
ಶಿವಮೊಗ್ಗ : ಕೆಳದಿ ಸಂಸ್ಥಾನದ ಕೋಟೆಯ ಮಾದರಿಯಲ್ಲಿ ಕೆ.ವಿ.ಕೆ. ಸ್ತಬ್ಧ ಚಿತ್ರವನ್ನು ಸ್ಥಾಪಿಸಿ, ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗದಲ್ಲಿ
ತರಬೇತಿಗೊಂಡ ಗೃಹ ಮಟ್ಟದ ಉದ್ಯಮಿಗಳನ್ನು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಕನಸಿನ ಕೂಸು ಆದ. ಪ್ರತ್ಯೇಕವಾಗಿ ರೈತ-ರೈತಮಹಿಳೆಯರಿಗಾಗಿ ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆಯ ಅಂಗವಾಗಿ “ಕಿಸಾನ್ ಸಮೃದ್ಧಿ” ಎಂಬ ರಾಷ್ಟ್ರೀಯ ಬ್ಯಾಂಡ್‌ನಲ್ಲಿ ಪ್ಯಾಕಿಂಗ್, ಬ್ಯಾಂಡಿಂಗ್, ಆಹಾರದ ಗುಣಮಟ್ಟದ ಪ್ರಾಧಿಕಾರದ ನೊಂದಣಿ ಮಾಡಿಸಿ, ಉತ್ಪನ್ನಗಳನ್ನು ಅಭಿವೃದ್ಧಿ, ಜೀವಿತಾವಧಿಯ ಕುರಿತು ತಾಂತ್ರಿಕ ಸಲಹೆಯನ್ನು ನೀಡುತ್ತಾ, ಜಿಲ್ಲಾಮಟ್ಟದಲ್ಲಿ ಎಲ್ಲಾ ತಾಲ್ಲೂಕುಗಳಿಂದ ತರಬೇತಿಗೊಂಡ 10 ಉದ್ಯಮಿಗಳ ಉತ್ಪನ್ನಗಳನ್ನು ಮಾರಾಟಮಾಡಲು ಮೊಟ್ಟಮೊದಲ ಬಾರಿಗೆ
ಮಳಿಗೆಗಳ ವ್ಯವಸ್ಥೆ ಮಾಡಿ ಅವರ ಪರಿಶ್ರಮಕ್ಕೆ ತಕ್ಕಂತಹ ಸಾಧನೆಯ ಮಾರ್ಗವನ್ನು ತೋರುತ್ತಿರುವುದು ಶಿವಮೊಗ್ಗ
ಕೆ.ವಿ.ಕೆ.ಯ ಹೆಮ್ಮೆ.

ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಹಣ್ಣು ಮತ್ತು ತರಕಾರಿಗಳ ತಾಕು, ಸಾವಿರಾರು ಜನರನ್ನು
ಆಕರ್ಷಿಸುತ್ತಿದ್ದು, ತನ್ನಲ್ಲಿ ಕೈಬೀಸಿ ಕರೆಯುತ್ತಿದೆ. ವಿಶೇಷವಾಗಿ ಸ್ಥಳೀಯ ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ವಿದೇಶಿ ತರಕಾರಿಗಳಾದ ಝುಕಿನಿ, ಕೆಂಪು ಕೋಸು, ಸ್ಟೇಟಿಂಗ್ ಬ್ರಕೋಲಿ, ಸೆಲೆರಿ, ಲೀಕ್, ಫೆನಲ್, ರೆಡ್ ಲೆಟ್ಯೂಸ್ಹಾ ಗೂ ಅಲಂಕಾರಿಕ ಹೂವಿನ ಸಸ್ಯಗಳ ತಾಕುಗಳು ಗಣ್ಯರು ಹಾಗೂ ಸಾರ್ವಜನಿಕರನ್ನು ಆಕರ್ಷಿಸುತ್ತಿದ್ದು ಮಾಹಿತಿಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ.

ಕೆ.ವಿ.ಕೆ. ಮಳಿಗೆಯಲ್ಲಿನ ಮೈಕ್ರೋಗೀನ್‌ಗಳು ಪ್ರತಿಯೊಬ್ಬರೂ ಮುಟ್ಟಿ ಆನಂದಿಸಿ, ಮಾಹಿತಿ ಪಡೆದು ಸೊಪ್ಪಿನ ಬೀಜಗಳು, ತರಕಾರಿ ಬೀಜಗಳು ಹೀಗೂ ಬೆಳೆಯಬಹುದೇ ಎಂದು ಅಚ್ಚರಿಮೂಡಿಸುತ್ತಿದೆ. ಅಲ್ಲದೆ, ಪಶುಗಳಿಗೆ ರಸಮೇವು, ಹೈಡೋಪೋನಿಕ್ಸ್‌ನ ಮಾದರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು, ಇವುಗಳ ಬಗ್ಗೆ ರೈತರು ಹೆಚ್ಚಿನ ಮಾಹಿತಿ ಪಡೆಯುವಲ್ಲಿ ಆಸಕ್ತರಿರುವುದು ಸಂತಸದ ವಿಷಯ.

ಅಲ್ಲದೆ, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಉತ್ಪನ್ನಗಳಾದ ಸಿರಿಧಾನ್ಯಗಳ ಹೆಲ್ತ್ ಮಿಕ್ಸ್‌ಗಳು ಎರಡು ವಿವಿಧ ಪರಿಮಳಗಳಾದ ಚಾಕೋಲೇಟ್ ಮತ್ತು ಬದಾಮಿ ಪ್ಲೇವರ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಅಲ್ಲದೆ, ಉತ್ಕೃಷ್ಟ ಮಟ್ಟದ ಜೇನುತುಪ್ಪವನ್ನೂ ಕೂಡ ಮಳಿಗೆಯಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಈ ಕೃಷಿಮೇಳ ಇನ್ನೂ ಎರಡು ದಿನಗಳ ಕಾಲ ಜರುಗಲಿದ್ದು, ರೈತರು, ರೈತಮಹಿಳೆಯರು ಹಾಗೂ ಸಾರ್ವಜನಿಕರು ಕೃಷಿಮೇಳಕ್ಕೆ ಆಗಮಿಸಿ, ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