ಶಿವಮೊಗ್ಗ :- ಮಲೆನಾಡಿನ ವಿಶಿಷ್ಟ ಜನಪದ ಕಲೆಗಳಲ್ಲಿ ಒಂದಾದ ಅಂಟಿಗೆ ಪಂಟಿಗೆ ಕಲಾ ಪ್ರದರ್ಶನ ಏರ್ಪಡಿಸಲು ತೀರ್ಮಾನ ಮಾಡಲಾಗಿದೆ.
ಪ್ರತಿವರ್ಷ ದಂತೆ ನಗರದ ಆಯ್ದ ಮನೆಗಳಿಗೆ ಭೇಟಿ ನೀಡಿ ಜ್ಯೋತಿ ಬೆಳಗಿಸುತ್ತ ಕಲಾವಿದರು ಹಾಡಿನ ಮೂಲಕ ಹರಸುವ ಈ ವಿಶಿಷ್ಟ ಕಲಾ ಪ್ರದರ್ಶನ ಏರ್ಪಡಿಸಲಾಗುವುದು. ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಶ್ರೀ ಆದಿಚುಂಚನಗಿರಿ ಮಠದ ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನ ಮಾಡಲಾಗಿದೆ.
ಆಸಕ್ತಿಯಿರುವ ಎಲ್ಲಾ ಕನ್ನಡದ ಮನಸ್ಸುಗಳು ಈ ಕಾರ್ಯಕ್ರಮದ ಯಶಸ್ವಿಗೆ ನೆರವಾಗಲು ಡಿ. ಮಂಜುನಾಥ ಕೋರಿದ್ದಾರೆ.
ಆಸಕ್ತರು ಡಿ. ಮಂಜುನಾಥ ದೂರವಾಣಿ ಸಂಖ್ಯೆ : 9449552795, ಶಿವಪ್ಪಮೇಸ್ಟ್ರು : 9449911652, ಮಹಾದೇವಿ : 8073052370, ಸ್ವಾಮಿ . ಎಂ. ಎಂ. 9448856911, ಡಿ. ಗಣೇಶ್ : 9901331667 ಇವರನ್ನು ಸಂಪರ್ಕ ಮಾಡಿ ಮಾಹಿತಿ ನೀಡಲು ಕೋರುತ್ತೇವೆ.
ಅಕ್ಟೋಬರ್ ೩೧ ಗುರುವಾರ ರಾತ್ರಿ ನರಕ ಚತುರ್ದಶಿ ದಿನ ನಿಮ್ಮ ಮನೆಬಾಗಿಲಿಗೆ ಬರುತ್ತೇವೆ.