ನಾಗರೀಕರು ಅಭಿಪ್ರಾಯ ದಾಖಲಿಸಲು ಮನವಿ
ಶಿವಮೊಗ್ಗ ನವೆಂಬರ್ 09 : ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸೂಚನೆ ಮೇರೆಗೆ ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಶಿವಮೊಗ್ಗ ನಗರಕ್ಕೆ ಸಂಬಂಧಿಸಿದಂತೆ ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕವನ್ನು ತಯಾರಿಸುವ ಸಲುವಾಗಿ ನಾಗರೀಕ ಅಭಿಪ್ರಾಯ ಸಂಗ್ರಹಣೆಯ ಸಮೀಕ್ಷೆ ಕಾರ್ಯವನ್ನು ನ.09 ರಿಂದ ಡಿ.23 ರವರೆಗೆ ಕೈಗೊಳ್ಳಲಾಗುವುದು.
ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಹರ್‍ದೀಪ್ ಸಿಂಗ್ ಪುರಿ ಇವರು ನ.9 ರಂದು ಮಧ್ಯಾಹ್ನ 2.30 ಕ್ಕೆ ವರ್ಚುಯಲ್ ಆಗಿ ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ ತಯಾರಿಸಲು ಮಾಡುತ್ತಿರುವ ಸಮೀಕ್ಷೆ ‘ಸಿಟಿಜೆನ್ ಪರ್‍ಸೆಪ್ಷನ್ ಸರ್ವೇ’ ಕಾರ್ಯವನ್ನು ಉದ್ಘಾಟಿಸಿದರು.
ವಿವಿಧ ಇಲಾಖೆಗಳಡಿ ನಾಗರೀಕರಿಗೆ ದೊರೆತ ಸೌಲಭ್ಯಗಳ ಮೌಲ್ಯಮಾಪನ ಮಾಡಿ, ಅನುಷ್ಟಾನಗೊಂಡ ಯೋಜನೆಗಳು, ನಾಗರೀಕರ ಜೀವನ ಮಟ್ಟ, ಆರ್ಥಿಕ ಸಾಮಥ್ರ್ಯ ಮತ್ತು ಸುಸ್ಥಿರತೆಯನ್ನು ಪ್ರತಿಬಿಂಬಿಸುವಲ್ಲಿ ಶಿವಮೊಗ್ಗ ನಗರವು ಯಾವ ಸ್ಥಾನದಲ್ಲಿದೆ ಎಂಬುದನ್ನು ಅರಿಯಲು ಈ ಸಮೀಕ್ಷಾ ಸೂಚ್ಯಂಕ ಸಹಕಾರಿಯಾಗಿದೆ. ಹಾಗೂ ಈ ಸೂಚ್ಯಂಕದ ಆಧಾರದ ಮೇಲೆ ನಗರ ಯೋಜನೆಗಳ ನೀತಿ ನಿರೂಪಣೆ ಮತ್ತು ಯೋಜನೆಗಳ ಅನುಷ್ಟಾನವನ್ನು ಸರ್ಕಾರ ಕೈಗೊಳ್ಳುತ್ತದೆ. ಸಮೀಕ್ಷಯು ಆಫ್‍ಲೈನ್ ಮತ್ತು ಆನ್‍ಲೈನ್ ಮೂಲಕ ಇದ್ದು, ಕ್ಯೂ ಆರ್ ಕೋಡ್ ಮೂಲಕ ಹಾಗೂ https://eoj2022.org/ ಲಿಂಕ್ ಬಳಸಿ ಸಿಟಿಜೆನ್ ಪರ್‍ಸೆಪ್ಷನ್ ಸರ್ವೇ(Citizen Perception Survey) ಎಂಬ ಈ ಸಮೀಕ್ಷೆಯಲ್ಲಿ ಶಿವಮೊಗ್ಗ ನಗರದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ದಾಖಲಿಸುವಂತೆ ಶಿವಮೊಗ್ಗ ಸ್ಮಾರ್ಟ್‍ಸಿಟಿ ಲಿ. ನ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಕೋರಿದ್ದಾರೆ.