ಶಿವಮೊಗ್ಗ,ಫೆ.1 : ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ನಾಗರೀಕ ಸೌಲಭ್ಯಕ್ಕಾಗಿ ಪ್ರಾಧಿಕಾರ/ಖಾಸಗಿ ಬಡವಣೆಯಲ್ಲಿ ಮೀಸಲಿರಿಸಿದ ನಾಗರೀಕ ಸೌಲಭ್ಯ ನಿವೇಶನಗಳನ್ನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1960 ರಡಿಯಲ್ಲಿ ನೋಂದಾಣಿಯಾದ ಸಹಕಾರ ಸಂಘ ಅಥವಾ ಸಂಘಗಳಿAದ ನೋಂದಾಯಿತ ಶೈಕ್ಷಣಿಕ, ಧಾರ್ಮಿಕ ಚಾರಿಟಬಲ್ ಟ್ರಸ್ಟ್ನವರಿಂದ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆ ನಿಯಮ 1991 ರ ಪ್ರಕಾರ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡುವ ಸಂಬAಧ ಅರ್ಜಿಯನ್ನು ಆಹ್ವಾನಿಸಲಾಗಿದೆ.
ನೊಂದಾಣಿಗಾಗಿ ಅರ್ಜಿ ನಮೂನೆ-1, ನಿವೇಶ ಮಂಜೂರಾತಿ ಅರ್ಜಿ ನಮೂನೆ-2 ಗಳನ್ನು ಫೆ.2 ರಿಂದ 15 ರ ಮಧ್ಯಾಹ್ನ 3 ಗಂಟೆವರೆಗೆ ಅವಕಾಶವಿದ್ದು, ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಕಚೇರಿಯಲ್ಲಿ ರೂ.500 ಶುಲ್ಕ ಪಾವತಿಸಿ ಪಡೆಯಬೇಕು. ಅರ್ಜಿಯನ್ನು ಮಾ.3 ರ ಸಂಜೆ 5 ಗಂಟೆಯೊಳಗೆ ಭರ್ತಿ ಮಾಡಿ ಖುದ್ದಾಗಿ ಕಚೇರಿಗೆ ಅಥವಾ ನೋಂದಣಿ ಅಂಚೆಯ ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ www.shivamogga.uda.in ನಲ್ಲಿ ಅಥವಾ ಪ್ರಾಧಿಕಾರದ ಕಚೇರಿಗೆ ಸಂಪರ್ಕಿಸಬಹುದು ಎಂದು ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಹಾಗೂ ಆಯುಕ್ತರಾದ ವಿಶ್ವನಾಥ ಪಿ.ಮುದಜ್ಜಿ ತಿಳಿಸಿದ್ದಾರೆ.

Leave a Reply

error: Content is protected !!