ಶಿವಮೊಗ್ಗ, ಅಕ್ಟೋಬರ್ 06, : ಸಾರ್ವತ್ರಿಕ ಲಸಿಕೆ ಪಡೆಯುವಲ್ಲಿ ವಂಚಿತರಾದ, ಬಿಟ್ಟು ಹೋದ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ನೀಡುವ 3ನೇ ಸುತ್ತಿನ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಮತ್ತು ಮೀಸಲ್ಸ್ ರುಬೆಲ್ಲಾ ನಿರ್ಮೂಲನೆ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಬೇಕೆಂದು ಆರ್ಸಿಹೆಚ್ಓ ಡಾ. ನಾಗರಾಜ ನಾಯ್ಕ್ ಮನವಿ ಮಾಡಿದರು.
ಮಹಾನಗರಪಾಲಿಕೆ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ 3ನೇ ಸುತ್ತಿನ ಮಿಷನ್ ಇಂದ್ರಧನುಷ್ 5.0(ಐಎಂಐ 5.0) ಕುರಿತಾದ ನಗರ ಟಾಸ್ಕ್ಫೋರ್ಸ್ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲಸಿಕೆಗಳಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ವಿರುದ್ದ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಅನೇಕ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಗಳನ್ನು ಕಾಲ ಕಾಲಕ್ಕೆ ಪಡೆಯದೇ ವಂಚಿತರಾದ 0 ಯಿಂದ 5 ವರ್ಷದೊಳಗಿನ ಮಕ್ಕಳನ್ನು ಹಾಗೂ ಗರ್ಭಿಣಿ ಸ್ತ್ರೀಯರನ್ನು ಗುರಿಯಾಗಿಸಿಕೊಂಡು ಅವರಿಗೆ ಬಿಟ್ಟು ಹೋದ ಲಸಿಕೆಗಳನ್ನು ಪೂರ್ಣಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.
3ನೇ ಸುತ್ತಿನ ಲಸಿಕಾಕರಣ ಅ.9 ರಿಂದ 14 ರವರೆಗೆ ಜಿಲ್ಲೆಯಾದ್ಯಂತ ನಡೆಯುವುದು. 2ನೇ ಸುತ್ತಿನಲ್ಲಿ ನಗರದಲ್ಲಿ ಶೇ.99 ಲಸಿಕಾಕರಣ ಆಗಿದೆ.
ಹೈರಿಸ್ಕ್ಏರಿಯಾಗಳಾದ ವಲಸಿಗರ ವಾಸಸ್ಥಳ, ಕಟ್ಟಡ ನಿರ್ಮಾಣ ಸ್ಥಳಗಳು, ನಗರ, ನಗರ ಸುತ್ತಮುತ್ತ ಪ್ರದೇಶಗಳು, ಸ್ಲಂ ಗಳಲ್ಲಿ ಲಸಿಕೆ ಬಿಟ್ಟು ಹೋದ ಮಕ್ಕಳು ಮತ್ತು ಗರ್ಭಿಣಿಯನ್ನು ಗುರುತಿಸಿ ಲಸಿಕೆ ಹಾಕಲಾಗುವುದು. ಮೀಸಲ್ಸ್ ರುಬೆಲ್ಲಾವನ್ನು ಪಲ್ಸ್ ಪೊಲೀಯೋ ರೀತಿಯಲ್ಲಿ ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವತ್ರಿಕ ಲಸಿಕಾಕರಣದಲ್ಲಿ ಎಂಆರ್ ಲಸಿಕೆಗಳನ್ನು ಅರ್ಹರೆಲ್ಲರಿಗೂ ನೀಡಲಾಗುತ್ತಿದೆ.
ಜ್ವರ ಮತ್ತು ದದ್ದು ಪ್ರಕರಣಗಳು ಕಂಡು ಬಂದರೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮೀಸಲ್ಸ್ ರುಬೆಲ್ಲಾ ಪ್ರಕರಣ ಕಂಡು ಬಂದರೆ ನಿರ್ಲಕ್ಷ್ಯ ಮಾಡಬಾರದು. ಮಕ್ಕಳು ಮತ್ತು ವಿಶೇಷವಾಗಿ ಗರ್ಭಿಣಿ ಸ್ತ್ರೀಯರಲ್ಲಿ ಇದು ಹೆಚ್ಚು ತೊಂದರೆ ನೀಡುತ್ತದೆ. ಹುಟ್ಟುವ ಮಕ್ಕಳು ನ್ಯೂನ್ಯತೆಯಿಂದ ಹುಟ್ಟಬಹುದು ಆದ್ದರಿಂದ ಎಚ್ಚರಿಕೆಯಿಂದಿದ್ದು ಜ್ವರ ದದ್ದು ಪ್ರಕರಣವನ್ನು ಪರೀಕ್ಷೆಗೆ ಒಳಪಡಿಸಬೇಕೆಂದರು.
