ಭಾರತ ದೇಶದಲ್ಲಿ ಬಹಳಷ್ಟು ಜನಸಂಖ್ಯೆ ಬಡತನ ರೇಖೆ ಗಳಿಗಿಂತ ಕೆಳಮಟ್ಟದಲ್ಲಿದ್ದು ದುಬಾರಿ ಬೆಲೆಯ ಹಣ್ಣುಗಳಾದ ಸೇಬು, ದ್ರಾಕ್ಷಿ, ಕಿತ್ತಳೆ, ಮಾವು, ಬಾಳೆ ಇತ್ಯಾದಿಗಳನ್ನು ಮಾರುಕಟ್ಟೆಗಳಲ್ಲಿ ಖರೀದಿಸಿ ತಿನ್ನುವ ಸಾಮರ್ಥ್ಯವಿಲ್ಲದ ಕಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
ಇದಕ್ಕೆ ಪರ್ಯಾಯವಾಗಿ ಹೆಚ್ಚು ಬಳಕೆಯಿಲ್ಲದ ಮತ್ತು ವ್ಯಾಪಕವಾಗಿ ಬೆಳೆಯುವ ಹಣ್ಣುಗಳಾದ ಜಾಮೂನ್, ಕಾರುಂಡ, ಕಮರಾಕ್ಷಿ, ಬೇಲದಹಣ್ಣು, ಬೆಟ್ಟದನೆಲ್ಲಿ ಮತ್ತು ಹಲಸಿನಹಣ್ಣು ನಮ್ಮ ದೇಶದಲ್ಲಿ ದೊರೆಯುತ್ತವೆ. ಇವುಗಳಲ್ಲಿ ಅತಿಮುಖ್ಯವಾದ ಹಲಸಿನ ಹಣ್ಣು ಹೆಚ್ಚು ಪೋಷಕಾಂಶಗಳಿಂದ ಆಕರ್ಷಕ ಬಣ್ಣ ಔಷಧಿಯ ಗುಣ ಮತ್ತು ಪರಿಮಳ ಸುವಾಸನೆಯಿಂದ ಕೂಡಿದ ಮತ್ತು ಪ್ರಾಮುಖ್ಯತೆ ಪಡೆದಿರುವ ಹಣ್ಣು. ಈ ಹಣ್ಣಿನಲ್ಲಿರುವ ತೊಳೆ, ಬೀಜ ಮತ್ತು ಸಿಪ್ಪೆಯನ್ನು ಸಂಸ್ಕರಿಸಿ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಯಲ್ಲಿ ಅಧಿಕ ಲಾಭ ಪಡೆಯಬಹುದಾಗಿದೆ.
ದೇಶದಲ್ಲಿ ಬಹಳಷ್ಟು ಜನಸಂಖ್ಯೆ ಬಡತನ ರೇಖೆ ಗಳಿಗಿಂತ ಕೆಳಮಟ್ಟದಲ್ಲಿದ್ದು ದುಬಾರಿ ಬೆಲೆಯ ಹಣ್ಣುಗಳಾದ ಸೇಬು, ದ್ರಾಕ್ಷಿ, ಕಿತ್ತಳೆ, ಮಾವು, ಬಾಳೆ ಇತ್ಯಾದಿಗಳನ್ನು ಮಾರುಕಟ್ಟೆಗಳಲ್ಲಿ ಖರೀದಿಸಿ ತಿನ್ನುವ ಸಾಮರ್ಥ್ಯವಿಲ್ಲದ ಕಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಪರ್ಯಾಯವಾಗಿ ಹೆಚ್ಚು ಬಳಕೆಯಿಲ್ಲದ ಮತ್ತು ವ್ಯಾಪಕವಾಗಿ ಬೆಳೆಯುವ ಹಣ್ಣುಗಳಾದ ಜಾಮೂನ್, ಕಾರುಂಡ, ಕಮರಾಕ್ಷಿ, ಬೇಲದಹಣ್ಣು, ಬೆಟ್ಟದನೆಲ್ಲಿ ಮತ್ತು ಹಲಸಿನಹಣ್ಣು ನಮ್ಮ ದೇಶದಲ್ಲಿ ದೊರೆಯುತ್ತವೆ. ಇವುಗಳಲ್ಲಿ ಅತಿಮುಖ್ಯವಾದ ಹಲಸಿನ ಹಣ್ಣು ಹೆಚ್ಚು ಪೋಷಕಾಂಶಗಳಿಂದ ಆಕರ್ಷಕ ಬಣ್ಣ ಔಷಧಿಯ ಗುಣ ಮತ್ತು ಪರಿಮಳ ಸುವಾಸನೆಯಿಂದ ಕೂಡಿದ ಮತ್ತು ಪ್ರಾಮುಖ್ಯತೆ ಪಡೆದಿರುವ ಹಣ್ಣು. ಈ ಹಣ್ಣಿನಲ್ಲಿರುವ ತೊಳೆ, ಬೀಜ ಮತ್ತು ಸಿಪ್ಪೆಯನ್ನು ಸಂಸ್ಕರಿಸಿ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಯಲ್ಲಿ ಅಧಿಕ ಲಾಭ ಪಡೆಯಬಹುದಾಗಿದೆ.
