ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ, ಶಿವಮೊಗ್ಗ ಇದರ ವತಿಯಿಂದ ಹಮ್ಮಿಕೊಂಡ ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನೆಯ ಭಾಗವಾಗಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಸಾಗರ ಇವರ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ವರದಪುರ ಇಲ್ಲಿನ ಜಾನುವಾರುಗಳ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಮೊದಲು ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರದ ವತಿಯಿಂದ ನಾಲ್ಕು ಸಲ ತಪಾಸಣೆ ನಡೆಸಿ, ಅನುಸರಣೆ ಮಾಡಿ ವಿವಿಧ ಚಿಕಿತ್ಸೆಗಳನ್ನು ಸೂಚಿಸಲಾಗಿತ್ತು. ಅಂತೆಯೇ ಡಾ: ಎನ್.ಬಿ.ಶ್ರೀಧರ, ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರು ಇವರು ಪಶುವೈದ್ಯಕೀಯ ಮಹಾವಿದ್ಯಾಲಯದ ವಿವಿಧ ವಿಭಾಗಳ ತಜ್ಞರಾದ ಡಾ: ಬಿ.ಪಿ.ರವಿಕುಮಾರ್, ಡಾ: ಸಂತೋಷ್ ಸಜ್ಜನ್, ಡಾ:ಮಂಜು ಇವರ ಜೊತೆ ಎಲ್ಲಾ ಜಾನುವಾರುಗಳ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಿದರು. ಈಗಾಗಲೇ ಪರೀಕ್ಷಿಸಿ, ಗರ್ಭಧರಿಸದೇ ಇರುವ ಎಲ್ಲಾ ರಾಸುಗಳಿಗೆ “ಅನುತ್ಪಾದಕತೆಯಿಂದ ಉತ್ಪಾದಕತೆಯತ್ತ” ಈ ಯೋಜನೆಯಡಿ ವಿಶೇಷ ಚಿಕಿತ್ಸೆಯನ್ನುನೀಡಲಾಯಿತು.
ಡಾ:ಎನ್.ಬಿ.ಶ್ರೀಧರವರು, ಶ್ರೀ ಕ್ಷೇತ್ರ ವರದಪುರದಲ್ಲಿ ವಿವಿಧ ಭಾಗಗಳ ಜಾನುವಾರುಗಳು ಇರುತ್ತಿದ್ದು ಅವುಗಳಲ್ಲಿ ಹಲವು ಕಾಯಿಲೆಗಳು ಇರುವ ಸಾಧ್ಯತೆ ಇರುತ್ತಿದ್ದು, ಸಂಗ್ರಹಿಸಿದ ಮಾದರಿಗಳನ್ನು ಬ್ರುಸೆಲ್ಲೋಸಿಸ್, ಕ್ಷಯ, ಕೆಚ್ಚಲು ಬಾವು ಇತ್ಯಾದಿಗಳ ಬಗ್ಗೆ ಪ್ರಯೋಗ ಶಾಲೆ ತಪಾಸಣೆಗೆ ಒಳಪಡಿಸಿ, ಅವುಗಳಲ್ಲಿ ರೋಗವೇನಾದರೂ ಇದ್ದರೆ ಅವುಗಳಿಗೆ ಸೂಕ್ತ ಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದರು. ಜಾನುವಾರುಗಳ ಹಲವಾರು ಸಮಸ್ಯೆಗಳು ಕಡಿಮೆಯಾಗಲು ಅವುಗಳನ್ನು ಗೋಶಾಲೆಯ ಲಭ್ಯವಿರುವ ಆವರಣದಲ್ಲೇ ಓಡಾಡಲು ಸ್ಥಳ ನಿರ್ಮಿಸಬೇಕೆಂದು ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರಿಧರ ಹೆಗಡೆಯವರನ್ನು ಕೋರಲಾಯಿತು.
ಈ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಭಾಗದ ರೈತರ ಜಾನುವಾರುಗಳಿಗೂ ವಿಸ್ತರಿಸಿದ್ದು,ರೈತರಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ: ಎನ್. ಹೆಚ್.ಶ್ರೀಪಾದರಾವ್, ಡಾ: ತಿಮ್ಮಪ್ಪ, ಡಾ: ದಯಾನಂದ, ಡಾ:ಸುನಿತಾ ಹಾಗೂ ಪಶುವೈದ್ಯಕೀಯ ಮಹಾವಿದ್ಯಾಲಯದ ಡಾ: ರೇವಣಸಿದ್ದಪ್ಪ, ಡಾ: ಪುನೀತ್, ಡಾ: ಕಲೀಲ್, ಡಾ: ಮಣಿಕಾಂತ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದು ಸಹಕರಿಸಿದರು.
ಈ ಕಾರ್ಯಕ್ರಮಕ್ಕೆ ಒತ್ತು ನೀಡಿ ಸಹಕರಿಸಿದ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ನೂತನ ಡೀನ್ರವರಾದ ಡಾ: ಪ್ರಕಾಶ್ ನಡೂರ್ ಮತ್ತು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಶಿವಮೊಗ್ಗ ಇದರ ಉಪನಿರ್ದೇಶಕರಾದ ಡಾ: ಸದಾಶಿವ ಇವರ ಸಹಕಾರವನ್ನು ಈ ಸಂದರ್ಭದಲ್ಲಿ ನೆನೆಯಲಾಯಿತು.
2 thoughts on “ಸಾಗರದಲ್ಲಿ ಅನುತ್ಪಾದಕ ರಾಸುಗಳ ಆರೋಗ್ಯ ತಪಾಸಣೆ”
Comments are closed.
Very good app. Thank you for your efforts
Thank You Sir…