ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನನಿತ್ಯ ಹಣ್ಣು ತರಕಾರಿಗಳಿಗೆ ಕೊರತೆಯಾಗದಂತೆ ಕ್ರಮಕೈಗೊಳ್ಳಲು ಹಾಪ್ಕಾಮ್ಸ್ ಮಳಿಗೆ ಹಾಗೂ ವಾಹನಗಳ ಮೂಲಕ ಪ್ರತಿ ವಾರ್ಡ್ಗೂ ಸರಬರಾಜು ಮಾಡಲಾಗುತ್ತಿದೆ. ಗ್ರಾಹಕರು ಹಣ್ಣು, ತರಕಾರಿ ಖರೀದಿಸುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಹಾಗೂ ರೈತ ಬಾಂಧವರು ತಾವು ಬೆಳೆದ ಹಣ್ಣು, ತರಕಾರಿಗಳನ್ನು ಹಾಪ್ಕಾಮ್ಸ್ಗೆ ನೀಡುವಂತೆ ಜಿಲ್ಲಾ ಹಾಪ್ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.