ಸಾಂಸ್ಕೃತಿಕತೆಯ ಪ್ರತಿಬಿಂಬವಾಗಿ ಕರುನಾಡಿನಲ್ಲಿ ಭಾರತದ ಅನನ್ಯ ನೃತ್ಯ ಪ್ರಕಾರಗಳನ್ನು ಶಿವಮೊಗ್ಗೆಯ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ನಗರದ ಸಹಚೇತನ ನಾಟ್ಯಲಯದ ಕಾರ್ಯ ವಿಭಿನ್ನವಾದದ್ದು ಕಳೆದ ಹಲವಾರು ವರ್ಷಗಳಿಂದ ಶಿವಮೊಗ್ಗೆಯ ಕಲಾವಿದರಿಗೆ ದೇಶವಿದೇಶದ ಕಲಾಪ್ರಕಾರಗಳನ್ನು ಪರಿಚಯಿಸಿದ ನೃತ್ಯ ಸಂಸ್ಥೆ ತಮ್ಮ ಮತ್ತೊಂದು ರಾಷ್ಟ್ರೀಯ ನೃತ್ಯ ಮಹೋತ್ಸವ ನಾಟ್ಯರಾದನ 11 ನ್ನು ಶಿವಮೊಗ್ಗ ಜನತೆಗೆ ಪರಿಚಯಿಸುತ್ತಿದೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೃತ್ಯ ಗುರು ಸಹನಾಚೇತನ್ ಇದೇ ತಿಂಗಳು 26 27 ಮತ್ತು 28ರಂದು ಮೂರು ದಿನಗಳ ಕಾಲ ಪ್ರತಿದಿನ ಸಂಜೆ ಆರ 6.30 ಕೆ ನಗರದ ಕುವೆಂಪು ರಂಗಮಂದಿರದಲ್ಲಿ ನೃತ್ಯ ಮಹೋತ್ಸವ ಜರಗಲಿದೆ 26ರ ಶುಕ್ರವಾರ ನಾಟ್ಯಾಲಯದ ಸಮಸ್ತ ವಿದ್ಯಾರ್ಥಿಗಳಿಂದ ಜಯ ಜಗನ್ಮಾತ್ರಕ್ಕೆ ಎಂಬ ನೃತ್ಯರೂಪಕ ನಾಟ್ಯಾಲಯದ ನೃತ್ಯ ಗುರು ಸಹನಾ ಚೇತನ್ ರವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ನಡೆಯಲಿದೆ .ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಸನ್ಮಾನ್ಯ ಕೆ ಎಸ್ ಈಶ್ವರಪ್ಪನವರು ನಡೆಸಿಕೊಡಲಿದ್ದಾರೆ ಇದೇ ಸಂದರ್ಭದಲ್ಲಿ ಸಹನಾ ಚೇತನ್ ರವರ 31 ಶಿಷ್ಯರು ಈ ವೇದಿಕೆಯಲ್ಲಿ ಹೆಜ್ಜೆ ಹಾಕಲಿದ್ದಾರೆ

27ರ ಶನಿವಾರ ಭರತನಾಟ್ಯ ಕ್ಷೇತ್ರದ ಖ್ಯಾತನಾಮರಾದ ಪಾರ್ಶ್ವನಾಥ್ ಉಪಾಧ್ಯ ತಮ್ಮ ಅತ್ಯಂತ ವಿಶಿಷ್ಟ ಪೂರ್ಣ ರಾಮಾಯಣದ ಮರು ಚಿತ್ರಣದ ರೂಪಗೊಂಡ ನೃತ್ಯ ರೂಪಕವಾದ ಅಭಾ(ಸೀತೆ)ಯನ್ನು ತಮ್ಮ ಸಹ ಕಲಾವಿದರಾದ ಶ್ರೀಮತಿ ಶ್ರುತಿ ಗೋಪಾಲ್ ಹಾಗೂ ಆದಿತ್ಯ ಟಿವಿ ಯವರ ಜೊತೆಗೂಡಿ ಪ್ರಸ್ತುತಪಡಿಸಲಿದ್ದಾರೆ ದೇಶ ವಿದೇಶದಲ್ಲೂ ಇದರ ಟಿಕೆಟ್ ಶೋಗಳಾಗಿ ಪ್ರತಿ ಶೋ ಹೌಸ್ ಪುಲ್ ಆಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಆದರೆ ಶಿವಮೊಗ್ಗ ಕಲಾ ಸಾಧಕರಿಗಾಗಿ ಉಚಿತ ಪ್ರದೇಶವನ್ನು ಸಹ ಚೇತನ ಸಂಸ್ಥೆ ಏರ್ಪಡಿಸಿದೆ

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸದರಾದ ಬಿ ವೈ ರಾಘವೇಂದ್ರ ಅವರು ಆಗಮಿಸಿ ಕಲಾವಿದರನ್ನು ಸನ್ಮಾನಿಸಲಿದ್ದಾರೆ ಜೊತೆಗೆ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಎನ್ ಗೋಪಿನಾಥ್ ಕೂಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು

ಸಂಸ್ಥೆಯ ಗೌರವಾಧ್ಯಕ್ಷರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ 28ರ ಭಾನುವಾರ ನಾಟ್ಯಾಲಯದ ನೃತ್ಯ ಗುರು ಸಹನಾ ಚೇತನ್ ರವರ ಏಕವ್ಯಕ್ತಿ ಬ್ರಹ್ಮ ಜ್ಞಾನ ವಿಜ್ಞಾಸು ಮೈತ್ರೇಯಿ ಪ್ರಸ್ತುತಗೊಳ್ಳಲಿದೆ ತದನಂತರ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳ ಓಂ ನಮಃ ಶಿವಾಯ ಎಂಬ ನೃತ್ಯರೂಪಕವನ್ನು ಸಾದರಪಡಿಸಲಿದ್ದಾರೆ

ವಿಶೇಷವೆಂಬಂತೆ ಮಹಿಳೆಯರ ಸ್ವಾವಲಂಬಿ ಜೀವನವನ್ನು ಉತ್ತೇಜಿಸುವ ದೃಷ್ಟಿಯಿಂದ ಸ್ವೇದಾ ಸಂಸ್ಥೆಯ ವತಿಯಿಂದ ಹೊಯ್ಸಳ ಕರ್ನಾಟಕ ಸೌಹಾರ್ದ ಸಹಕಾರಿ ಸಂಸ್ಥೆ ಹಾಗೂ ಶುಭಂ ಸೌಹಾರ್ದ ಸಹಕಾರಿ ಸಂಸ್ಥೆಗಳ ಸಹಯೋಗದಲ್ಲಿ ಮಾರಾಟ ಮಳಿಗೆ ತೆರೆಯಲಾಗುವುದು

error: Content is protected !!