಅಗತ್ಯ ಬಂಡವಾಳ ಹೂಡಿಕೆ ಮಾಡಿ ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆ:

17ನೇ ಲೋಕಸಭೆ ಅವಧಿಯಲ್ಲಿ 2019-2024

1.ಬಸ್ ಶೆಲ್ಟರ್ – 93 ಸಂಖ್ಯೆ – 348.70 ಲಕ್ಷ

2. ಹೈಮಾಸ್ಟ್  – 89 ಸಂಖ್ಯೆ  – 138.55 ಲಕ್ಷ

 3. ಶಾಲೆಗಳಿಗೆ – 30 ಸಂಖ್ಯೆ – 313.00 ಲಕ್ಷ

 4. ಕುಡಿಯುವ ನೀರು  – 72 ಸಂಖ್ಯೆ – 161.30 ಲಕ್ಷ

5. ರಸ್ತೆ&ಕಾಲುಸಂಕ – 87 ಸಂಖ್ಯೆ  – 557.00 ಲಕ್ಷ

  6. ಸಭಾ ಭವನ/ರೈತರ ಸೊಸೈಟಿ -31 ಸಂಖ್ಯೆ –           256.00 ಲಕ್ಷ

  7. ಅಂಗವಿಕಲ ವಾಹನ -37 ಸಂಖ್ಯೆ  – 30.95 ಲಕ್ಷ

  8. ರುದ್ರಭೂಮಿ  -11 ಸಂಖ್ಯೆ – 70.00 ಲಕ್ಷ

  9. ಕ್ರೀಡಾಂಗಣ/ಇತರೆ -17 ಸಂಖ್ಯೆ   – 123.00 ಲಕ್ಷ

  10.  ಮಣ್ಣು ಪರೀಕ್ಷೆ ಲ್ಯಾಬ್-  8 ಸಂಖ್ಯೆ  –  40.00 ಲಕ್ಷ

  ಒಟ್ಟು -495 ಕಾಮಗಾರಿಗಳು  -2138.50 ಕೋಟಿ

ಶಿಕ್ಷಣ ಕ್ಷೇತ್ರ

ಕೇಂದ್ರೀಯ ವಿದ್ಯಾಲಯ:

  • ಶಿವಮೊಗ್ಗ ಸಂತೆಕಡೂರಿನಲ್ಲಿ 9.36 ಎಕರೆ ಪ್ರದೇಶದಲ್ಲಿ 18 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದ್ದು, ಪ್ರಸ್ತುತ 750 ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ.
  • ಶಿವಮೊಗ್ಗದ ತೆವರಚಟ್ನಹಳ್ಳಿಯಲ್ಲಿ, ಭದ್ರಾವತಿ ಆರ್.ಎ.ಎಫ್. ಪ್ರದೇಶದಲ್ಲಿ ಹಾಗೂ ಬೈಂದೂರಿನಲ್ಲಿ ಹೊಸದಾಗಿ ಮೂರು ಕೇಂದ್ರೀಯ ವಿದ್ಯಾಲಯಗಳನ್ನು ಪ್ರಾರಂಭಿಸಲು ಪ್ರಸ್ತಾಪಿಸಲಾಗಿದೆ.
  • ಶಿವಮೊಗ್ಗ ಸಮೀಪದ ಸೋಗಾನೆ ಗ್ರಾಮದ 100 ಎಕರೆ ಪ್ರದೇಶದಲ್ಲಿ ಆಯುಷ್‌ ವಿಶ್ವವಿದ್ಯಾಲಯ ಸ್ಥಾಪಿಸಲು ಅಂಗೀಕಾರವಾಗಿದೆ.

•  ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಇರುವಕ್ಕಿಯಲ್ಲಿ 787 ಎಕರೆ ಪ್ರದೇಶದಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯಕ್ಕೆ, “ಕೆಳದಿ ಶಿವಪ್ಪ ನಾಯಕ ವಿಶ್ವವಿದ್ಯಾಲಯ” ಎಂದು ಮರು ನಾಮಕರಣಗೊಂಡಿದೆ.

ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ:

  • ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ಥಾಪನೆ: ಶಿವಮೊಗ್ಗದ ನವುಲೆ ರಾಗಿಗುಡ್ಡದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ಥಾಪನೆಯಾಗಿದ್ದು, ನವುಲೆ ಗ್ರಾಮದಲ್ಲಿ 8.00 ಎಕರೆ ಜಾಗದಲ್ಲಿ ಶಾಸ್ವತವಾಗಿ ಕ್ಯಾಂಪಸ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.

