ಚಿಕ್ಕ ಮಕ್ಕಳಿಗೆ ಮೂಲಭೂತ ಸಾಮರ್ಥ್ಯ, ಸೃಜನಾತ್ಮಕ ಕಲಿಕೆ, ಪರಸ್ಪರ ಮಾತುಕತೆಗಳ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಲು ಕಿಡ್ಸ್ ಅಕಾಡೆಮಿ ಸಹಕಾರಿಯಾಗಿದೆ ಎಂದು ಪಿಇಎಸ್ ಸಮೂಹ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಡಾ|| ನಾಗರಾಜ ಆರ್ ಅವರು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.
ಪಿಇಎಸ್ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆದ UKG ವಿದ್ಯಾರ್ಥಿಗಳ GRADUATION DAY 2023
ಸಮಾರಂಭದಲ್ಲಿ ಮಾತನಾಡುತ್ತಾ ಮಕ್ಕಳು ಪರಸ್ಪರ ಬೆರೆಯಲು, ಆಟವಾಡಲು, ಇತರರ ಜೊತೆ ವ್ಯವಹರಿಸಲು ಕಲಿಯುವುದರ ಜೊತೆಗೆ ಶಿಕ್ಷಕರು ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹುಟ್ಟಿಸಿ ಭಾಷೆಯ ಬಗ್ಗೆ, ಓದಿನ ಉಚ್ಚಾರಣೆ ಹಾಗೂ ನಡುವಳಿಕೆಗಳ ಬಗ್ಗೆ ಆಸಕ್ತಿದಾಯಕವಾಗಿ ತಿಳಿಸಿಕೊಡುತ್ತಾರೆ. ವಿದ್ಯಾರ್ಥಿಗಳು ದೈಹಿಕ, ಮಾನಸಿಕ, ಬುದ್ದಿಮತ್ಯ,
ಆಧ್ಯಾತ್ಮಿಕ ಹಾಗು ಶಿಸ್ತು, ಸಮರ್ಪಣೆ, ನಿರ್ಣಯ, ಈ ಎಲ್ಲಾ ಅಂಶಗಳನ್ನು ಜೀವನದಲ್ಲಿ ಸರಿಯಾದ ರೀತಿಯಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿ ಹೇಳಿದರು. ಇದೇ ಸಂದರ್ಭದಲ್ಲಿ ಸರಸ್ವತಿ ಪೂಜೆ ಹಾಗು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ತಾರಮಂಡಲ ಸಿರಿಗನ್ನಡ ಬಳಗ ಹಾಗೂ ಚಿಂತನ ಪ್ರಕಾಶನ ಚಿತ್ರದುರ್ಗ ಇವರುಗಳು ಆಯೋಜಿಸಿರುವ ಕನ್ನಡ, ಚಿತ್ರಕಲೆ, ವಿಜ್ಞಾನ ಹಾಗೂ ಗಣಿತ ಪರೀಕ್ಷೆಗಳಲ್ಲಿ ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ
ಬಹುಮಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ವಾರ್ಷಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರ ಹಾಗು ಟ್ರೋಫಿಯನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರು, ಸಂಯೋಜಕರು, ಬೋಧಕ ಬೋಧಕೇತರ ವರ್ಗದವರು, ಕಿಡ್ಸ್ ಅಕಾಡಮಿಯ ಪೋಷಕರು
ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.