ಮಹಿಳೆಯರು ಮತ್ತು ಮಕ್ಕಳಲ್ಲಿ ಅತಿ ಹೆಚ್ಚು ಅಪೌಷ್ಟಿಕತೆ ಕಾಣಿಸಿಕೊಂಡಿದ್ದು ಭಾರತ ಸರ್ಕಾರದ ಆಹಾರ ಸಚಿವಾಲಯ ಕರ್ನಾಟಕದ ಕೆಲವು ಆಯ್ದ ಜಿಲ್ಲೆಗಳಲ್ಲಿ ಪೌಷ್ಟಿಕ ಅಕ್ಕಿಯನ್ನು ಉಚಿತವಾಗಿ ವಿತರಿಸುತ್ತಿದ್ದು ರಾಜ್ಯದ ಹದಿನಾಲಕ್ಕು ಜಿಲ್ಲೆಗಳಲ್ಲಿ ಯೋಜನೆಯನ್ನು ರೂಢಿಗತಗೊಳಿಸಲಾಗಿದೆ
ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಯೋಜನೆ ಚಾಲತಿಯಲ್ಲಿದ್ದು ಅಂತ್ಯೋದಯ ಪಡಿತರ ಚೀಟಿ ಹೊಂದಿರುವ 38,000 ಜನರಿಗೆ ನೀಡಲಾಗಿದೆ ಬಡತನ ರೇಖೆಗಿಂತ ಕೆಳಗಿರುವಂತಹ ಪಡಿತರ 10 ಲಕ್ಷ ಫಲಾನುಭವಿಗಳಿಗೆ ಯೋಜನೆ ರೂಡಿಗತವಾಗಿದ್ದು ಜಿಲ್ಲೆಯಲ್ಲಿ ಪ್ರತಿ ತಿಂಗಳು ಈ ರೀತಿಯ ಪಡಿತರ ನೀಡಲಾಗುತ್ತದೆ ಫಲಾನುಭವಿಗಳು ಕೇಂದ್ರ ಸರ್ಕಾರದ ಯೋಜನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ ಸಾರವರ್ದಿತಾ ಅಕ್ಕಿ ಬಳಸುವಿಕೆ ಜನರಲ್ಲಿ ಸಂತಸ ತಂದಿದೆ
ಸಾರವರ್ದಿತ ಅಕ್ಕಿ ನೋಡಲು ಸಾಧಾರಣ ಅಕ್ಕಿಯಂತೆ ಇರುತ್ತದೆ ಆದರೆ ಇದರಲ್ಲಿ ಪೌಷ್ಟಿಕಾಂಶಗಳು ಸೇರಿ ಅತ್ಯಂತ ಪುಷ್ಟಿದಾಯಕವಾಗಿರುತ್ತದೆ ಗರ್ಭಿಣಿ ಹೆಂಗಸರಲ್ಲಿ ಭೂರ್ಣದ ಬೆಳವಣಿಗೆ ರಕ್ತದ ಉತ್ಪಾದನೆಗೆ ಸಹಕಾರಿಯಾಗಿದೆ ಅಲ್ಲದೆ ರಕ್ತಹೀನತೆಯ ವಿರುದ್ಧ ಇದು ಹೋರಾಡುತ್ತದೆ ನರಮಂಡಲದ ಕಾರ್ಯಗಳು ಸರಾಗವಾಗಿ ನಡೆಯುವಂತೆ ಮಾಡುತ್ತದೆ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಪ್ರತಿದಿನ ಸಾರವರ್ದಿತ ಅಕ್ಕಿಯ ಬಗ್ಗೆ ಅರಿವನ್ನು ಮೂಡಿಸುತ್ತಿದ್ದಾರೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಅಕ್ಕಿ ವಿತರಿಸಲಾಗುತ್ತಿದೆ
ಡಾ. ಮಂಜುನಾಥ್ ಜಂಟಿ ನಿರ್ದೇಶಕರು ಆಹಾರ ಮತ್ತು ನಾಗರಿಕ ಇಲಾಖೆ ಶಿವಮೊಗ್ಗ ಮಾಹಿತಿ
ನೀಡಿ ಸಾರವರ್ದಿತ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಕೂಡ ಬಡತನ ರೇಖೆಗಿಂತ ಕೆಳಗಿರುವವರಿಗೆ ಈ ಅಕ್ಕಿಯನ್ನು ವಿತರಿಸಲಾಗುತ್ತಿದೆ ಕರ್ನಾಟಕದ 14 ಜಿಲ್ಲೆಗಳನ್ನು ಈ ಯೋಜನೆಯಲ್ಲಿ ಆಯ್ಕೆ ಮಾಡಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಅಕ್ಕಿ ವಿತರಿಸುತ್ತಿದ್ದೇವೆ
ಆಶಾ ಹಿರೇಮಠ್ ಗ್ರಾಹಕಿ ಮಾತನಾಡಿ
ನಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ಸಾರವರ್ಧಿತ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ ಇದನ್ನು ನಾವು ಬಳಸುವುದರಿಂದ ಪೌಷ್ಟಿಕತೆಗೆ ಪೂರಕವಾಗಿದೆ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆಗಳು ಎಂದು ತಿಳಿಸಿದರು
ಅರುಣ್ ಘಾಟೆ ಮಾತನಾಡಿ ಭಾರತ ಸರ್ಕಾರ ನೀಡುತ್ತಿರುವ ಸಾರವರ್ಧಿತ ಅಕ್ಕಿಯಿಂದ ನಮಗೆ ತುಂಬಾ ಅನುಕೂಲವಾಗಿದೆ ಪೌಷ್ಟಿಕಾಂಶ ಇರುವಂತ ಈ ಅಕ್ಕಿ, ಮನೆಯಲ್ಲಿರುವ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಆರೋಗ್ಯ ದೃಷ್ಟಿಯಿಂದಲೂ ಪೂರಕವಾಗಿದೆ. ಪೌಷ್ಟಿಕಾಂಶ ದಿಂದ ಕೂಡಿದೆ ಎಂದು ತಿಳಿಸಿದರು.
ಕಿರಣ್ ಕುಮಾರ್ ನ್ಯಾಯಬೆಲೆ ಅಂಗಡಿಯ ಮಾಲೀಕ ಮಾತನಾಡಿ ನಮ್ಮ ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ಮೂರು ತಿಂಗಳಿನಿಂದ ಸಾರವರ್ದಿತ ಅಕ್ಕಿಯನ್ನು ವಿತರಿಸುತ್ತಿದ್ದೇವೆ ಪೌಷ್ಟಿಕಾಂಶಗಳುಳ್ಳ ಈ ಅಕ್ಕಿಯನ್ನು ಜನತೆ ಬಳಸಲು ಆರಂಭಿಸಿದ್ದು ಉತ್ತಮ ಫಲಿತಾಂಶ ದೊರೆಯುತ್ತಿದೆ ಹೆಚ್ಚು ಹೆಚ್ಚು ಜನರು ನ್ಯಾಯಬೆಲೆ ಅಂಗಡಿಗಳಲ್ಲಿ ದೊರೆಯುವ ಅಕ್ಕಿಯನ್ನು ಪಡೆಯುವುದಕ್ಕೆ ಮುಂದಾಗುತ್ತಿದ್ದಾರೆ ಎಂದು ತಿಳಿಸಿದರು.