ಸೈನ್ಸ್ ಸೆಂಟರ್ ಕೆಟಗರಿ-2 & ಇನೋವೆಷನ್ ಹಬ್:

  • ಸೈನ್ಸ್ ಸೆಂಟರ್ ಕೆಟಗರಿ-2 & ಇನೋವೆಷನ್ ಹಬ್ ಸ್ಥಾಪನೆಗೆ ಕ್ರಮ: ಶಿವಮೊಗ್ಗದಲ್ಲಿ ಸೈನ್ಸ್ ಸೆಂಟರ್ ಕೆಟಗರಿ-2 & ಇನೋವೆಷನ್ ಹಬ್ ಸ್ಥಾಪನೆಗೆ ಕ್ರಮ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ.

ಆಯುಷ್ ವಿಶ್ವ ವಿದ್ಯಾಲಯ:

  • ಆಯುಷ್ ವಿಶ್ವ ವಿದ್ಯಾಲಯ ಸ್ಥಾಪನೆಗೆ ಕ್ರಮ : ಶಿವಮೊಗ್ಗದ ಸೋಗಾನೆ ಬಳಿ 100 ಎಕರೆ ಭೂಪ್ರದೇಶದಲ್ಲಿ ಆಯುಷ್ ವಿಶ್ವ ವಿದ್ಯಾಲಯ ಸ್ಥಾಪನೆಗೆ ಕ್ರಮ.

ಆರೋಗ್ಯ ಕ್ಷೇತ್ರ

  • ಶಿವಮೊಗ್ಗದ ನವುಲೆ ರಾಗಿಗುಡ್ಡ ಬಳಿ 100 ಹಾಸಿಗೆಗಳ ಇ.ಎಸ್.ಐ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಹಾಗೂ 32 ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ – ರೂ. 100 ಕೋಟಿ.
  • ಸಿಜಿಹೆಚ್‌ಎಸ್‌ ಜನರಲ್‌ ಆಸ್ಪತ್ರೆಯ ನಿರ್ಮಾಣ ಕಾರ್ಯಕ್ಕೂ ಇತ್ತೀಚೆಗಷ್ಟೆ ಸಮ್ಮತಿ ದೊರೆತಿರುವುದು ಸಂತಸದ ವಿಷಯವಾಗಿದೆ.
  • ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಬಳಿ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣ ಕಾರ್ಯಕ್ಕಾಗಿ ಜಾಗದ ಅನುಮತಿ ಪಡೆದಿದ್ದು, ಇದೀಗ  ಕಾಮಗಾರಿ ಪ್ರಗತಿ ಹಂತದಲ್ಲಿದೆ.
  • ಶಿಕಾರಿಪುರದಲ್ಲಿ  ರೂ. 15 ಕೋಟಿ ವೆಚ್ಚದಲ್ಲಿ 2 ಎಕರೆ ಪ್ರದೇಶದಲ್ಲಿ 60 ಬೆಡ್‌ಗಳನ್ನು ಹೊಂದಿರುವ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. 60 ಬೆಡ್‌ಗಳಿರುವ ಈ ಆಸ್ಪತ್ರೆಯು ಮುಂದಿನ ದಿನಗಳಲ್ಲಿ 150 ಬೆಡ್‌ಗಳನ್ನು ಹೊಂದಲಿದೆ. 

ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿ ವೈದ್ಯಕೀಯ ವೆಚ್ಚಕ್ಕೆ ಸಹಾಯಧನ:

  • 17ನೇ ಲೋಕಸಭಾ ಅವಧಿಯಲ್ಲಿ 2019-20 ರಿಂದ ಈವರೆಗೆ 150 ಕ್ಕೂ ಹೆಚ್ಚಿನ ಜನರಿಗೆ 4.50 ಕೋಟಿಗೂ ಅಧಿಕ ಮೊತ್ತದ ವೈದ್ಯಕೀಯ ಪರಿಹಾರದ ಮೊತ್ತ ಕೊಡಿಸಲಾಗಿದೆ.