ಗ್ರಾಮೀಣ ಭಾಗದಲ್ಲಿ ಲಸಿಕಾಕರಣ ಉತ್ತಮವಾಗಿ ಆಗುತ್ತಿದೆ. ನಗರ ಪ್ರದೇಶಗಳಲ್ಲಿ ಯಶಸ್ವಿಯಾಗಿ ಆಗಲು ಪಾಲಿಕೆ, ಸ್ವಯಂ ಸೇವಾ ಸಂಘಗಳು, ವಿವಿಧ ಇಲಾಖೆಗಳು ಸಹಕರಿಸಬೇಕೆಂದ ಅವರು ಎಲ್ಲ ಪ್ರಾಥಮಿಕ ಕೇಂದ್ರಗು, ಉಪ ಕೇಂದ್ರಗಳು, ಮೆಗ್ಗಾನ್ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆಗಳನ್ನು ಹಾಕಲಾಗುತ್ತದೆ. ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ವಿರುದ್ದ ಎಚ್ಚರಿಕೆಯಿಂದ ಇರಬೇಕು. ಡೆಂಗ್ಯು, ಚಿಕುನ್ ಗುನ್ಯ ಪ್ರಕರಣಗಳು ಹೆಚ್ಚುತ್ತಿವೆ. ಚಿಕುನ್ಗುನ್ಯ ಮತ್ತು ಡೆಂಗ್ಯು ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಡೆಂಗ್ಯು ಮಾರಣಾಂತಿಕವಾಗಿದ್ದು ಅತ್ಯಂತ ಎಚ್ಚರಿಕೆಯಿಂದ ಇರಬೇಕು.
ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮನೆಯ ಸುತ್ತಮುತ್ತ ಸ್ವಚ್ಚತೆ ಕಾಪಾಡಿ, ಮನೆ ಸುತ್ತಮುತ್ತ ಟೈರು, ಟ್ಯೂಬು, ಪ್ಲಾಸ್ಟಿಕ್ ಲೋಟ, ಟ್ಯಾಂಕುಗಳಲ್ಲಿ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು. ಟ್ಯಾಂಕುಗಳನ್ನು ಕಾಲ ಕಾಲಕ್ಕೆ ಸ್ವಚ್ಚ ಪಡಿಸಬೇಕು. ಸೊಳ್ಳೆ ಉತ್ಪತ್ತಿಯಾಗದಂತೆ ಹಾಗೂ ಸೊಳ್ಳೆ ಕಡಿತದಿಂದ ರಕ್ಷಣೆ ಪಡೆದುಕೊಳ್ಳಬೇಕು. ರೋಗದ ಲಕ್ಷಣ ಕಂಡು ಬಂದ ತಕ್ಷಣ ಚಿಕಿತ್ಸೆ ಪಡೆಯಬೇಕೆಂದರು.
ಸಭೆಯಲ್ಲಿ ಪಾಲಿಕೆಯ ಪ್ರಭಾರ ವೈದ್ಯಾಧಿಕಾರಿ ಅಮೋಘ್, ಡಾ.ರೇಖಾ, ಆರೋಗ್ಯ ನಿರೀಕ್ಷಕರು, ಇತರೆ ಸಿಬ್ಬಂದಿಗಳು ಹಾಜರಿದ್ದರು.
