ಪ್ರತಿಯೊಂದು ಸಸ್ಯಜಾತಿಗೂ ತನ್ನಅತ್ಯಂತ ಅನುಕೂಲಕರವಾದ ಬೆಳವಣಿಗೆಗೆ ನಿರ್ದಿಷ್ಟವಾದ ಪರಿಸರ ಅಗತ್ಯ.ಆದರೆ ಪ್ರಕೃತಿಯಲ್ಲಿಆಗುತ್ತಿರುವ ಬದಲಾವಣೆ ಹಾಗೂ ಸಸ್ಯ ರೋಗಾಣುಗಳ ಚಟುವಟಿಕೆಯಿಂದ ಸಸ್ಯಗಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ.ಸಸ್ಯ ರೋಗಗಳು ಶಿಲೀಂದ್ರ, ದುಂಡಾಣು, ನಂಜುರೋಗ, ಜಂತು ಹುಳು ರೋಗ ಹಾಗೂ ಪರಾವಲಂಬಿ ಸಸ್ಯಗಳಿಂದ ಉಂಟಾಗುವ ರೋಗಗಳಾಗಿ ವಿಂಗಡಿಸಲಾಗಿದೆ.

ರೋಗಾಣುಗಳಲ್ಲದೆ ಅನ್ಯಕಾರಕಗಳಿಂದ ರೋಗಗಳನ್ನು ಆಹಾರಾಂಶ ಕೊರತೆ ರೊಗ, ಖನಿಜ ವಿಷದಿಂದಾಗಿ ರೋಗ, ಮಣ್ಣಿನತೇವಾಂಶ ಕೊರತೆ, ಶೀತಗಾಳಿ ರೋಗ, ಬೆಳಕಿನ ಏರುಪೇರು ರೋಗ, ವಾಯುಮಾಲಿನ್ಯ ರೋಗ, ಮಣ್ಣಿನಕ್ಷಾರ, ಆಮ್ಲತೆ ಏರುಪೇರು ರೋಗಗಳಾಗಿ ವಿಂಗಡಿಸಲಾಗಿದೆ.

ಜಂತುಹುಳನ್ನು ನೆಮಟೋಡ್‍ ಎಂದು ಕರೆಯಲಾಗುತ್ತಿದ್ದಇತರೇ ಪ್ರಾಣಿಗಳಿಗಿರುವಂತೆ ಆಹಾರಜೀರ್ಣಾಂಗ ಮತ್ತು ಜನನಾಂಗಗಳಿರುತ್ತವೆ. ಆದರೆ ಉಸಿರಾಟ ಮತ್ತುರಕ್ತ ಚಲನಾಂಗಗಳು ಅಭಿವೃದ್ಧಿಯಾಗಿಲ್ಲದೆ ಈ ಕಾರ್ಯವನ್ನು ಅವುಗಳ ದೇಹದಲ್ಲಿರುವ ಜೀವರಸ ನಿರ್ವಹಿಸುತ್ತದೆ.ನಮ್ಮ ಕೃಷಿ ಬೆಳೆಗಳಿಗೆ ಹಾನಿ ಮಾಡುವ ಜಂತುಗಳಿಗೆ ಸ್ಪೆತಿಟ್ ಎಂಬ ಚೂಪಾದ ಅಂಗ ಬಾಯಿಯೊಳಗಿದ್ದು ಸಸ್ಯಗಳ ಬೇರಿನ ಜೀವಕಣಗಳನ್ನು ಚುಚ್ಚಿ ಒಳಗೆ ಪ್ರವೇಶಿಸಲು ಸಹಾಯವಾಗಿರುತ್ತದೆ.ಸಸ್ಯಗಳಿಗೆ ಹಾನಿ ಮಾಡುವ ಹಲವಾರು ವರ್ಗಅನುಕ್ರಮ ಹಾಗೂ ಕುಟುಂಬ ಸಂತತಿವುಳ್ಳ ಜಂತು ಹುಳಾಗಿ ವರ್ಗೀಕರಣ ಮಾಡಲಾಗಿದೆ.
ಜಂತುಹುಳು ಮುಖ್ಯ ರೋಗಗಳು :

