ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇದರ ವತಿಯಿಂದ ಹಮ್ಮಿಕೊಂಡ ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನೆಯ ಭಾಗವಾಗಿ “ಅನುತ್ಪಾದಕತೆಯಿಂದ ಉತ್ಪಾದಕತೆಯತ್ತ” ಕಾರ್ಯಕ್ರಮವನ್ನು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ದಾವಣಗೆರೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ, ಬೀರಗೊಂಡನಹಳ್ಳಿ ಇವರ ಸಹಯೋಗದೊಂದಿಗೆ ಜಾನುವಾರುಗಳ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಯಿತು. ಡಾ: ಎನ್.ಬಿ.ಶ್ರೀಧರ, ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರು, ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ, ಶಿವಮೊಗ್ಗ ಇವರ ನೇತ್ರತ್ವದಲ್ಲಿ ವಿವಿಧ ಕಾರಣಗಳಿಂದ ಅನುತ್ಪಾದಕವಾಗಿರುವ ಎಲ್ಲಾ ರಾಸುಗಳಿಗೆ ವಿಶೇಷ ಚಿಕಿತ್ಸೆಯನ್ನುನೀಡಲಾಯಿತು.

ಈ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲೆಯ ಮಿಶ್ರ ತಳಿಗಳು ಜಾಸ್ತಿ ಇರುವ ಭಾಗದ ರೈತರ ಜಾನುವಾರುಗಳಿಗೂ ಕಾಲ ಕ್ರಮೇಣ ವಿಸ್ತರಿಸಲಾಗುತ್ತಿದ್ದು, ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಡಾ: ಎನ್.ಬಿ.ಶ್ರೀಧರ್ ತಿಳಿಸಿದರು.


ಈ ಸಂದರ್ಭದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳಾದ ಡಾ: ಶಶಿ ಇವರು ಡಾ:ಚಂದ್ರಶೇಖರ್ ಮತ್ತು ಡಾ:ನವೀನ್ ಕುಮಾರ್ ಜಿ.ಟಿ. ಮತ್ತು ಇಲಾಖೆಯ ಸಿಬ್ಬಂದಿಗಳ ಜೊತೆ ಆಯೋಜಿಸಿದರು. ಪಶುವೈದ್ಯಕೀಯ ಮಹಾವಿದ್ಯಾಲಯದ ಡಾ: ಮಣಿಕಾಂತ್, ಡಾ: ಪ್ರಕಾಶ್, ಡಾ: ರೇವಣಸಿದ್ದಪ್ಪ ಹಾಗೂ ಇಂಟಾಸ್ ಫಾರ್ಮಾಸ್ಯುಟಿಕಲ್ಸ್ ಶ್ರಿ ಅಶ್ವಿನ್ ಇವರ ನೇತ್ರತ್ವದ ತಂಡದಲ್ಲಿ ಶ್ರಿ ಪ್ರಕಾಶ್ ಮತ್ತು ಶ್ರಿ ಸಂದೇಶ್ ಇವರು ಚಿಕಿತ್ಸೆಯಲ್ಲಿ ಸಹಕರಿಸಿದರು. ವಿವಿಧ ಕಾರಣಗಳಿಂದ ಅನುತ್ಪಾದಕತೆಯತ್ತ ಸಾಗಿದ 96 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಯಿತು.

ಈ ಕಾರ್ಯಕ್ರಮಕ್ಕೆ ಒತ್ತು ನೀಡಿ ಸಹಕರಿಸಿದ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಡೀನ್‍ರವರಾದ ಡಾ: ಪ್ರಕಾಶ್ ನಡೂರ್ ಇವರ ಸಹಕಾರವನ್ನು ಈ ಸಂದರ್ಭದಲ್ಲಿ ನೆನೆಯಲಾಯಿತು.

ಹೊನ್ನಾಳಿಯ ಬೀರಗೊಂಡನಹಳ್ಳಿಯಲ್ಲಿ ಅನುತ್ಪಾದಕ ರಾಸುಗಳ ವಿಶೇಷ ಆರೋಗ್ಯ ತಪಾಸಣೆ

error: Content is protected !!