ಟೆಲಿಕಾಂ ಅಂಡ್ FM ರೇಡಿಯೋ

ಆಕಾಶವಾಣಿ ಕೇಂದ್ರ:

  • ಭದ್ರಾವತಿ ಆಕಾಶವಾಣಿ ಕೇಂದ್ರದಿಂದ 10 ಕಿ.ವ್ಯಾ ಸಾರ‍್ಥ್ಯದ ಎಫ್.ಎಂ. ರೇಡಿಯೋ (ಅಂದಾಜು ಮೊತ್ತ ರೂ. 9.62 ಕೋಟಿ)

 ಹೈಸ್ಪೀಡ್ ಇಂಟರ್ನೆಟ್ ಸಂಪರ್ಕ:

  • ಭಾರತ್ ಉಧ್ಯಮಿ (ಬಿಎನ್‌ಯು) ಸ್ಕೀಂ ಅಡಿಯಲ್ಲಿ ಸಾಗರ ತಾಲ್ಲೂಕಿನಲ್ಲಿ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಬಿ.ಎಸ್.ಎನ್.ಎಲ್. ವತಿಯಿಂದ ಯು.ಎಸ್.ಓ.ಎಫ್. ಅಡಿಯಲ್ಲಿ ಸುಮಾರು 1000 ಹೈಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲಾಗಿದೆ..

ಮೊಬೈಲ್ ಟವರ್ಗಳ ಸ್ಥಾಪನೆ:  

  • ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 261ಕ್ಕೂ ಅಧಿಕ ಬಿ.ಎಸ್.ಎನ್.ಎಲ್. ಮೊಬೈಲ್ ಟವರ್ ಸ್ಥಾಪನೆಗೆ ರ‍್ವೆ ಕರ‍್ಯಕ್ಕೆ ಕೇಂದ್ರದಿಂದ ಅನುಮೋದನೆ ದೊರಕಿದ್ದು, 140ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಟವರ್ ನರ‍್ಮಾಣ ಕರ‍್ಯ ಮುಕ್ತಾಯ ಹಂತದಲ್ಲಿದೆ.

ಪ್ರವಾಸೋಧ್ಯಮ ಅಭಿವೃದ್ಧಿ

  • ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಕಾಡುಕೋಣದ ಸಫಾರಿ ಹಾಗೂ ಅಭಿವೃದ್ಧಿಗೆ ಕ್ರಮ- ರೂ. 14.64 ಕೋಟಿ.
  • ಕೊಡಚಾದ್ರಿ ಮತ್ತು ಕೊಲ್ಲೂರು ನಡುವೆ ರೂ. 350 ಕೋಟಿ ವೆಚ್ಚದಲ್ಲಿ ಕೇಬಲ್ ಕಾರ್ ಸೌಲಭ್ಯ ಕಲ್ಪಿಸಲಾಗುತ್ತಿದೆ.
  • ಜೋಗ್ ಜಲಪಾತದಲ್ಲಿ ಸಾಹಸ ಚಟುವಟಿಕೆಗೆ 85 ಲಕ್ಷ ವೆಚ್ಚದಲ್ಲಿ ಜಿಪ್ ಲೈನ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
  • ರೂ. 81.00 ಕೋಟಿ ವೆಚ್ಚದಲ್ಲಿ ಜೋಗ್ ಜಲಪಾತದ ಸಮಗ್ರ ಅಭಿವೃದ್ಧಿಪಡಿಸಲಾಗುತ್ತಿದೆ.
  • ಉಡುತಡಿಯಲ್ಲಿ ದೆಹಲಿಯಲ್ಲಿನ ಅಕ್ಷರಧಾಮದ ರೀತಿಯಲ್ಲಿ 49 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಗೆ ಕ್ರಮ.

ಆದರ್ಶ ಗ್ರಾಮ ಯೋಜನೆ :

  • ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 2018-19 ರಿಂದ ಜಿಲ್ಲೆಯಲ್ಲಿ 80 ಗ್ರಾಮಗಳಲ್ಲಿ ಮೂಲಭೂತ ಸೌರ‍್ಯಗಳನ್ನು ಒದಗಿಸಲಾಗುತ್ತಿದೆ – ರೂ. 15.40 ಕೋಟಿ.
  • ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಮತ್ತು ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ವಿವಿಧ ಮೂಲಭೂತ ಸೌರ‍್ಯ ಕಾಮಗಾರಿಗಳನ್ನು ನರ‍್ವಹಿಸಲಾಗುತ್ತಿದೆ. 

