ವರದಿ: ಜಯಂತ್ ಮೈಸೂರು
ಇಂದು ಬೆಳಿಗ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹೆಚ್.ವಿಶ್ವನಾಥ್ ಸರ್ಕಾರ ಪತನಕ್ಕೆ ನಾವು ೨೦ ಜನ ಕಾರಣರಲ್ಲ ವಿಶ್ವನಾಥ್ ಹೇಳಿಕೆ. ನಾನು ಹುಣಸೂರಿನ ಮತದಾರರನ್ನ ಕ್ಷಮೆ ಕೇಳುತ್ತಿದ್ದೇನೆ. ರಾಜೀನಾಮೆ ನೀಡುವ ಸನ್ನಿವೇಶ ಸೃಷ್ಟಿಯಾಯಿತು. ಇದಕ್ಕಾಗಿ ಸಾರ್ವಜನಿಕರಲ್ಲಿ ಹಾಗು ಹುಣಸೂರು ಮತದಾರರಲ್ಲಿ ಕ್ಷಮೆ ಯಾಚಿಸುತ್ತೇನೆ.
ದೇವೇಗೌಡರನ್ನ ಕ್ಷಮೆ ಕೇಳುತ್ತೇನೆ ಸನ್ನಿವೇಶದ ಒತ್ತಡದಿಂದ ನಿರ್ಲಕ್ಷ್ಯ ದಿಂದ ಎರಡು ಸ್ಥಾನಗಳಿಗೂ ರಾಜಿನಾಮೆ ಕೊಟ್ಟಿದ್ದೇನೆ ಪಾಲುದಾರ ಪಕ್ಷಗಳಿಂದಲೇ ಸರ್ಕಾರ ಪತನವಾಗಿದೆ ಇದಕ್ಕೆಲ್ಲಾ ಆವರೇ ನೇರ ಹೊಣೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿ ಮತ್ತೊಂದು ಸರ್ಕಾರ ಸ್ಥಾಪನೆಯಾಗಿದೆ.
ಪತನಕ್ಕೆ ಬಿಜೆಪಿ ಹೊಣೆಯಲ್ಲ. ಈ ಎರಡು ಬೆಳವಣಿಗೆಗೆ ಮೈತ್ರಿ ಪಕ್ಷದ ನಾಯಕರೇ ಕಾರಣ. ನಮ್ಮನ್ನ ಅವರು ಶಾಸಕರು ಅಂತಾನೆ ನೋಡಲಿಲ್ಲ. ಅವರು ಎರಡು ಪಕ್ಷದ ಶಾಸಕರಿಗೆ ಗೌರವ ಕೊಡಲಿಲ್ಲ. ಹೀಗಾಗಿ ನಾವ್ಯಾರು ಪತನಕ್ಕೆ ಕಾರಣ ಅಲ್ಲ ಎಂದು ವಿಶ್ವನಾಥ್ ಹೇಳಿದರು.
20 ಜನ ಶಾಸಕರು ಮಂತ್ರಿಗಳನ್ನು ಒಳಗೊಂಡಂತೆ ರಾಜೀನಾಮೆ ನೀಡಿದ್ದು ಇತಿಹಾಸ. ಇದು ರಾಜ್ಯದ ವಿಶೇಷ ಬೆಳವಣಿಗೆ. ಇದಕ್ಕೆಲ್ಲ ಆ ಸಮ್ಮಿಶ್ರ ಸರ್ಕಾರದ ಹಿರಿಯ ನಾಯಕರು ಹಾಗೂ ಮಾಜಿ ಸಿಎಂ ಅವರೇ ಕಾರಣ. ಇದು ಆಪರೇಷನ್ ಕಮಲವಲ್ಲ ದುಡ್ಡಿಗಾಗಿ ನಾವು ಮಾರಿಕೊಂಡಿಲ್ಲ, ಪದವಿಗಾಗಿ ಆಸೆಪಟ್ಟು ರಾಜಿನಾಮೆ ಕೊಟ್ಟಿಲ್ಲ, ಅವಮಾನ ತಾಳದೆ ರಾಜಿನಾಮೆ ಕೊಟ್ಟಿದ್ದೇವೆ ದೇವೇಗೌಡರ ಪೋಟೋನ ಇವತ್ತು ಕೂಡ ದೇವರ ಮನೆಲಿ ಇಟ್ಟು ಪೂಜೆ ಮಾಡ್ತಿನಿ.ಈಗಲೂ ದೇವೇಗೌಡರ ಕ್ಷಮೆಯಾಚಿಸುತ್ತೇನೆ.
