ಐ.ಸಿ.ಎ.ಆರ್.-ಕೃಷಿ ವಿಜ್ಞಾನಕೇಂದ್ರ, ಶಿವಮೊಗ್ಗದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಳಾದ ಅಣಬೆ ಬೇಸಾಯ ಮತ್ತು ಸಂಸ್ಕರಣೆ, ಸಾವಯವ ಮತ್ತು ಸಮಗ್ರಕೃಷಿಯಲ್ಲಿ ಎರೆಹುಳು, ದ್ರವರೂಪ ಹಾಗೂ ಜೈವಿಕ ಗೊಬ್ಬರಗಳ ತಯಾರಿಕೆ ಮತ್ತು ಮೌಲ್ಯವರ್ಧಿತ ಬೇಕರಿ ಉತ್ಪನ್ನಗಳ ತಯಾರಿಕೆಗಳನ್ನು ಆರು ದಿನಗಳ ಕಾಲಆಯೋಜಿಸಲಾಗಿದೆ


ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತುತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕುಲಪತಿಗಳಾದ ಡಾ. ಆರ್.ಸಿ.ಜಗದೀಶ್‌ ನೆರವೇರಿಸಿ ಮಾತನಾಡುತ್ತಾ ರೈತ ಮತ್ತು ರೈತ ಮಹಿಳೆಯರ ಪ್ರಗತಿಗಾಗಿ ನಮ್ಮ ವಿಶ್ವವಿದ್ಯಾಲಯದಲ್ಲಿ ವಿವಿಧ ವಿಷಯಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ವರ್ಷವಿಡೀ ಹಮ್ಮಿಕೊಳ್ಳಲಾಗುತ್ತಿದ್ದು, 6 ದಿನಗಳ ವಿವಿಧ ತರಬೇತಿಯಲ್ಲಿ ವಿವಿಧ ಅಣಬೆ ಪ್ರಬೇಧಗಳ ಬೇಸಾಯ ಪದ್ಧತಿ ಮತ್ತು ಬೀಜೋತ್ಪಾದನೆ ವಿಧಾನವನ್ನು ಪ್ರಾಯೋಗಿಕವಾಗಿ ವಿವರಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಎರೆಹುಳು ಗೊಬ್ಬರ, ದ್ರವರೂಪ ಹಾಗೂ ಜೈವಿಕ ಗೊಬ್ಬರಗಳ ತಯಾರಿಕೆಯನ್ನು ವಿವರಿಸಲಾಗುವುದು.ಅಲ್ಲದೆ, ಮೌಲ್ಯವರ್ಧಿತ ಬೇಕರಿ ಉತ್ಪನ್ನಗಳ ತಯಾರಿಕೆಯನ್ನು ಪ್ರಾಯೋಗಿಕವಾಗಿ ತಿಳಿಸಲಾಗುವುದರಿಂದ ಶಿಬಿರಾರ್ಥಿಗಳು ಈ ತರಬೇತಿಯ ಸದುಪಯೋಗ ಪಡೆದುಕೊಂಡುತಮ್ಮಆರ್ಥಿಕತೆಯನ್ನು ಸದೃಢಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು

.ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಕೆ. ಟಿ. ಗುರುಮೂರ್ತಿ, ವಿಸ್ತರಣಾ ನಿರ್ದೇಶಕರು, ಕೆ.ಶಿ.ನಾ.ಕೃ.ತೋ.ವಿ.ವಿ., ಶಿವಮೊಗ್ಗ ಮಾತನಾಡುತ್ತಾ, ಸದರಿ ತರಬೇತಿಗಳನ್ನು ಪ್ರಾಯೋಗಿಕವಾಗಿ ನಡೆಸಲಾಗುವುದರಿಂದ ಭಾಗವಹಿಸಿದ ಶಿಬಿರಾರ್ಥಿಗಳು ಈ ತರಬೇತಿಯಲ್ಲಿ ಕಲಿತ ಕೌಶಲ್ಯತೆಯನ್ನು ತಮ್ಮ ನಿರಂತರ ಆದಾಯಕ್ಕಾಗಿ ಅಳವಡಿಸಿಕೊಂಡು ಸಣ್ಣ ಉದ್ದಿಮೆಯನ್ನು ಪ್ರಾರಂಭಿಸಿ, ಆರ್ಥಿಕವಾಗಿ ಸ್ವಾವಲಂಭಿಯಾಗುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಹ ಸಂಶೋಧನಾ ನಿರ್ದೇಶಕರಾದ ಡಾ.ಎಸ್.ಪ್ರದೀಪ್, ಸಹ ವಿಸ್ತರಣಾ ನಿರ್ದೇಶಕರಾದ ಡಾ. ಬಿ.ಸಿ.ಹನುಮಂತಸ್ವಾಮಿ, ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ಸಿ.ಸುನಿಲ್‌, ಸುಧಾರಾಣಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಒಟ್ಟು ೧೧೦ ಶಿಬಿರಾರ್ಥಿಗಳು ಪಾಲ್ಗೊಂಡಿದ್ದು.ಮುಂದಿನ ೫ ದಿನಗಳಲ್ಲಿ ವಿವಿಧ ತರಬೇತಿಗಳನ್ನು ಪ್ರಾಯೋಗಿಕವಾಗಿ ನಡೆಸಲಾಗುವುದು.

error: Content is protected !!