75 ನೇ ಅಮೃತ ಮಹೋತ್ಸವದ ಅಂಗವಾಗಿ :

  • ಶಿವಮೊಗ್ಗ ಲೋಕಸಭಾ ಕ್ಷೇತ್ರದ 75 ಕೆರೆಗಳ ಅಭಿವೃದ್ದಿ.
  • ಪಿ.ಎಂ.ಶ್ರೀ ಯೋಜನೆಯಡಿ 9 ಸರ್ಕಾರಿ ಶಾಲೆಗಳ ಅಭಿವೃದ್ಧಿ – ರೂ. 4.77 ಕೋಟಿ
  • ಅಮೃತ್ ಭಾರತ್ ಯೋಜನೆಯಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ (24.36 ಕೋಟಿ), ಸಾಗರ (26.43 ಕೋಟಿ) ಮತ್ತು ತಾಳಗುಪ್ಪ (27.86 ಕೋಟಿ) ವೆಚ್ಚದಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿಪಡಿಸಲಾಗುತ್ತಿದೆ.


ನೀರಾವರಿ ಯೋಜನೆಗಳು

  • ಶಿವಮೊಗ್ಗ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಹತ್ತಿರ (ಅರಕೆರೆ ಹತ್ತಿರ )ತುಂಗಾ ನದಿಯಿಂದ ನೀರನ್ನೆತ್ತಿ ಕುಂಸಿ ಮತ್ತು ಹಾರನಹಳ್ಳಿ ಹೋಬಳಿಯ 75 ಕೆರೆಗಳಿಗೆ ನೀರು ತುಂಬಿಸುವ ಯೋಜನೆ –  ರೂ. 250.00 ಕೋಟಿ
  • ಉಡುಗಣಿ-ತಾಳಗುಂದ-ಹೊಸೂರು ಹೋಬಳಿಯ 290 ಕೆರೆ ತುಂಬಿಸುವ ಯೋಜನೆ- ರೂ. 890 ಕೋಟಿ.
  • ಕಸಬಾ ಏತ ನೀರಾವರಿ ಯೋಜನೆಯಡಿ 17 ಗ್ರಾಮಗಳ ಸುಮಾರು 3430 ಹೆಕ್ಟೆರ್ ಪ್ರದೇಶಕ್ಕೆ ನೀರು ಕಲ್ಪಿಸುವುದು – ರೂ. 125 ಕೋಟಿ
  • ಸೊರಬ ತಾಲ್ಲೂಕಿನ ಮೂಡಿ ಗ್ರಾಮದ ಸಮೀಪ ವರದಾ ನದಿಯಿಂದ 38 ಗ್ರಾಮಗಳ 66 ಕೆರೆಗಳಿಗೆ ನೀರು ತುಂಬಿಸುವ ಯೋಜನೆ- ರೂ. 285 ಕೋಟಿ.
  • ಸೊರಬ ತಾಲ್ಲೂಕಿನ ಮೂಗೂರು ಗ್ರಾಮದ ಸಮೀಪ ವರದಾ ನದಿಯಿಂದ 16 ಗ್ರಾಮಗಳ 31 ಕೆರೆಗಳಿಗೆ ನೀರು ತುಂಬಿಸುವ ಯೋಜನೆ – ರೂ. 105.00 ಕೋಟಿ.
  • ಸೊರಬ ತಾಲ್ಲೂಕಿನ ಕಛವಿ ಗ್ರಾಮದ ಸಮೀಪ ವರದಾ ನದಿಯಿಂದ 16 ಗ್ರಾಮಗಳ  32 ಕೆರೆಗಳಿಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ನೀರು ತುಂಬಿಸುವ ಯೋಜನೆ-ರೂ. 16.50 ಕೋಟಿ.
  • ಶಿವಮೊಗ್ಗದ ಮಂಡಗದ್ದೆ ಬಳಿ ತುಂಗಾ ನದಿಗೆ ತೀರ್ಥಹಳ್ಳಿ ತಾಲ್ಲೂಕಿನ ರಾಮಯ್ಯನ ಕೆರೆ, ಸೂರಯ್ಯನ ಕೆರೆ, ತೋಟದ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ- ರೂ. 8.00 ಕೋಟಿ.
  • ಶಿವಮೊಗ್ಗ ತಾಲ್ಲೂಕಿನ ಹೊಳೆಹನಸವಾಡಿ ಹತ್ತಿರ ತುಂಗ ನದಿಯಿಂದ ಏತ ನೀರಾವರಿ ಮೂಲಕ 29 ಕೆರೆಗೆಳಿಗೆ ನೀರು ತುಂಬಿಸುವ ಯೋಜನೆ: ರೂ. 29.00 ಕೋಟಿ.
  • ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸೌಪರ್ಣಿಕ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ -ರೂ 83.00 ಕೋಟಿ
  • ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸೌಕೂರು ಏತ ನೀರಾವರಿ ಯೋಜನೆ- ರೂ 73.71 ಕೋಟಿ
  • 11. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದಾಪುರ ಏತ ನೀರಾವರಿ ಯೋಜನೆ                          – ರೂ 165.00 ಕೋಟಿ.
  • ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ಕಿಂಡಿ ಅಣೆಕಟ್ಟು ಯೋಜನೆ – ರೂ. 82.55 ಕೋಟಿ.
  • ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸುಬ್ಬರಾಡಿ ಕಿಂಡಿ ಅಣೆಕಟ್ಟು ಯೋಜನೆ – ರೂ. 35.00 ಕೋಟಿ

