ಅಂಬಿಕಾತನಯದತ್ತ, ಶಬ್ಧಗಾರುಡಿಗ, ವರಕವಿ ದ.ರಾ.ಬೇಂದ್ರೆ ಅವರ 125ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಬೇಂದ್ರೆ ನಮನ ಕಾರ್ಯಕ್ರಮವನ್ನು ಅಜೇಯ ಸಂಸ್ಕøತಿ ಬಳಗದ ವತಿಯಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು. ಪ್ರಸಿದ್ಧ ಸುಗಮ ಸಂಗೀತ ಗಾಯಕ ಪ್ರಹ್ಲಾದ್ ದೀಕ್ಷಿತ್ ಮತ್ತು ತಂಡ ಬೇಂದ್ರೆಯವರ ಕಾವ್ಯಗಳ ಗಾನಸುಧೆಯನ್ನು ಉಣಬಡಿಸಿತು. ಉದ್ಯಮಿ ಡಾ.ಶ್ರೀನಿವಾಸ್‍ಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೂಡಲಮನೆಯ ಮುತ್ತಿನ ನೀರಿನ, ಇಳಿದು ಬಾ ತಾಯೇ ಇಳಿದು ಬಾ, ಶ್ರಾವಣ, ಕುರುಡು ಕಾಂಚಾಣ, ಪಾತರಗಿತ್ತಿ ಮುಂತಾದ ಗೀತೆಗಳನ್ನು ಕಂಠತುಂಬಿ ಹಾಡಿದರು.
ಉಮೇಶ್, ಸಹಾಯಕ ನಿರ್ದೇಶಕರು
ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶಿವಮೊಗ್ಗ ನಮ್ಮ ಇಲಾಖೆಯಿಂದ ಕವಿಗಳ ಕಾವ್ಯಗಳ ಗಾಯನ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದ್ದೇವೆ. ಅದರಲ್ಲಿಯೂ ಬೇಂದ್ರೆಗಳ ಗೀತೆಗಳ ಗಾಯನದ ಕಾರ್ಯಕ್ರಮಗಳು ವಿವಿಧೆಡೆಗಳಲ್ಲಿ ಯುವಗಾಯಕರು ನಡೆಸುತ್ತಿದ್ದು, ಇಲಾಖೆ ಕೂಡ ಕನ್ನಡದ ಭಾವಗೀತೆಗಳ ಗಾಯನಕ್ಕೆ ಸಹಕಾರ ನೀಡುತ್ತಿದೆ.
ಸುಮ, ಗಾಯಕಿ ಪ್ರಸ್ತುತ ದಿನದಲ್ಲಿ ಭಾವಗೀತೆಗಳನ್ನು ಹಾಡುವ ಪ್ರವೃತ್ತಿ ಕಡಿಮೆ ಆಗುತ್ತಿದ್ದು, ಇದನ್ನು ಹೊಸ ತಲೆಮಾರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಕವಿಗಳ ಕಾವ್ಯ ಗಾಯನವನ್ನು ಸಂಘಟನಾತ್ಮಕವಾಗಿ ನಡೆಸುತ್ತಿದ್ದೇವೆ.
ಪ್ರಹ್ಲಾದ್ ದೀಕ್ಷಿತ್, ಸುಗಮ ಸಂಗೀತ ಗಾಯಕರು ವರಕವಿ ಬೇಂದ್ರೆಯವರಿಗೂ ಶಿವಮೊಗ್ಗಕ್ಕೂ ಎಲ್ಲಿಲ್ಲದ ನಂಟು. ಶಿವಮೊಗ್ಗದಲ್ಲಿ ನಡೆದ ಅಖಿ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೇಂದ್ರೆಯವರು ಪಾಲ್ಗೊಂಡಿದ್ದರು. ಅವರ ಪ್ರಸಿದ್ಧ ಪದ್ಯಗಳನ್ನು ಮೊದಲು ಓದಿದ್ದು ಶಿವಮೊಗ್ಗದಲ್ಲಿ. ಬೇಂದ್ರೆಯವರ ಗೀತೆಗಳನ್ನು ಹಾಡುವ ಮೂಲಕ ಅವರಿಗೆ ನಮನ ಸಲ್ಲಿಸುತ್ತಿದೆ.

error: Content is protected !!