  1. ಭತ್ತದ ಬೇರು ಗಂಟುರೋಗ
  2. ಭತ್ತದ ಬಿಳಿ ತುದಿ ರೋಗ
  3. ಹಿಪ್ಪು ನೇರಳೆ ಗಂಟುರೋಗ
  4. ಕ್ಯಾರೇಟ್‍ ಗಂಟುರೋಗ
  5. ಸೇವಂತಿಗೆ ಹೂ ಮೊಗ್ಗು ಜಂತುರೋಗ
  6. ಟೊಮೆಟೊ, ಬದನೆ, ಬೆಂಡಿ ಬೇರುಗಂಟುರೋಗ
  7. ತೊಗರಿ ಸಿಸ್ಟ್ ಜಂತುರೋಗ
  8. ಗೋಧಿ ಕಪ್ಪುಕಾಳು ರೋಗ
  9. ಬಾಳೆ ಕಾಂಡ ಹಾಗೂ ಬೇರು ಸುರಂಗರೋಗ.
  10. ಹೀರೆಕಾಯಿ ಬೇರುಗಂಟುರೋಗ.

ಬೇರುಗಂಟು ರೋಗ
ಸಸ್ಯಜಂತು ರೋಗಗಳ ಲಕ್ಷಣಗಳು
:
ವಿವಿಧ ಸಸ್ಯ ಭಾಗಗಳಿಗೆ ಜಂತು ಹುಳು ರೋಗದ ಭಾದೆಯಿಂದ ಭೂಮಿಯ ಮೇಲ್ಭಾಗದಲ್ಲಿ ಸಸ್ಯಗಳ ರೋಗ ಚಿಹ್ನೆಗಳು ಹಾಗೂ ಭೂಮಿಯ ಕೆಳಭಾಗದ ಬೇರುಗಳಲ್ಲಿ ರೋಗದ ಚಿಹ್ನೆಗಳಾಗಿ ವಿಂಗಡಿಸಲಾಗಿದೆ.
i. ಸಸ್ಯಗಳ ಕುಂಠಿತ ಬೆಳವಣಿಗೆ
ii. ಎಲೆ ಹಳದಿಯಾಗುವಿಕೆ
iii. ನಿಧಾನಗತಿಯ ಕಾಯಿ, ಮೊಗ್ಗು ಬೆಳವಣಿಗೆ
iv. ಕಡಿಮೆಗಾತ್ರದ ಹೂ, ಕಾಯಿಗಳ ರಚನೆ
v. ಮೊಗ್ಗು ಒಣಗುವಿಕೆ
vi. ಬೀಜಗಳಿಗೆ ಗಂಟುಗಳು
vii. ನೆಕ್ರಾಸಿಸ್ (ಅಂಗಾಂಶ ಸಾಯುವಿಕೆ)
viii. ಎಲೆ ಚುಕ್ಕೆಗಳು
ix. ಎಲೆ ಗಂಟುಗಳು
x. ಬೇರು ಗಂಟುಗಳು
xi. ಬೇರು ಮಚ್ಚೆಗಳು
xii. ಅತಿಯಾದ ಬೇರುಕವಲೊಡೆಯುವಿಕೆ
xiii. ಬೇರು ಕೊಳೆ
xiv. ಸಣ್ಣ ಬೇರುಗಳು
xv. ಮುದಡಿದ ಬೇರುಗಳು
ಕರ್ನಾಟಕದಲ್ಲಿ ಜಂತು ಹುಳು ರೋಗದ ಭಾದೆಯಿಂದ ತರಕಾರಿ ಸಸಿಗಳಾದ ಟೊಮೆಟೊ, ಬದನೆ, ಬೆಂಡೆ, ಕ್ಯಾರೆಟ್, ಹೀರೆಕಾಯಿಗಳ ಮೇಲೆ ನೇರ ಭಾದೆ ಉಂಟು ಮಾಡುತ್ತವೆ.ಬಹು ವಾರ್ಷಿಕ ಬೆಳೆಗಳಾದ ತೆಂಗು, ಕಾಳು ಮೆಣಸು, ಕಾಫಿ, ಅಡಿಕೆ, ಬಾಳೆ, ಹಿಪ್ಪು ನೇರಳೆ ಬೆಳೆಗಳಿಗೂ ಬೇರುಗಳಲ್ಲಿ ಹಾನಿಯುಂಟು ಮಾಡಿ ಇಳುವರಿ ಕುಗ್ಗಿಸುತ್ತಿದೆ. ಹೈದ್ರಾಬಾದ್‍ ಕರ್ನಾಟಕ ಭಾಗದ ಮುಖ್ಯ ದ್ವಿದಳ ದಾನ್ಯ ಬೆಳೆಗಳಾದ ತೊಗರಿ, ಕಡಲೆ, ಬೆಳೆಗಳಲ್ಲಿ ಇದರ ಹಾನಿ ಕಂಡುಬಂದಿದ್ದು ಭೂಮಿಯ ತೇವಾಂಶ ಕುಗ್ಗಿದಂತೆ ಇದರ ಚಟುವಟಿಕೆ ತೀಕ್ಷಣಗೊಳುತ್ತಿದೆ.