ತುಂಗಾ ನದಿಗೆ ಪ್ರವಾಹ ತಡೆಗೋಡೆ ನಿರ್ಮಾಣ

  • ರೂ.70 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ನಗರದ ಹಾಗೂ ಮತ್ತೂರು ಗ್ರಾಮದಲ್ಲಿ ತುಂಗಾ ನದಿಗೆ ತಡೆಗೋಡೆ ನಿರ್ಮಾಣ.

ನೀರಾವರಿ ಇಲಾಖೆಯ ಮೂಲಕ ರಸ್ತೆ, ಸಮುದಾಯ ಭವನ :

  • ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಾದ್ಯಂತ ರೂ. 1210 ಕೋಟಿ ವೆಚ್ಚದಲ್ಲಿ 2610 ವಿವಿಧ ರಸ್ತೆಗಳ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಬಂದರು ಅಭಿವೃದ್ದಿರೂ 501.00 ಕೋಟಿ

  • ಅಂತರರಾಷ್ಟ್ರೀಯ ಮಟ್ಟದ ಬಹುಪಯೋಗಿ ಬಂದರು ನಿರ್ಮಾಣ- ರೂ 228.00 ಕೋಟಿ (ಕೇಂದ್ರ)
  • ಗoಗೊಳ್ಳಿಯಲ್ಲಿ ಕೋಸ್ಟಲ್ ಬರ್ತ್ಅಂತರಾಷ್ಟ್ರೀಯ ನಿರ್ಮಾಣ – ರೂ 96.00 ಕೋಟಿ (ಕೇಂದ್ರ)ಗoಗೊಳ್ಳಿಯಲ್ಲಿ ಕೋಸ್ಟಲ್ ಬರ್ತ್ ನಿರ್ಮಾ – ರೂ 96.00 ಕೋಟಿ (ಕೇಂದ್ರ)ಗoಗೊಳ್ಳಿಯಲ್ಲಿ ಕೋಸ್ಟಲ್ ಬರ್ತ್ಅಂತರಾಷ್ಟ್ರೀಯ ನಿರ್ಮಾಣ – ರೂ 96.00 ಕೋಟಿ (ಕೇಂದ್ರ)
  • ಕೋಡೇರಿಯಲ್ಲಿ ಕಿರು ಬಂದರು ನಿರ್ಮಾಣ – ರೂ 63.00 ಕೋಟಿ (ರಾಜ್ಯ)
  • ಗಂಗೊಳ್ಳಿ ಬಂದರು ಜಟ್ಟಿ ಅಭಿವೃದ್ದಿ – ರೂ 12.00 ಕೋಟಿ (ರಾಜ್ಯ)
  • ಮರವಂತೆಯಲ್ಲಿ ಹೊರಬಂದರು ನಿರ್ಮಾಣ ಮೊದಲ ಹಂತ -ರೂ 45.00 ಕೋಟಿ (ರಾಜ್ಯ)
  • ಮರವಂತೆಯಲ್ಲಿ ಹೊರಬಂದರು ನಿರ್ಮಾಣ ಎರಡನೆ ಹಂತ   -ರೂ85.00 ಕೋಟಿ (ರಾಜ್ಯ)

ಸಾಮಾಜಿಕ ಕಾರ್ಯಚಟುವಟುಕೆಗಳು :