ಮೈಸೂರಿನಲ್ಲಿ ಹೆಚ್.ವಿಶ್ವನಾಥ್ ಹೇಳಿಕೆ.
ಸಾ.ರಾ.ಮಹೇಶ್ರಂತಹ ಅಪ್ರಬುದ್ದರು ಮಾತನಾಡುತ್ತಾರೆ. ದುಡ್ಡಿಗಾಗಿ ಪಕ್ಷ ಬಿಟ್ಟರು ಅಂತ ಹೇಳ್ತಾರೆ ರಾಜೀನಾಮೆ ನೀಡಿದವರಲ್ಲ ದುಡ್ಡಿನ ಕುಳಗಳೆ.ಮೈಸೂರಿನಲ್ಲಿ ಹೆಚ್.ವಿಶ್ವನಾಥ್ ಹೇಳಿಕೆ.ನಾವು ಅತೃಪ್ತರಲ್ಲ. ಪಾಲುದಾರ ಪಕ್ಷದವರೇ ನೀವೆ ಅತೃಪ್ತರು. ನಿಮ್ಮ ಪರಸ್ಪರ ಹೊಂದಾಣಿಕೆ ಇಲ್ಲದೆ ಇರೋದೆ ಪತನಕ್ಕೆ ನಾಂದಿಯಾಗಿತ್ತು. ಸಿಎಲ್ಪಿ ಸಭೆಯಲ್ಲೆ ಅವರು ಅತೃಪ್ತಿ ವ್ಯಕ್ತ ಪಡಿಸಿದ್ದರು.ಇವಲ್ಲ ಪತನಕ್ಕೆ ಕಾರಣವಾಯಿತು. ಮುಖ್ಯಮಂತ್ರಿ ಕುಮಾರಸ್ವಾಮಿರನ್ನ ಕಾಂಗ್ರೆಸ್ ಕೆಲ ನಾಯಕರ ಒಪ್ಪಿಕೊಳ್ಳಲಿಲ್ಲ. ಇವರು ಸಿಎಂ ಥರ ಕಾಣಲೇ ಇಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಅವರ ಹೊಂದಾಣಿಕೆ ಕೊರತೆಯೆ ಪತನಕ್ಕೆ ಕಾರಣವಾಯಿತು.ಎಂದು ಹೇಳಿದರು.
ಸರ್ಕಾರ ಪತನಕ್ಕೆ ನಾವು ಕಾರಣ ಅಲ್ಲ.ನಿನ್ನೆ ಕೆ.ಆರ್.ಪೇಟೆಯಲ್ಲಿ ಹೇಳಿದ್ದಾರೆ ಮಂಡ್ಯ ಜನ ವಿಷ ಉಣಿಸಿದ್ರು ಅಂತ.ಆದ್ರೆ ನಿಜವಾಗಿಯೂ ವಿಷ ಉಣಿಸಿದ್ದು ಸಾ.ರಾ.ಮಹೇಶ್. ದೇವೇಗೌಡರ ಕುಟುಂಬ ಹಾಳಾಗಲು ಸಾ.ರಾ.ಮಹೇಶ್ ಕಾರಣ. ಮೈಸೂರಿನಲ್ಲಿ ಹೆಚ್.ವಿಶ್ವನಾಥ್ ಗಂಭೀರ ಆರೋಪ. ಕುಮಾರಸ್ವಾಮಿ ಬಗ್ಗೆ ಏನೂ ಹೇಳಲ್ಲ ಲಗಾಮು ತಪ್ಪಿ ಚಕ್ರ ಉರುಳಿತು ಈ ಬೆಳವಣಿಗೆಗೆ ಕಾರಣ ಸಾ.ರಾ.ಮಹೇಶ್
ಲೋಕಸಭಾ ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿ ರಾಜೀನಾಮೆ ಕೊಟ್ರು.ನಾನು ರಾಜ್ಯದಲ್ಲಿನ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ. ಆದರೆ ಸಿದ್ದರಾಮಯ್ಯನವ್ರೇ ನೀವು ಯಾವಾಗ ರಾಜೀನಾಮೆ ಕೊಡ್ತಿರಾ.? ನೀವಿನ್ನು ಗೂಟಾ ಹೊಡ್ಕೊಂಡು ಅಲ್ಲೇ ಕೂತಿದ್ದೀರಾಲ್ಲ ಸಿದ್ದರಾಮಯ್ಯನವ್ರೇ.? ಮೈಸೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಗುಡುಗು.ರಾಜ್ಯದ ಜನ ನಿಮಗೆ ಹೀನಾಯವಾಗಿ ಸೋಲಿಸಿದ್ರು. ಯಾರು ನಿಮಗೆ ಡಿಸಿಎಂ ಮಾಡಿದ್ರೋ, ಅವ್ರಿಗೆ ಖೆಡ್ಡಾ ತೋಡಿದ್ರು.ತುಮಕೂರಿಗೆ ಕರ್ಕೊಂಡು ಹೋಗಿ ದೇವೇಗೌಡರಿಗೆ ಖೆಡ್ಡಾ ತೋಡಿ ಬೀಳಿಸಿದ್ರು.
ಮೈಸೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಆಕ್ರೋಶ
ಕೆ.ಆರ್.ನಗರದಲ್ಲಿ ರಾಹುಲ್ ಗಾಂಧಿ ಭೇಟಿಗೆ ಬಿಡಲಿಲ್ಲ. ಅವರ ಅಜ್ಜಿ ಕೆ.ಆರ್.ನಗರಕ್ಕೆ ಬಂದಿದ್ದಾಗ ನಾನು ಭೇಟಿ ಮಾಡಿದ್ಧೆ. ಅಂತೇಯೆ ಅವರ ಮೊಮ್ಮೊಗರನ್ನ ಭೇಟಿ ಮಾಡಲು ರೆಡಿಯಾಗಿದ್ದೆ. ಹೊರಡಲು ಸಿದ್ದವಾಗದಾಗ ಮೆಸೆಜ್ ಮಾಡಿದ್ರು ಸಿದ್ದರಾಮಯ್ಯ ಇದ್ದಾರೆ ಬರಬೇಡಿ ಅಂತ. ಸಿದ್ದರಾಮಯ್ಯ ನೀವು ಒಂದೆ ವೇದಿಕೆಯಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದ್ರು.
ನನ್ನ ಸಿದ್ದರಾಮಯ್ಯ ನಡುವೆ ಇವರೇ ಕಂದಕ ಸೃಷ್ಟಿ ಮಾಡಿದ್ರು. ಸಿದ್ದರಾಮಯ್ಯ ಇದ್ದಾರೆ ಮೀಟಿಂಗ್ ಬರಬೇಡಿ ಅಂತಾರೆ.ಸಿದ್ದರಾಮಯ್ಯ ಇದ್ದಾರೆ ಸಮನ್ವಯ ಸಮಿತಿಗೆ ಬರಬೇಡಿ. ಸಿದ್ದರಾಮಯ್ಯ ಇದ್ದಾರೆ ಅಲ್ಲಿಗೆ ಬರಬೇಡಿ ಇಲ್ಲಿಗೆ ಬರಬೇಡಿ. ಯಾವ ಸಿದ್ದರಾಮಯ್ಯರಿಂದ ಕಾಂಗ್ರೆಸ್ ಬಿಟ್ಟೆ ಅವರೇ ಮತ್ತೆ ಇಲ್ಲಿ ಬಂದು ಕಿರುಕುಳ ಮಾಡಿದ್ರು. ವಿಶ್ವನಾಥ್ ಬರ್ತಾರೆ ಅಂತ ಹೇಳೋ ನೈತಿಕತೆ ನಿಮಗೆ ಇರಲಿಲ್ವಾ ?ಜೆಡಿಎಸ್ ಅಧ್ಯಕ್ಷರಾಗಿದ್ದುಕೊಂಡು ಸಿದ್ದರಾಮಯ್ಯ ಜೊತೆ ಕುಳಿತಿಕೊಳ್ಳಲು ಆಗಲಿಲ್ಲವಲ್ಲ. ಯಾಕೇ ಈ ಪರಿಸ್ಥಿತಿ ನಿರ್ಮಾಣ ಆಯ್ತು ಎಂದು ಹೇಳಿದರು.