News Next

ಶಿವಮೊಗ್ಗ, ಜೂನ್-24 : ಕೇಂದ್ರ ಸರ್ಕಾರದಿಂದ ಆತ್ಮನಿರ್ಭರ ಭಾರತ್ ಅಭಿಯಾನದ ಭಾಗವಾಗಿ “ಆಪರೇಷನ್ ಗ್ರೀನ್ಸ್” (ಶಾರ್ಟ್‍ಟರ್ಮ್ ಇಂಟರ್‍ವೆನ್ಶನ್ ಫಾರ್ ಫ್ರೂಟ್ಸ್ & ವೆಜಿಟೇಬಲ್ಸ್) ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.
ಈ ಕಾರ್ಯಕ್ರಮದಡಿ ಹಣ್ಣು ಮತ್ತು ತರಕಾರಿ ಸಾಗಾಣಿಕೆ ಹಾಗೂ ಶೇಖರಣೆಗಾಗಿ ಸಂಸ್ಕರಣೆದಾರರು, ರೈತರು, ರೈತ ಉತ್ಪಾದಕ ಸಂಸ್ಥೆ ಮತ್ತು ರೈತರ ಗುಂಪು, ವರ್ತಕರು, ಲೈಸನ್ಸ್ ಹೊಂದಿರುವ ಕಮಿಷನ್ ಏಜೆಂಟ್ಸ್, ರಫ್ತುದಾರರು ಹಾಗೂ ಇನ್ನಿತರೆ ಭಾಗಿದಾರರಿಗೆ ಶೇ.50 ರಷ್ಟು ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಹಣ್ಣು ಮತ್ತು ತರಕಾರಿ ಬೆಳೆಗಾರರು ವಿಶೇಷವಾಗಿ ಕೋವಿಡ್ ಲಾಕ್‍ಡೌನ್‍ನಂತಹ ಸಮಯದಲ್ಲಿ ತಾವು ಬೆಳೆದ ಉತ್ಪನ್ನಗಳನ್ನು ಸರಿಯಾಗಿ ಮಾರಾಟ ಮಾಡಲು ಸಾಧ್ಯವಾಗದೇ ಅನುಭವಿಸಿದ ಕಷ್ಟನಷ್ಟಗಳನ್ನು ಹಾಗೂ ಕೋಯ್ಲೋತ್ತರ ನಂತರದ ಉತ್ಪನ್ನಗಳ ನಷ್ಟವನ್ನು ಕಡಿಮೆಗೊಳಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ಈ ಯೋಜನೆಯ ಮಾರ್ಗಸೂಚಿ ಪ್ರಕಾರ ಹಣ್ಣು ಮತ್ತು ತರಕಾರಿ ಉತ್ಪನ್ನಗಳ ಸಾಗಾಣಿಕೆಗೆ ಮತ್ತು ಶೇಖರಣೆಗೆ ಶೇ.50 ರಂತೆ ಸಹಾಯಧನ ನೀಡಲು ಅವಕಾಶವಿರುತ್ತದೆ.

ಜಿಲ್ಲೆಯಲ್ಲಿನ ಹಣ್ಣು ಮತ್ತು ತರಕಾರಿ ಬೆಳೆಗಾರರು ಈ ಯೋಜನೆಯಡಿ ಅರ್ಹ ಬೆಳೆಗಳು, ಸಹಾಯಧನ ಪಡೆಯಲು ಅರ್ಹ ಮಾನದಂಡಗಳು ಮತ್ತು ಅಗತ್ಯವಿರುವ ದಾಖಲಾತಿಗಳು ಇತರೇ ಹೆಚ್ಚಿನ ಮಾಹಿತಿಗಾಗಿ ಆಯಾಯ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಯೋಜನೆಯ ಸದುಪಯೋಗಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ತಾಲ್ಲೂಕುವಾರು ತೋಟಗಾರಿಕೆ ಕಚೇರಿ ದೂರವಾಣಿ ಸಂಖ್ಯೆಗಳಾದ ಶಿವಮೊಗ್ಗ 08182-270415, ಭದ್ರಾವತಿ 08282-268239, ಶಿಕಾರಿಪುರ 08187-223544, ಸೊರಬ-08184-272112, ಸಾಗರ 08183-226193, ತೀರ್ಥಹಳ್ಳಿ 08181-2281514, ಹೊಸನಗರ 08185-221364 ನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಜೂ.25 ರಂದು ಜನಸಂಪರ್ಕ ಸಭೆ

ಶಿವಮೊಗ್ಗ, ಜೂನ್-24: ಜೂನ್ 25 ರ ಬೆಳಿಗ್ಗೆ 10.30 ಕ್ಕೆ ನಗರ ಉಪವಿಭಾಗ-3 ರಲ್ಲಿ ಮೆಸ್ಕಾಂ ಅಧಿಕಾರಿಗಳು ಜನಸಂಪರ್ಕ ಸಭೆ ನಡೆಸಲಿದ್ದು, ಈ ವ್ಯಾಪ್ತಿಯ ಗ್ರಾಹಕರಿಂದ ಅಹವಾಲುಗಳನ್ನು ಸ್ವೀಕರಿಸುವರು. ಆದ್ದರಿಂದ ನಗರ ಉಪವಿಭಾಗ-3 ರ ಗ್ರಾಹಕರು ಈ ಸಭೆಯ ಸದುಪಯೋಗ ಪಡೆಯಬಹುದೆಂದು ಮೆಸ್ಕಾಂ ಉಪವಿಭಾಗ-3 ರ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

error: Content is protected !!