ತಾಲ್ಲೂಕು ಟಾಸ್ಕ್ಫೋರ್ಸ್ ಸಭೆ ಯಾವುದೇ ಮಕ್ಕಳು ಮತ್ತು ಗರ್ಭಿಣಿಯರು ಸಾರ್ವತ್ರಿಕ ಲಸಿಕೆಗಳಿಂದ ಹೊರಗುಳಿಯದಂತೆ ಅಗತ್ಯ ಕ್ರಮ ಕೈಗೊಳ್ಳುಬೇಕೆಂದು ತಹಶೀಲ್ದಾರ್ ಪ್ರದೀಪ್ ತಿಳಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವತ್ರಿಕ ಲಸಿಕೆ ಹಾಗೂ ಇತರೆ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಕುರಿತು ದಿ:05-10-2023 ರಂದು ತಹಶೀಲ್ದಾರರ ಕಚೇರಿಯಲ್ಲಿ ಏರ್ಪಡಿಸಲಾಗದ್ದ ತಾಲ್ಲೂಕು ಟಾಸ್ಕ್ಪೆÇೀರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ತೀವ್ರತರ ಮಿಷನ್ ಇಂದ್ರಧನುμï ಅಭಿಯಾನ 3 ಸುತ್ತುಗಳಲ್ಲಿ ನಡೆಯುತ್ತಿದ್ದು, ಈಗಾಗಲೇ 2 ಸುತ್ತು ಆಗಿದೆ. ಈ ಲಸಿಕೆಗಳನ್ನು ಕಾಲ ಕಾಲಕ್ಕೆ ಪಡೆಯದೇ ವಂಚಿತರಾದ 0 ಯಿಂದ 5 ವರ್ಷದೊಳಗಿನ ಮಕ್ಕಳನ್ನು ಹಾಗೂ ಗರ್ಭಿಣಿ ಸ್ತ್ರೀಯರನ್ನು ಗುರಿಯಾಗಿಸಿಕೊಂಡು 2 ಸುತ್ತುಗಳಲ್ಲಿ ಬಿಟ್ಟು ಹೋದ ಲಸಿಕೆಗಳನ್ನು ಪೂರ್ಣಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸಾರ್ವತ್ರಿಕ ಲಸಿಕೆಯೊಂದಿಗೆ ಇತರೆ ಆರೋಗ್ಯ ಇಲಾಖೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುμÁ್ಟನಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಮೊಗ್ಗ ತಾಲ್ಲೂಕು ವೈದ್ಯಾಧಿಕರಿ ಡಾ.ಚಂದ್ರಶೇಖರ್ ತೀವ್ರತರ ಇಂಧ್ರಧನುμï ಅಭಿಯಾನವು ಮಕ್ಕಳು ಮತ್ತು ಗರ್ಭಿಣಿಯರಿಗೆ ಸಂಪೂರ್ಣ ರೋಗನಿರೋಧಕವನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು, 2ನೇ ಸುತ್ತಿನಲ್ಲಿ ತಾಲ್ಲೂಕಿನಲ್ಲಿ ಶೇ.100 ಲಸಿಕಾಕರಣ ಆಗಿದೆ.
3 ನೇ ಸುತ್ತಿನ ಲಸಿಕಾ ಅಭಿಯಾನ ಅಕ್ಟೋಬರ್ 9 ರಿಂದ 14 ರವರೆಗೆ ನಡೆಯಲಿದೆ. ಈ ಸುತ್ತುಗಳಲ್ಲಿ ಲಸಿಕಾ ವಂಚಿತರಾದ ಮಕ್ಕಳು ಮತ್ತು ಗರ್ಭಿಣಿಯರು ಲಸಿಕೆಗಳನ್ನು ಪಡೆಯಬೇಕು. ಹಾಗೂ ಮೀಸಲ್ಸ್ ರುಬೆಲ್ಲಾ ನಿರ್ಮೂಲನೆಗೆ ಸಹಕರಿಸಬೇಕೆಂದರು.
ಆರ್ಬಿಎಸ್ಕೆ ಯೋಜನೆಯಡಿ ತಾಲ್ಲೂಕು ವ್ಯಾಪ್ತಿಯ ಅಂಗನವಾಡಿಗಳಲ್ಲಿ ಶೇ.100 ರಷ್ಟು ಮತ್ತು ಶಾಲೆ-ಕಾಲೇಜುಗಳಲ್ಲಿ ಇದುವರೆಗೂ ಶೇ.63 ರಷ್ಟು ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆದಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಆರೋಗ್ಯ ನಿರೀಕ್ಷಕರು, ಆರೋಗ್ಯ ಇಲಾಖೆ ಹಾಗೂ ಇತರೆ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.