
ಶಿವಮೊಗ್ಗ ಜನವರಿ 27 : ನಾಗರೀಕ ವಿಮಾನಯಾನ(ಸಿವಿಲ್ ಏವಿಯೇಷನ್) ಮಂತ್ರಾಲಯದ ಕಾರ್ಯದರ್ಶಿಗಳಾದ ರಾಜೀವ್ ಬನ್ಸಾಲ್ ಅವರು ಇಂದು ಸೋಗಾನೆಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವಿಮಾನ ನಿಲ್ದಾಣದ ಕಾಮಗಾರಿಗಳು, ನಿಲ್ದಾಣದ ಅಂತಿಮ ಸಿದ್ದತೆಗಳ ಕುರಿತು ಪರಿಶೀಲನೆ ನಡೆಸಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಪಿಡಬ್ಲ್ಯುಡಿ ಮುಖ್ಯ ಇಂಜಿನಿಯರ್ ಕಾಂತರಾಜ್, ಇಇ ಸಂಪತ್ ಪಿಂಗಳೆ, ಇತರೆ ಅಧಿಕಾರಿಗಳು ಹಾಜರಿದ್ದರು.