ದಿನೇದಿನೇ ನಗರದಲ್ಲಿ ಕೊರೋನಾ ಪಾಸಿಟಿವ್ ಕೇಸ್ ಗಳು ಹೆಚ್ಚಾಗುತ್ತಿದ್ದು ಅದರಂತೆ ಹೊಸಮನೆ ಬಡಾವಣೆಯಲ್ಲಿ ಸಹ ಅತಿ ಹೆಚ್ಚು ಪಾಸಿಟಿವ್ ಕೇಸ್ ಗಳು ಬರುತ್ತಿದ್ದು ಮಹಾನಗರಪಾಲಿಕೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೀರಾಮನಗರ ಇವರ ಸಹಯೋಗದೊಂದಿಗೆ ಹೊಸಮನೆ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಇಂದಿನಿಂದ ಮೂರು ದಿನಗಳ ಕಾಲ ಬೆಳಗ್ಗೆ 10:0ಗಂಟೇಯಿಂದ ಮಧ್ಯಾಹ್ನ 2ಗಂಟೆವರೆಗೆ ಕೊರೋನಾ ಟೆಸ್ಟ್ ನಡೆಸಲಾಗುವುದು.
ಬಡಾವಣೆಯಲ್ಲಿ ಕೆಮ್ಮು, ಶೀತ, ಜ್ವರ ಲಕ್ಷಣಗಳು ಇರುವಂತಹ ನಾಗರಿಕರು ಕೊರೋನ ಟೆಸ್ಟ್ ಮಾಡಿಸುವ ಮುಖಾಂತರ ಆರೋಗ್ಯ ಜಾಗೃತಿ ವಹಿಸಬೇಕೆಂದು ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ತಿಳಿಸಿದ. ಈ ಸಂದರ್ಭದಲ್ಲಿ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಶ್ರೀಧರ್ ರವರು, ಯುವ ಮುಖಂಡರಾದ ಕೆ.ರಂಗನಾಥ್ ಪ್ರಾಥಮಿಕ ಆರೋಗ್ಯ ಮಹಿಳಾ ಸಹಾಯಕಿ ವಿಜಯ ಮತ್ತು ಸಿಬ್ಬಂದಿಗಳು ಹಾಗೂ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
