ಅಡುಗೆಯಲ್ಲಿ ನಿರತರಾದ ಬಾಣಸಿಗರು

ಕೊರೋನಾ ಹಿನ್ನೆಲೆಯಲ್ಲಿ ಶಿವಮೊಗ್ಗ ಸಂಪೂರ್ಣ ಬಂದ್ ಆಗಿರುವುದರಿಂದ ಶಿವಮೊಗ್ಗ ಮಹಾನಗರಪಾಲಿಕೆ ಸಾರ್ವಜನಿಕರಿಗೆ ಹೋಟೆಲ್ ವ್ಯವಸ್ಥೆ ಇಲ್ಲದಿರುವ ಕಾರಣ ಊಟ ತಿಂಡಿಯನ್ನು ಸಾರ್ವಜನಿಕರ ಮನೆಬಾಗಿಲಿಗೆ ತಲುಪಿಸುವ ಕಾರ್ಯವನ್ನು ಆರಂಭಿಸಿದ್ದು ಜನಮೆಚ್ಚುಗೆ ಗಳಿಸಿದೆ. ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ. ಪಾಲಿಕೆ ನೀಡಿರುವ ಮೊಬೈಲ್ ನಂಬರಿಗೆ ಕರೆ ಮಾಡಬೇಕು ಇಲ್ಲವೇ ವಾಟ್ಸಾಪ್ ಮಾಡಿದರೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಕರೆ ಮಾಡಿದ ಒಂದು ಗಂಟೆಯಲ್ಲಿ ಮನೆ ಬಾಗಿಲಿಗೆ ತಲುಪುತ್ತದೆ. ಎಲ್ಲವೂ ಶುಚಿ ರುಚಿಯಾಗಿದ್ದು ಜನಮನ್ನಣೆಗೆ ಪಾತ್ರವಾಗಿದೆ. ಸರಬರಾಜನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡಲಾಗುತ್ತಿದೆ.

ಜನರು ಮೊತ್ತವನ್ನು ಗೂಗಲ್ ಪೇ ಮಾಡಬಹುದು ಅಥವಾ ನಗದು ನೀಡಬಹುದು. ಮಹಾನಗರಪಾಲಿಕೆ ತುಂಬಾ ವ್ಯವಸ್ಥಿತವಾಗಿ ಪ್ಯಾಕೆಟ್‍ಗಳ ಮೂಲಕ ಆಹಾರವನ್ನು ತೂಕ ಮಾಡಿ ಸೀಲ್ ಮಾಡಿ ಜನರಿಗೆ ತಲುಪಿಸುತ್ತಿದೆ. ಆರೋಗ್ಯಾಧಿಕಾರಿಗಳು ಕೂಡ ಇದನ್ನು ತಪಾಸಣೆ ಮಾಡಿ ಸಾರ್ವಜನಿಕರಿಗೆ ತಲುಪುವಂತೆ ಮಾಡುತ್ತಿದ್ದಾರೆ.
ಜಿಲ್ಲಾಡಳಿತ ನಿಗದಿತ ಸಮಯದಲ್ಲಿ ಕಿರಾಣಿ ಮತ್ತು ಅಗತ್ಯ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಗ್ರಾಹಕರಿಗೆ ಅವಕಾಶ ನೀಡಿದೆ. ಕೊರೋನಾ ಹಿನ್ನೆಲೆಯಲ್ಲಿ ಮನೆಬಾಗಿಲಿಗೇ ಆಹಾರ ತಲುಪಿಸುತ್ತಿರುವುದು ವಯೋವೃದ್ಧರು ಮತ್ತು ಸಾರ್ವಜನಿಕರಿಗೆ ಈ ಸೇವೆಯಿಂದ ತುಂಬಾ ಅನುಕೂಲವಾಗಿದೆ. ಜಿಲ್ಲಾಧಿಕಾರಿ ಮತ್ತು ಮಹಾನಗರಪಾಲಿಕೆ ಆಯುಕ್ತರು ಸಾರ್ವಜನಿಕರಿಗೆ ಅನುಕೂಲತೆ ಮಾಡಿಕೊಟ್ಟಿದ್ದಾರೆ.

ಪ್ಯಾಕಿಂಗ್‌ನಲ್ಲಿ ನಿರತರಾದ ಸಿಬ್ಬಂದಿ

ಬಾಣಸಿಗರು ಮಾಧ್ಯಮದವರೊಂದಿಗೆ ಮಾತನಾಡಿ ಕೊರೋನಾ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಶುಚಿ ರುಚಿಯಾದ ತಿಂಡಿ ಹಾಗೂ ಊಟವನ್ನು ನಾವು ತಯಾರಿಸುತ್ತಿದ್ದು ಆರೋಗ್ಯ ಇಲಾಖೆಯ ಆದೇಶದ ಮೇಲೆ ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಸಿದ್ಧಪಡಿಸುತ್ತಿದ್ದೇವೆ. ತಯಾರಿಕೆಗೆ ತಗಲುವ ವೆಚ್ಚವನ್ನು ಮಾತ್ರ ಪಡೆಯುತ್ತಿದ್ದು ಸೇವಾ ಮನೋಭಾವದಿಂದಲೇ ಕಾರ್ಯ ನಿರ್ವಹಿಸಿದ್ದೇವೆ.

