ಶಿವಮೊಗ್ಗ,ಅ.2: ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ವಿಮಾನ ನಿಲ್ದಾಣದಲ್ಲಿ 18 ಜನ ಅಗ್ನಿಶಾಮಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು, ಪರಿಶೀಲನೆ ಸಮಯದಲ್ಲೇ ಎಂಟು ಜನರನ್ನ ಬೇರೆ ವಿಮಾನ ನಿಲ್ದಾಣಕ್ಕೆ ನಿಯೋಜಿಸಲಾಗಿದೆ. ಈ ರೀತಿ ಮಾಡಿರುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಡಿಜಿಸಿಎ ನಿಯಮಾವಳಿಯಂತೆ ಎಲ್ಲವನ್ನೂ ಜಾರಿಗೆ ತರಲಾಗುವುದು. ಡಿಜಿಸಿಎ ನಿಯಮಾವಳಿಯನ್ನು ರಾಜ್ಯ ಸರ್ಕಾರ ಪಾಲಿಸಬೇಕು. ಅಧಿಕಾರಿಗಳ ಅನುಭವ ಕೊರತೆಯಿಂದ ದಂಡ ವಿಧಿಸಲಾಗಿದೆ ಎಂದರು.
ವಿಮಾನ ನಿಲ್ದಾಣ ಉನ್ನತ್ತಿಕರಿಸಲಾಗುತ್ತಿದೆ. ಅಧಿಕಾರಿಗಳಿಗೆ ಎಚ್ಚರಿಕೆ ಕೊಡುವ ಕೆಲಸ ಆಗಿದೆ. ಜನರ ರಕ್ಷಣೆಗಾಗಿ ವಿಮಾನ ನಿಲ್ದಾಣದ ನ್ಯೂನತೆ ಸರ್ಕಾರ ಸರಿಪಡಿಸಬೇಕಿದೆ. ಟೋಲ್‍ಗೆ ಜನರ ವಿರೋಧ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ಹೆದ್ದಾರಿ ಶಿವಮೊಗ್ಗ, ಹಾವೇರಿ, ದಾವಣಗೆರೆ, ಹುಬ್ಬಳಿ ಮೂಲಕ ಹಾದು ಹೋಗಿದೆ. ಟೋಲ್ ಎಲ್ಲಾ ಜಿಲ್ಲೆಗಳಿಗೂ ಸಮಾನವಾಗಿ ವಿತರಣೆ ಆಗಬೇಕು, ಯಾವುದೋ ಒಂದು ಜಿಲ್ಲೆಯಲ್ಲಿ ಹೆಚ್ಚಿನ ಟೋಲ್ ಗೇಟ್ ಗಳನ್ನ ಹಾಕಿ ಹೊರೆ ಮಾಡಬಾರದು.ರಾಜ್ಯ ಸರ್ಕಾರ ಎರಡು ಟೋಲ್ ಮುಚ್ಚಬೇಕೆಂದು ಮನವಿ ಮಾಡಿದ್ದೇನೆ ಈ ಬಗ್ಗೆ ಉಸ್ತುವಾರಿ ಸಚಿವರ ಬಳಿಯೂ ಮಾತಾನಾಡುತ್ತೇನೆ ಎಂದರು.