ಇದು ಋತು ಕಾಲದಲ್ಲಿ ಎಲ್ಲ ವರ್ಗದ ಜನರಿಗೆ ಕಡಿಮೆ ಬೆಲೆಗೆ ಹೇರಳವಾಗಿ ದೊರೆಯುವ ಹಣ್ಣು. ಹಲಸಿನ ಹಣ್ಣಿನಲ್ಲಿ ತೊಳೆಗಳು ಬೀಜಗಳು ಮತ್ತು ದಿಂಡು ಎಂಬ ಮೂರು ಪ್ರತ್ಯೇಕ ವಿಭಾಗಗಳಿರುತ್ತವೆ ಇಂದಿನ ತೊಳೆಗಳನ್ನು ಬಿಡಿಸಿ ತಿನ್ನುವುದು ಸಾಮಾನ್ಯ ವಾಡಿಕೆ. ಬೀಜ ಮತ್ತು ದಿಂಡಿನ ಪ್ರಾಮುಖ್ಯತೆ ಬಹಳಷ್ಟು ಗೊತ್ತಿಲ್ಲದ ಕಾರಣ ಯಾವುದಕ್ಕೂ ಪ್ರಯೋಜನವಾಗದೆ ನಷ್ಟವಾಗುತ್ತಿರುವ ಸಾಮಾನ್ಯವಾಗಿದೆ. ಇಂತಹ ಸಂದರ್ಭಗಳಲ್ಲಿ ಹಣ್ಣಿನ ತೊಳೆ ಬೀಜ ಮತ್ತು ದಿಂಡುಗಳನ್ನು ಸಂಸ್ಕರಿಸಿ ಮೌಲ್ಯವರ್ಧಿತ ಉತ್ಪನ್ನಗಳ ಆದ ಹಲ್ವಾ, ಚಿಪ್ಸ್ ,ತಿಂಡಿ, ಹಪ್ಪಳ, ಸ್ಕ್ವಾಷ್, ಹಣ್ಣಿನ ರಸ, ಕ್ಯಾಂಡಿ, ಶ್ರೀಕಂಡ ಹಣ್ಣಿನ ಬೀಜದ ಪುಡಿ, ಒಣಗಿಸಿದ ಹೋಳುಗಳು, ಬಲಿತಿಲ್ಲ ಎಳೆಯ ದಿಂಡಿನಿಂದ ಉಪ್ಪಿನಕಾಯಿ ಮತ್ತು ಪೆಕ್ಟಿನ್ ಇತರೆ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಬಹುದಾಗಿದೆ.
ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳು (ಪ್ರತಿ 100 ಗ್ರಾಂ. ಗೆ)
ಶಕ್ತಿ -. 95 ಕಿಲೋ ಕ್ಯಾಲೋರಿ, ಶರ್ಕರಪಿಷ್ಟ -. 23.5 ಗ್ರಾಂ, ಸಾರಜನಕ. -1.72 ಗ್ರಾಂ
ಕೊಬ್ಬು -. 0.64 ಗ್ರಾಂ, ಕೊಲೆಸ್ಟ್ರಾಲ್ – 0 ಗ್ರಾಂ, ನಾರಿನಂಶ -. 1.5 ಗ್ರಾಂ
ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ), ಕೆ.ವಿ.ಕೆ., ಶಿವಮೊಗ್ಗ , 93539 78995