ಜಂತುಹುಳು ಜಂತುಹುಳುಗಳ ಸಮಗ್ರ ನಿರ್ವಹಣೆ :
i. ರೋಗರಹಿತ ಪ್ರದೇಶದಿಂದ ಸಸಿಗಳ ಆಯ್ಕೆ
ii. ಮಾಗಿ ಉಳುಮೆ : ಬೇಸಿಗೆಯ ಮಾಗಿ ಉಳುಮೆಯಿಂದ ಸೂರ್ಯನ ತಾಪಮಾನ ಹೆಚ್ಚಾಗಿ ಜಂತುಗಳ ಮೊಟ್ಟೆ ಕೋಶಗಳು ಸರ್ವನಾಶಗೊಳುತ್ತವೆ.
iii. ಪ್ಲಾಸ್ಟಿಕ ಹೊದಿಕೆ :ಕಲ್ಲಂಗಡಿ, ಟೊಮೆಟೊ, ಸೌತೆ, ದೊಣ್ಣೆ ಮೆಣಸಿನಕಾಯಿ ಬೆಳೆಗಳಲ್ಲಿ ಬೇರುಗಂಟು ರೋಗತಡೆಗಾಗಿ ಭೂಮಿಗೆ ಪ್ಲಾಸ್ಟಿಕ ಹೊದಿಕೆ ಹಾಕಿ ಜಂತುಹುಳ ನಿರ್ವಹಣೆ ಮಾಡಬಹುದು.
iv. ಟ್ರೈಕೋಡರ್ಮಾ ಪುಡಿಯನ್ನು ನರ್ಸರಿ ಹಾಗೂ ಮುಖ್ಯ ಹೊಲಗಳಿಗೆ/ ಭೂಮಿಗೆ ಸೇರಿಸುವುದು.
v. ಸಸಿ ತಟ್ಟೆಗಳಲ್ಲಿ ನರ್ಸರಿ ಗಿಡಗಳು ಉತ್ಪಾದನೆಯಲ್ಲಿ ತಟ್ಟೆಗಳಿಗೆ ಟ್ರೈಕೋಡರ್ಮಾ ಸೇರಿಸುವುದು.
vi. ಸೌರ ಶಾಖೀಕರಣ
vii. ಅಂತರ ಬೆಳೆಯಾಗಿ ಚೆಂಡು ಹೂ ಬೆಳೆಸುವುದು.
viii. ಕಾಲಕಾಲಕ್ಕೆ ನೀರುಉಣಿಸುವುದು, ಬೇರುಒಣಗದಂತೆ ನೋಡಿಕೊಳ್ಳುವುದು.
ix. ಹೆಟಾರೋರ್ಯಾಬ್ಡಿಡಿಸ್‍ಜೈವಿಕಜಂತು ಹುಳಗಳ ಬಳಕೆ.
x. ಸೆಣಬು ಬಿತ್ತನೆ ಮಾಡಿ ಮುಖ್ಯ ಬೆಳೆ ಬೆಳೆಯಬಹುದು.
xi. ಬೇವಿನ ಹಿಂಡಿ, ಹೊಂಗೆಹಿಂಡಿಗಳ ಭೂಮಿಗೆ ಬಳಕೆ.
xii. ಬೆಳೆ ಪರಿರ್ವತನೆ
xiii. ರೋಗ ನಿರೋಧಕ ತಳಿಗಳ ಬಳಕೆ

*ಜಹೀರ್‍ಅಹಮದ, ಸಸ್ಯರೋಗ ತಜ್ಞ, ಕೃಷಿ ವಿಜ್ಞಾನಕೇಂದ್ರ ಕಲಬುರಗಿ

error: Content is protected !!