ಸಮಗ್ರ ಕೃಷಿ ಪದ್ದತಿಗಳು ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಹೇಮ್ಲಾ ನಾಯ್ಕ್. ಶಿಕ್ಷಣ ನಿರ್ದೇಶಕರು.ಕೆಳದಿ ಶಿವಪ್ಪನಾಯಕ ಕೃಷಿ ಮತ್ತುತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ. ಶಿವಮೊಗ್ಗಭಾರತದಲ್ಲಿ ಶೇಕಡಾ 80 ರಷ್ಟು ಸಣ್ಣ ಮತ್ತುಅತಿ ಸಣ್ಣ ರೈತರು ಇದ್ದಾರೆ, ಏಕ ಬೆಳೆ ಬೆಳೆಯುವುದರಿಂದ ಕಡಿಮೆ ಆದಾಯ ಬರುತ್ತದೆ ಆದ್ದರಿಂದ ರೈತರು ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ತಮ್ಮ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಆದಾಯ ಪಡೆದುಕೊಳ್ಳಲು ಮುಂದಾಗಬೇಕು ಎಂದುಹೇಳಿದರು.
ಡಾ. ಕೆ.ಟಿ.ಗುರುಮೂರ್ತಿ ವಿಸ್ತರಣಾ ನಿರ್ದೇಶಕರು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತುತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಶಿವಮೊಗ್ಗ .ಅವರು ಸಮಗ್ರ ಕೃಷಿ ಪದ್ದತಿಗಳ ಕುರಿತ ಕೈಪಿಡಿಯನ್ನು ಬಿಡುಗಡೆ ಮಾಡಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದೇಶ ಅಭಿವೃದ್ಧಿಯಾಗಿ ಬೇಕಾದರೆ ಮೊದಲು ರೈತರು ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳನ್ನು ಇರುವ ಸಂಪನ್ಮೂಲಕ್ಕೆ ಅನುಗುಣವಾಗಿ ಅಳವಡಿಸಿಕೊಂಡು ಹೆಚ್ಚಿನ ಆದಾಯ ಪಡೆಯಲು ಸಮಗ್ರ ಕೃಷಿ ಪದ್ದತಿಯು ಮುಖ್ಯ ಪಾತ್ರ ವಹಿಸುತ್ತದೆ.ಕೃಷಿ ಮತ್ತು ಪರಿಸರವು ಜೊತೆ ಜೊತೆಯಲ್ಲಿಅಭಿವೃದ್ಧಿ ಹೊಂದಬೇಕು ಆದ್ದರಿಂದ ರೈತರು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತುಕೊಡಬೇಕು ಎಂದು ನುಡಿದರು.
ಈ ಕಾರ್ಯಕ್ರಮಕ್ಕೆ ಗಣ್ಯರನ್ನು ಡಾ. ಜಿ. ಕೆ. ಗಿರಿಜೇಶ್. ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಸ್ವಾಗತಿಸಿದರು. ಡಾ. ಸಹನ. ಎಸ್. ತರಬೇತಿ ಸಂಯೋಜಕರು ಹಾಗೂ ವಿಜ್ಞಾನಿ (ಕೃಷಿ ವಿಸ್ತರಣೆ) ಕೆ.ವಿ.ಕೆ., ಶಿವಮೊಗ್ಗ ವಂದಿಸಿದರು.
ಡಾ. ಬಸವಲಿಂಗಯ್ಯ. ಸಹ ಪ್ರಾದ್ಯಾಪಕರು.ವ.ಕೃ.ತೋ.ಸಂ.ಕೇ. ಶಿವಮೊಗ್ಗ ಇವರು ನಿರೂಪಿಸಿದರು. ಈ ಕಾರ್ಯಕ್ರಮಕ್ಕೆ ಶಿವಮೊಗ್ಗ, ದಾವಣಗೆರೆ, ಹಾಸನ, ಉತ್ತರಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಸುಮಾರು 40 ರೈತರು ಭಾಗವಹಿಸಿದರು.