ಮಕ್ಕಳನ್ನು ಕೇವಲ ಅಂಕಕ್ಕೆ ಸೀಮಿತಗೊಳಿಸಿದೇ ಅವರ ಸರ್ವಾಂಗೀಣ ಬೆಳವಣಿಗೆ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರು ಮುಂದಾಗಬೇಕು: ಡಾ.ಧನಂಜಯ ಸರ್ಜಿ
ಶಿವಮೊಗ್ಗ ವಿನೋಬ ನಗರ ಶುಭ ಮಂಗಳ ಸಮುದಾಯ ಭವನದ ಪಕ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಜಿ ಫೌಂಡೇಶನ್, ಸರ್ಜಿ ಆಸ್ಪತ್ರೆಗಳ ಸಮೂಹ ಹಾಗೂ ಮಲೆನಾಡು ಹಳೆ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಗುರುವಾರ ಉಚಿತ ಆರೋಗ್ಯ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯತಪಾಸಣೆ ಟೈಫಾಯಿಡ್ ಲಸಿಕೆ ನೀಡಿ, ಮಕ್ಕಳಿಗೆ ವಾಟರ್ ಬಾಟಲ್ ವಿತರಿಸಲಾಯಿತು.
ಆರೋಗ್ಯ ತಪಾಸಣಾ ಶಿಬಿರಕ್ಕೆ ಸರ್ಜಿ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಅವರು ಮಕ್ಕಳಿಗೆ ತಪಾಸಣೆ ನಡೆಸುವ ಮೂಲಕ ಚಾಲನೆ ನೀಡಿದರು.
100 ಕ್ಕೂ ಹಚ್ಚು ಮಕ್ಕಳು ಶಿಬಿರದ ಪ್ರಯೋಜನ ಪಡೆದುಕೊಂಡರು. ಇದಕ್ಕೂ ಮೊದಲು ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಡಾ.ಧನಂಜಯ ಸರ್ಜಿ ಮಾತನಾಡಿ, ಮಕ್ಕಳನ್ನು ಕೇವಲ ಅಂಕಕ್ಕೆ ಸೀಮಿತಗೊಳಿಸಿದೇ ಅವರ ಸರ್ವಾಂಗೀಣ ಬೆಳವಣಿಗೆ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರು ಮುಂದಾಗಬೇಕು. ಮಣ್ಣಿಗೆ ಸಂಸ್ಕಾರ ನೀಡಿದರೆ ಮಡಿಕೆ ಆಗುತ್ತದೆ, ಕಲ್ಲಿಗೆ ಸಂಸ್ಕಾರ ನೀಡಿದರೆ ಶಿಲ್ಪವಾಗುತ್ತದೆ ಹಾಗೆಯೇ ಮನುಷ್ಯನಿಗೆ ಸಂಸ್ಕಾರ ನೀಡಿದರೆ ಮಹಾದೇವನಾಗುತ್ತಾನೆ. ಹಾಗಾಗಿ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸಂಸ್ಕಾರವನ್ನು ನೀಡುವ ಕೆಲಸವಾಗಬೇಕು.ಅಲ್ಲದೇ ಮಕ್ಕಳಲ್ಲಿ ಗಿಡ, ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕು, ಎಲ್ಲರಲ್ಲೂ ಪರಿಸರ ಪ್ರಜ್ಞೆಯನ್ನು ಮೂಡಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ಎಸ್‌ಡಿಎಂಸಿ ಅಧ್ಯಕ್ಷ ಬಾಲು, ಮಲೆನಾಡು ಹಳೆ ವಿದ್ಯಾರ್ಥಿಗಳ ಯುವಕರ ಸಂಘದ ಜಗದೀಶ್, ಪ್ರಶಾಂತ್, ರಮೇಶ್ ಮತ್ತಿತರರು ಹಾಜರಿದ್ದರು. ಡಾ.ಅಪರ್ಣಾ, ಡಾ.ರಶ್ಮಿ ಮತ್ತು ಸಿಬ್ಬಂದಿ ಹಾಜರಿದ್ದರು.