ಶಿವಮೊಗ,್ಗ ಸೆಪ್ಟೆಂಬರ್ 27, : ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಇತರೆ ಭಾಗಗಳಲ್ಲಿ ದಿ: 28-09-2023 ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಕಾರ್ಯಕ್ರಮ ಆಚರಿಸಲಿದ್ದು ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆ 1973 ರ ಅಪರಾಧ ದಂಡ ಪ್ರಕ್ರಿಯೆ ಸಂಹಿತೆ ಪ್ರಕಾರ ದಿ: 28-09-2023 ರಿಂದ 29-09-2023 ರವರೆಗೆ ಸೆಕ್ಟರ್ ಅಧಿಕಾರಿಗಳನ್ನು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಎಂದು ನೇಮಿಸಿ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಬಾಣದರಂಗಯ್ಯ ಎನ್ ಆರ್ ಆದೇಶಿಸಿದ್ದಾರೆ.
ಅವಿಎನ್, ಉಪನಿರ್ದೇಶಕರು, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಶಿವಮೊಗ್ಗ ಮೊ.ಸಂ:9886907455 ಇವರನ್ನು ಭೀಮೇಶ್ವರ ದೇವಸ್ಥಾನದ ಹೆಚ್‍ಎಂಎಸ್ ಗಣಪತಿ ಪ್ರತಿಷ್ಟಾಪನಾ ಸ್ಥಳ, ಎಸ್‍ಪಿಎಂ ರಸ್ತೆ, ರಾಮಣ್ಣಶ್ರೇಷ್ಟಿ ಪಾರ್ಕ್‍ವರೆಗೆ 100 ಮೀಟರ್ ಸುತ್ತಮುತ್ತಲಿನ ಪ್ರದೇಶ ವ್ಯಾಪ್ತಿಯ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಯಾಗಿ ನೇಮಿಸಲಾಗಿದೆ.
ಶಿವಕುಮಾರ್, ಮುಖ್ಯ ಆಡಳಿತಾಧಿಕಾರಿ, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಶಿವಮೊಗ್ಗ ಮೊ.ಸಂ: 9448357490 ಇವರನ್ನು ರಾಮಣ್ಣ ಶ್ರೇಷ್ಟಿ ಪಾರ್ಕ್ ನಿಂದ ಗಾಂಧಿ ಬಜಾರ್, ಎಸ್‍ಎನ್ ಸರ್ಕಲ್, ಬಿ.ಹೆಚ್.ರಸ್ತೆ, ಎ.ಎ.ಸರ್ಕಲ್, ನೆಹರು ರಸ್ತೆ, ಗೋಪಿ ಸರ್ಕಲ್ ವರೆಗೆ 100 ಮೀಟರ್ ಸುತ್ತಮುತ್ತಲಿನ ಪ್ರದೇಶ.
ಮನೋಹರ್ ಕೆ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ ಕೋಶ, ಶಿವಮೊಗ್ಗ ಮೊ.ಸಂ: 9669199094 ಇವರನ್ನು ಗೋಪಿ ಸರ್ಕಲ್‍ನಿಂದ ದುರ್ಗಿಗುಡಿ, ಜೈಲ್ ಸರ್ಕಲ್, ಕುವೆಂಪು ರಸ್ತೆ, ಶಿವಮೂರ್ತಿ ಸರ್ಕಲ್, ಮಹಾವೀರ ಸರ್ಕಲ್, ಡಿವಿಎಸ್ ಸರ್ಕಲ್, ಕಾನ್ವೆಂಟ್ ರಸ್ತೆ, ಕೃಷ್ಣ ಕೆಫೆ ಸರ್ಕಲ್, ಪೊಲೀಸ್ ಕಾರ್ನರ್, ಕೋಟೆ ಠಾಣೆ ಮುಂಭಾಗ, ಭೀಮೇಶ್ವರ ದೇವಸ್ಥಾನದ ಹಿಂಭಾಗ ಭೀಮನಮಡು ವಿಸರ್ಜನಾ ಸ್ಥಳದವರೆಗೆ-100 ಮೀಟರ್ ಪ್ರದೇಶ ವ್ಯಾಪ್ತಿಯ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಯಾಗಿ ನೇಮಿಸಲಾಗಿದೆ.

error: Content is protected !!