  1. ದಿವ್ಯಾಂಗರಿಗೆ ಸಹಾಯ ಹಸ್ತ

ಶಿವಮೊಗ್ಗ ಜಿಲ್ಲೆಯ 1020 ದಿವ್ಯಾಂಗರನ್ನು ಗುರುತಿಸಿ, ಅವರಿಗೆ ಒಟ್ಟು 74.99 ಲಕ್ಷ ರೂಪಾಯಿ ಮೊತ್ತದ 67 ಟ್ರೈಸೈಕಲ್, 208 ವ್ಹೀಲ್‌ಚೇರ್, 14 ಸಿ.ಪಿ. ಚೇರ್, 426 ಊರುಗೋಲು, 87 ವಾಕಿಂಗ್ ಸ್ಟಿಕ್, 59 ರೋಲೇಟರ್, 25 ಸ್ಮಾರ್ಟ್ ಕೇನ್, 7 ಸ್ಮಾರ್ಟ್‌ಫೋನ್, 502 ಶ್ರವಣ ಸಾಧನ, 502 ಮಲ್ಟಿ ಸೆನ್ಸರಿ ಇನ್‌ಕ್ಲೂಸಿವ್ ಎಜುಕೇಷನಲ್ ಕಿಟ್, 4 ಎಡಿಎಲ್ ಕಿಟ್, 143 ಕೃತಕ ಅಂಗಗಳನ್ನು ಜೋಡಿಸುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, ಅಡಿಪ್ ಅಡಿಯಲ್ಲಿ ದಿವ್ಯಾಂಗರಿಗೆ ಮತ್ತು ಆರ್‌ವಿವೈ ಯೋಜನೆಯಡಿ ಹಿರಿಯ ನಾಗರಿಕರಿಗೆ 500ಕ್ಕೂ ಅಧಿಕ ವಿವಿಧ ಸಲಕರಣೆಗಳನ್ನು ಹಾಗೂ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ 30 ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದೆ.

2. ಅಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್: (PES Trust & Seva Bharati)

2019-20ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಡಿ ವಾಜಪೇಯಿ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ  ಹಾಗೂ ಮಾಜಿ ಮುಖ್ಯ ಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪರವರ ದಿನಾಚರಣೆ ಸಂದರ್ಭದಲ್ಲಿ 1ಲಕ್ಷದ 74 ಸಾವಿರ ಜನರಿಗೆ  ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಕಾರ್ಡ್ಗಳನ್ನು ಉಚಿತವಾಗಿ ವಿತರಿಸಲಾಗಿದೆ.

3. ಕೋವಿಡ್ ಕೊರೋನಾ ಸಂದರ್ಭ:

2 ಲಕ್ಷಕ್ಕೂ ಅಧಿಕ ಮಾಸ್ಕ್ ವಿತರಣೆ, 45ಸಾವಿರ ಜನರಿಗೆ ಪುಡ್ ಕಿಟ್ ವಿತರಣೆ, ಶಿವಮೊಗ್ಗ ಹಾಗೂ ಶಿಕಾರಿಪುರದಲ್ಲಿ ಆಕ್ಷಿಜನ್ ಘಟಕಗಳ ಸ್ಥಾಪನೆ, ಭದ್ರಾವತಿ ವಿ.ಐ.ಎಸ್.ಎಲ್. ನಲ್ಲಿ ನಿಂತುಹೋಗಿದ್ದ ಆಕ್ಷಿಜನ್ ಘಟಕವನ್ನು ಪುನರ್ ಪ್ರಾರಂಭ, ಸಂಸದರ ನಿಧಿಯಿಂದ 4 ಆತ್ಯಾಧುನಿಕ ಅಂಬ್ಯುಲೆನ್ಸ್ಗಳನ್ನು ನೀಡಲಾಗಿದೆ

ಅಭಿವೃದ್ಧಿಯ ಹರಿಕಾರ ಹೆಮ್ಮೆಯ ಸಂಸದ ಬಿವೈ ರಾಘವೇಂದ್ರರವರಿಗೆ ಹುಟ್ಟು ಹಬ್ಬದ ಶುಭಾಶಯಗಳು

🖋 ಲೋಕೇಶ್ ಜೆ, ನ್ಯೂಸ್ ನೆಕ್ಷ್ಟ್ ಕನ್ನಡ ಡಿಜಿಟಲ್ ಮಾಧ್ಯಮ

error: Content is protected !!