ಉದ್ದು, ಹೆಸರು ಬೆಳೆಗಳಲ್ಲಿ ಮಳೆ ನಂತರ ಎಲೆಗಳಲ್ಲಿ ಚಿಬ್ಬು ಹಾಗೂ ಇಟ್ಟಂಗಿ ರೋಗ ಕಂಡು ಬಂದಿದ್ದು ಹೂ ಹಂತ ತಲುಪುತ್ತಿರುವ ವೇಳೆಯಲ್ಲಿ ಬೆಳೆಗಳ ಸಸ್ಯ ಸಂರಕ್ಷಣೆಯನ್ನು ಸೂರ್ಯನ ಬಿಸಿಲಿನ ಅವದಿಯಲ್ಲಿ ಕೈಗೊಳ್ಳಬೇಕು. ಮೋಡ ಕವಿದ ವಾತಾವರಣ ಹಾಗೂ ಜೂನ್ ನಂತರ ಸುರಿದ ನಾಲ್ಕು ಉತ್ತಮ ಮಳೆ ದಿನಗಳು ಬೆಳೆದ ಉದ್ದು, ಹೆಸರು ಹೊಲಗಳಲ್ಲಿ ಈ ರೋಗ ಕಂಡು ಬಂದಿದೆ. ಬೇರು ವ್ಯಾಪ್ತಿ ಉಸಿರಾಡುವಂತೆ ಹಾಗೂ ಸಸ್ಯ ಬೆಳೆಯುವಂತೆ ಸಂರಕ್ಷಣಾ ಕ್ರಮಗಳನ್ನು ರೈತರು ಕೈಗೊಳ್ಳಬೇಕು. ಉದ್ದು ಮತ್ತು ಹೆಸರು ಎರಡು ಬೆಳೆಗಳಲ್ಲಿ ಎಲೆಚುಕ್ಕಿ, ಚಿಬ್ಬುರೋಗ, ಇಟ್ಟಂಗಿ ರೋಗ ಕಂಡು ಬಂದಲ್ಲಿ ಹೆಕ್ಸಾಕೋನಾಜಾಲ್ 1 ಮಿ.ಲಿ. ಅಥವಾ ಕಾರ್ಬಡೈಜಿಂ 1 ಗ್ರಾ. ಅಥವಾ ಮ್ಯಾಂಕೋಜೆಬ್ 2 ಗ್ರಾ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಬದಲಾಗುತ್ತಿರುವ ಹವಾಮಾನ ದಿನಗಳಲ್ಲಿ ಗಿಡದ ಆರೋಗ್ಯಕ್ಕೆ ಒತ್ತು ನೀಡಬೇಕು. ಹೊಲಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೂಕ್ತ ಬಸಿಗಾಲುವೆ ನಿರ್ಮಿಸಿ ದ್ವಿದಳ ಧಾನ್ಯ ಬೆಳೆಗಳಾದ ಉದ್ದು, ಹೆಸರು ತೊಗರಿ ಬೆಳೆಗಳಿಗೆ ಓPಏ 19-19-19 1 ಕಿ.ಗ್ರಾ. 200 ಲೀಟರ್ ನೀರಿನೊಂದಿಗೆ ಬೆರೆಸಿ 1 ಎಕರೆಗೆ ಸಿಂಪಡಿಸಬೇಕು. ಉತ್ತಮ ಹೂ ಮತ್ತು ಕಾಯಿ ರಚನೆಯಿಂದ ಇಳುವರಿ ಪಡೆಯಬಹುದು. ಮುಂಗಾರು ಆರಂಭದ 30 ದಿನಗಳ ಬೆಳೆ ಇದ್ದಾಗಲೇ ಏಕ ಕಾಲಕ್ಕೆ ಸುರಿದ ಮಳೆಯಿಂದ ವಾತಾವರಣದ ಹಾಗೂ ಭೂಮಿಯ ಆದ್ರ್ರತೆ, ತೇವಾಂಶ ಹೆಚ್ಚಾಗಿದ್ದು, ದಟ್ಟ ಮೋಡದ ದಿನಗಳು ಇಟ್ಟಂಗಿ ತಾಮ್ರರೋಗ ಹಾಗೂ ಚಿಬ್ಬು ರೋಗ ಪ್ರಸಾರಕ್ಕೆ ಸೂಕ್ತ ಸನ್ನಿವೇಶ ವಾಗಿರುತ್ತದೆ. ಉದ್ದು ಮತ್ತು ಹೆಸರು ಹೊಲಗಳಲ್ಲಿ ರೋಗ ಭಾದೆ 5 ರಿಂದ 10 ಶೇಕಡ ಇರುವಾಗಲೆ ಸೂಕ್ತ ಸಸ್ಯ ಸಂರಕ್ಷಣೆ ಕೈಗೊಳ್ಳಬೇಕು ಮುನ್ನೆಚ್ಚರಿಕಯಾಗಿಯೂ ಮೇಲ್ಕಂಡ ಸಸ್ಯ ಸಂರಕ್ಷಣಾ ಔಷದೀಯನ್ನು ಸಿಂಪಡಿಸಬೇಕು. ಬೂದಿ ರೋಗ. ಕಂಡು ಬಂದಲ್ಲಿ 1 ಗ್ರಾಂ. ಕಾರ್ಬನಡೈಜಿಮ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಜಹೀರ್ ಅಹಮದ್ ಬಿ, ವಿಜ್ಞಾನಿ (ಸಸ್ಯ ರೋಗಶಾಸ್ತ್ರ) ಐಸಿಎಆರ್ ಕೆವಿಕೆ, ಕಲಬುರಗಿ (ಗುಲ್ಬರ್ಗಾ) ಕರ್ನಾಟಕ -585101 Mobile No: 9845300326