
ಅಡಿಕೆ ಹಾಳೆಯಿಂದ ಚಪ್ಪಲಿ, ಡೈರಿ, ಪೆನ್ ಸ್ಟಾಂಡ್, ಹಾಗು ಇನ್ನಿತರ ವಸ್ತುಗಳನ್ನು ತಯಾರಿಸಿ ಅಡಿಕೆ ಹಾಳೆಯಿಂದಲೂ ಕೂಡ ಉಪಯೋಗಕ್ಕೆ ಬರುವ ವಸ್ತುಗಳನ್ನು ತಯಾರು ಮಾಡಬಹುದು ಎಂದು ತೋರಿಸಿ ಕೊಟ್ಟಂತಹ ಶಿವಮೊಗ್ಗದ ಸುರೇಶ್ ಹಾಗೂ ಮೈಥಲಿ ದಂಪತಿಗಳ ಕಾರ್ಯ ಶ್ಲಾಘನೀಯ
ಜಿಲ್ಲೆಯ ಸುರೇಶ್ ಹಾಗೂ ಮೈಥಲಿ ದಂಪತಿಗಳು ತಯಾರಿಸಿದಂತಹ ಅಡಿಕೆ ಹಾಳೆಯ ಉತ್ಪನ್ನಗಳ ಸುದ್ದಿಯನ್ನು ರಾಷ್ಟ್ರೀಯ ವಾಹಿನಿಯಾದ ದೂರದರ್ಶನ ಶಿವಮೊಗ್ಗದಿಂದ ವರದಿ ಮಾಡಿತ್ತು ಇದನ್ನು ಗಮನಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶದ ಗಮನ ಸೆಳೆದಿರುವ ಅಡಿಕೆ ಹಾಳೆಯ ಉತ್ಪನ್ನಗಳ ಬಗ್ಗೆ ಮಾತನಾಡಿದ್ದರು
ಸುರೇಶ್ ಹಾಗೂ ಮೈಥಲಿ ದಂಪತಿಗಳ ಮನೆಗೆ ಶಾಸಕರಾದ ಶ್ರೀ ಕೆ. ಎಸ್.ಈಶ್ವರಪ್ಪ ನವರು ಭೇಟಿ ನೀಡಿ ಅಭಿನಂದಿಸಿದರು.