News Next

ಶಿವಮೊಗ್ಗ, ಜೂನ್-24 : 2021-22 ನೇ ಸಾಲಿಗೆ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (ಆರ್‍ಡಬ್ಲ್ಯುಬಿಸಿಐಎಸ್)ಯನ್ನು ಜಾರಿಗೊಳಿಸಲಾಗುತ್ತಿದ್ದು, ಪ್ರಸ್ತುತ ನೋಂದಾವಣೆ ಚಾಲ್ತಿಯಲ್ಲಿದೆ.
ಆದರೆ ನೋಂದಾವಣೆಗೆ ಅವಶ್ಯ ದಾಖಲೆಯಾದ ಪಹಣಿ(ಆರ್‍ಟಿಸಿ)ಯಲ್ಲಿ ಬೆಳೆ ನಮೂದು ಇಲ್ಲದಿದ್ದರೆ ನೋಂದಣಿಗೆ ತೊಂದರೆಯಾಗುತ್ತಿರುವುದಾಗಿ ಕೆಲ ಪತ್ರಿಕೆಗಳಲ್ಲಿ ಪ್ರಚಾರವಾಗುತ್ತಿರುವುದನ್ನು ಗಮನಿಸಲಾಗಿದೆ. ಆದ್ದರಿಂದ ಸರ್ಕಾರದ ಆದೇಶದಲ್ಲಿಯೇ ಅವಕಾಶ ನೀಡಿರುವಂತೆ ಪಹಣಿ (ಆರ್‍ಟಿಸಿ)ಯಲ್ಲಿ ಬೆಳೆ ನಮೂದು ಇಲ್ಲದಿದ್ದರೆ ಅರ್ಜಿದಾರರು ಸ್ವಯಂ ಘೋಷಿತ ಬೆಳೆ ವಿವರವನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಯಾವುದೇ ರೈತರು ಗೊಂದಲಕ್ಕೆ ಒಳಗಾಗದೇ ಈ ಯೋಜನೆಯಡಿ ವಿಮೆ ನೋಂದಾಯಿಸಿಕೊಳ್ಳಬಹುದಾಗಿದೆ.

ಈ ಕುರಿತು ಯಾವುದೇ ಬ್ಯಾಂಕ್ ಅಥವಾ ಸಾಮಾನ್ಯ ಸೇವಾ ಕೇಂದ್ರ(ಸಿಎಸ್‍ಸಿ)ಗಳಿಂದ ಆಕ್ಷೇಪಣೆ ವ್ಯಕ್ತವಾದಲ್ಲಿ ಸಂಬಂಧಿಸಿದ ಆಯಾಯ ತಾಲ್ಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಅಥವಾ ಲೀಡ್ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬಹುದು. ತಾಲ್ಲೂಕು ದೂರವಾಣಿ ಸಂಖ್ಯೆಗಳಾದ ಶಿವಮೊಗ್ಗ 08182-270415, ಭದ್ರಾವತಿ 08282-26239, ಶಿಕಾರಿಪುರ 08187-223544, ಸೊರಬ 08184-272112, ಸಾಗರ 08183-226193, ತೀರ್ಥಹಳ್ಳಿ 08181-228151, ಹೊಸನಗರ 08185-221364 ನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!