ವಿತರಕ ಮಾತನಾಡಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶುಚಿ ರುಚಿಯಾದ ಆಹಾರವನ್ನು ಸಾರ್ವಜನಿಕರ ಮನೆಗಳಿಗೆ ಕರೆ ಮಾಡಿದ ಒಂದು ತಾಸಿನಲ್ಲಿ ತಲುಪಿಸುತ್ತಿದ್ದೇವೆ.

ಡಾ|| ಮುನಿವೆಂಕಟರಾಜು, ಆಹಾರ ಸಂರಕ್ಷಣೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಮಾತನಾಡಿ ಶಿವಮೊಗ್ಗದಲ್ಲಿ ಎಲ್ಲಾ ಹೋಟೆಲ್‍ಗಳು ಮತ್ತು ಬೀದಿ ಬದಿ ಆಹಾರ ವ್ಯಾಪಾರ ಮಾಡುವ ಮಳಿಗೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಮಹಾನಗರಪಾಲಿಕೆ ವತಿಯಿಂದ ಶಿವಮೊಗ್ಗ ಜನತೆಯ ಮನೆಬಾಗಿಲಿಗೆ ತಯಾರಿಸಿದ ಆಹಾರವನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಶೇಷಾಚಲ ಸಾಮಾಜಿಕ ಕಾರ್ಯಕರ್ತರು ಮಾತನಾಡಿ ಶಿವಮೊಗ್ಗ ನಗರದಲ್ಲಿ ಸಾರ್ವಜನಿಕರ ಮನೆಗೆ ಆಹಾರವನ್ನು ತಲುಪಿಸುವ ಜವಾಬ್ದಾರಿಯನ್ನು ನಮ್ಮ ತಂಡ ಮಾಡುತ್ತಿದೆ. ಕರೆ ಮಾಡಿದ ಒಂದು ತಾಸಿನಲ್ಲಿ ನಮ್ಮ ತಂಡ ಆಹಾರವನ್ನು ಮನೆಬಾಗಿಲಿಗೆ ತಲುಪಿಸುತ್ತದೆ. ಸಾರ್ವಜನಿಕರು ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದು ಪ್ರತಿದಿನ ನೀಡುವ ಆಹಾರದಲ್ಲಿ ಹೊಸ ಹೊಸ ಬದಲಾವಣೆಗಳನ್ನು ಸಹ ಮಾಡುತ್ತಿದ್ದೇವೆ.

ಬೈಟ್: ಮೊನಿಷಾ, ಗ್ರಾಹಕರು: ನಾವು ಕರೆ ಮಾಡಿದ ಸ್ವಲ್ಪ ಹೊತ್ತಿನಲ್ಲಿಯೇ ನಮಗೆ ಶಿವಮೊಗ್ಗ ಮಹಾನಗರಪಾಲಿಕೆ ನೀಡುತ್ತಿರುವ ಊಟ ಉಪಹಾರದ ಸೌಲಭ್ಯ ನಮ್ಮನ್ನು ತಲುಪುತ್ತಿದ್ದು ಇಂತಹ ಸಂದಿಗ್ಧ ಮತ್ತು ಸಂಕಷ್ಟ ಸಮಯದಲ್ಲಿ ತುಂಬಾ ಉಪಯೋಗವಾಗಿದೆ.

ರಾಘವೇಂದ್ರ, ಗ್ರಾಹಕ ಮಾತನಾಡಿ ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಮಹಾನಗರ ಪಾಲಿಕೆ ಅತ್ಯಂತ ಉಪಯುಕ್ತ ಸೇವೆ ನೀಡುತ್ತಿದೆ. ಇದು ಮಾದರಿಯಾಗಿದೆ.

ಶಿವಮೊಗ್ಗ ಮಹಾನಗರಪಾಲಿಕೆ ಸಾರ್ವಜನಿಕರಿಗೆ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ನಿಗದಿತ ಬೆಲೆಯಲ್ಲಿ ಶುಚಿ ರುಚಿಯಾದ ಆಹಾರವನ್ನು ನೀಡಿ ಜನಮೆಚ್ಚುಗೆ ಗಳಿಸುತ್ತಿದೆ.
error: Content is protected !!