
ಶಿವಮೊಗ್ಗದ ಹರ್ಷ ದಿ ಫರ್ನ್ ಹೋಟೆಲ್ನಲ್ಲಿ ಹೈದರಾಬಾದ್ ಆಹಾರ ಉತ್ಸವ ಹಮ್ಮಿಕೊಂಡಿದ್ದು, ಕಾರ್ಯನಿರ್ವಾಹಕ ಚೆಫ್ ಅನುಜ್ ಪುರ್ವಾಲ್ ಅವರು ಪಾಕಶಾಲೆಯಲ್ಲಿ 15 ವರ್ಷ ಅನುಭವ ಇದ್ದು, ಪ್ರತಿಷ್ಠಿತ ಹೊಟೇಲ್ ಬ್ರಾಂಡ್ಗಳೊಂದಿಗೆ ಕೆಲಸ ಮಾಡಿದ್ದಾರೆ. ಇವರ ವೃತ್ತಿ ಅನುಭವದ ಜತೆಯಲ್ಲಿ ಹೈದರಾಬಾದಿ ಆಹಾರದ ಉತ್ಸವ ಹಮ್ಮಿಕೊಳ್ಳಲಾಗಿದೆ.

ಹೈದರಾಬಾದಿ ಆಹಾರ ಉತ್ಸವ ಮತ್ತು ಸಿಗ್ರೇಚರ್ ಡ್ರೈನಿಂಗ್ ಅನುಭವವು ಜೂನ್ 17ರಿಂದ 25ರವರೆಗೆ 9 ದಿನಗಳ ಕಾಲ ಇರಲಿದೆ. ಸಂಜೆ 7ರ ನಂತರ ಆಹಾರ ಉತ್ಸವ ನಡೆಯಲಿದೆ. ಸ್ಟಾರ್ಟರ್ ಮತ್ತು ಮುಖ್ಯ ಕೋರ್ಸ್ ಆಹಾರಗಳನ್ನು ಒಳಗೊಂಡಿದೆ. ಹೈದರಾಬಾದಿ ಫಿಶ್ ಫ್ರೈ, ಮೆಜೆಸ್ಟಿಕ್ ಚಿಕನ್ 65,ಬಗರ ಬೈಂಗನ್, ದಮ್ ಕಾ ಪನೀರ್, ಖಟ್ಟಿ ದಾಲ್, ಚಾರ್ಮಿನಾರ್ ಗೋಲ್ಡನ್ ಕೊಯಿನ್, ನಿಜಾಮಿ ಮುರ್ಗ್ ಹಂಡಿ, ಹೈದರಾಬಾದಿ ಚಿಕನ್ ಬಿರಿಯಾನಿ, ಮಟರ್ ಬಾರಿಸ್ತಾ ಪುಲಾವ್, ವೆಜ್ ಕೀಮಾ ಪಾವ್ ಇರಲಿದೆ.

ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳಮಿಶ್ರಣವಾಗಿದೆ. ರುಚಿಕರವಾದ ಸಿಹಿತಿಂಡಿಗಳಿಲ್ಲದ ಹೈದರಾಬಾದಿ ಊಟ ಪೂರ್ಣಗೊಳ್ಳುವುದಿಲ್ಲ. ಸಿಹಿಯಾದ ಖಾದ್ಯಗಳು ಇರಲಿವೆ. ಡಬಲ್ ಕಾ ಮೀಠಾ, ಫಿರ್ನಿ, ಕುಬಾನಿ ಕಾ ಮೀಠಾ ಮುಂತಾದ ಶ್ರೀಮಂತ ಸಿಹಿತಿಂಡಿಗಳನ್ನು ಆಯ್ಕೆ ಮಾಡಬಹುದು.