ನಮ್ಮ ದೇಶದಲ್ಲಿ ಆಮ್ಲಿಯ ಅಥವಾ ಹುಳಿ ಮಣ್ಣುಗಳು ಎಲ್ಲಾ ರಾಜ್ಯಗಳಲ್ಲಿ ಕಂಡುಬರುತ್ತವೆ, ಅದರಲ್ಲೂ ಕರ್ನಾಟಕದ ಅತಿ ಹೆಚ್ಚು ಮಳೆಯಾಗುವ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ್ಲ ಹೆಚ್ಚಾಗಿ ಕಾಣಬಹುದು. ಈ ಹುಳಿ ಅಥವಾ ಆಮ್ಲಿಯ ಮಣ್ಣುಗಳು ಬೇಸಾಯ ಜಮೀನಿನ ಮೂರನೇ ಒಂದರಷ್ಟಿವೆ. ಇವುಗಳಿಂದ ಅಗತ್ಯ ಆಹಾರದ ಉತ್ಪದಾನೆ ಹೆಚ್ಚಿಸುವಲ್ಲಿ ಗುರುತರ ಅಡ್ಡಿಯನ್ನುಂಟು ಮಾಡುತಿವೆ. ಈ ಮಣ್ಣುಗಳು ಸಸ್ಯ ಪೆÇೀಷಕಾಂಶಗಳ ಕೊರತೆಯಿಂದ ಕೂಡಿರುವುದರ ಜೊತೆಗೆ ಸಸ್ಯಗಳಿಗೆ ಪೆÇೀಷಕಾಂಶಗಳ ಲಭ್ಯತೆಯನ್ನು ತಡೆ ಹಿಡಿಯುವ ಗುಣಧರ್ಮಗಳನ್ನು ಹೊಂದಿವೆ.
ಆಮ್ಲೀಯ ಮತ್ತು ಹುಳಿ ಸಲ್ಫೇಟ್ ಮಣ್ಣುಗಳ ಗುಣಗಳು
• ಹುಳಿ ಮಣ್ಣುಗಳ ರಸಸಾರ ಕಡಿಮೆ ಇರುತ್ತದೆ.
• ಇವುಗಳಲ್ಲಿ ಅಧಿಕ ಪ್ರಮಾಣದ ಅಲ್ಯೂಮಿನಿಯಂ, ಕಬ್ಬಿಣ ಮತ್ತು ತಾಮ್ರ ಇರುತ್ತವೆ.
• ಹುಳಿ ಸಲ್ಫೇಟ್ ಮಣ್ಣುಗಳು ಅಧಿಕ ಪೈರೈಟ್ನಿಂದ ಕೂಡಿರುತ್ತವೆ. ಗಂಧಕಾಮ್ಲದಿಂದ ಆಮ್ಲಜನೀಕರಣಗೊಂಡು, 4ಕ್ಕಿಂತ ಕಡಿಮೆ ರಸಸಾರವನ್ನು ಹೊಂದಿರುತ್ತವೆ.
• ಈ ಮಣ್ಣುಗಳಲ್ಲಿನ ಬೆಳೆಗಳು ಪ್ರಮುಖವಾಗಿ ಅಲ್ಯುಮಿನಿಯಂ ವಿಷದಿಂದ ಹಾನಿಗೊಳಗಾಗುತ್ತವೆ; ಪೋಷಕಾಂಶಗಳು ಲಭ್ಯಗೊಳ್ಳುವುದಿಲ್ಲ.
ಹುಳಿ ಮತ್ತು ಆಮ್ಲೀಯ ಸಲ್ಫೇಟ್ ಮಣ್ಣುಗಳ ಸುಧಾರಣೆಗೆ ಸುಣ್ಣವನ್ನು ಸೇರಿಸಬೇಕು
• ಈ ಮಣ್ಣುಗಳನ್ನು ಸುಧಾರಿಸಲು ಸೂಕ್ತ ಪ್ರಮಾಣದ ಸುಣ್ಣವನ್ನು ಸೇರಿಸಬೇಕು. ಅದರಿಂದ ಮಣ್ಣು ಕ್ಷಾರೀಯಗೊಳ್ಳುತ್ತದೆ; ರಂಜಕಾಂಶವು ಹಿಡಿದಿಡಲ್ಪಡುತ್ತದೆ. ಕಬ್ಬಿಣ, ಮ್ಯಾಂಗನೀಸ್ ಮತ್ತು ಅಲ್ಯುಮಿನಿಯಂಗಳು ನಿಷ್ಕ್ರಿಯಗೊಳ್ಳುತ್ತವೆ.
• ಸುಣ್ಣವನ್ನು ಮೂರು ಅಥವಾ ಐದು ವರ್ಷಗಳಿಗೊಮ್ಮೆ ಹಾಕಿದರೆ ಸಾಕು. ಮಣ್ಣಿನ ರಸಸಾರದ ಆಧಾರದ ಮೇಲೆ ಅದನ್ನು ಶಿಫಾರಸ್ಸಿನಂತೆ ಹಾಕಬೇಕು.
• ನೀರನ್ನು ಹಾಯಿಸಿ ಗದ್ದೆಯಲ್ಲಿರುವಂತೆ ನಿಲ್ಲಿಸಿದರೆ ಹುಳಿಯ ಅಂಶ ಕಡಿಮೆಯಾಗುತ್ತದೆ. ಬೆಚ್ಚಗಿನ ಪ್ರದೇಶಗಳಲ್ಲಿ ಆಮ್ಲೀಯ ಸಲ್ಫೇಟ್ಗಳಿರುವ ಮಣ್ಣಿನಲ್ಲಿ ಭತ್ತವನ್ನು ಬೆಳೆಯುವುದು ಸರಿ.
ಸೂಕ್ತ ಬೆಳೆಗಳು ಮತ್ತು ತಳಿಗಳು
• ಹಲವಾರು ಪ್ರಧಾನ ಆಹಾರದ ಬೆಳೆಗಳು ಹಾಗೂ ತರಕಾರಿ ಬೆಳೆಗಳು ಆಮ್ಲೀಯ ಮಣ್ಣುಗಳಿಗೆ ಸೂಕ್ಷ್ಮವಿರುತ್ತವೆ.
• ಹುಳಿಮಣ್ಣಿಗೆ ಭತ್ತವಾದಲ್ಲಿ ಅಡ್ಡಿಯಿಲ್ಲ. ನೀರು ನಿಂತಿರುವ ಕಾರಣ ರಸಸಾರವು ತಟಸ್ಥ ಮಟ್ಟಕ್ಕಾದರೂ ಏರುತ್ತದೆ.
• ಧಾನ್ಯದ ಬೆಳೆಗಳಲ್ಲಿ ತೃಣಧಾನ್ಯಗಳು ಮತ್ತು ಓಟ್ಸ್, ಶೇಂಗಾ, ಟೀ ಮತ್ತು ಆಲೂಗೆಡ್ಡೆಗಳು ಹುಳಿಯ ಅಂಶವನ್ನು ಸಹಿಸಬಲ್ಲವು.
ಮಣ್ಣಿನ ಫಲವತ್ತತೆಯ ನಿರ್ವಹಣೆ
• ಸಾರಜನಕಯುಕ್ತ ರಾಸಾಯನಿಕ ಗೊಬ್ಬರಗಳನ್ನು ಹಾಕುವುದಿದ್ದಲ್ಲಿ ಅವು ನೀರಿನಲ್ಲಿ ಕರಗಿ ಬಸಿಯುವುದನ್ನು ಕಡಿಮೆ ಮಾಡಲು ಕಂತುಗಳಲ್ಲಿ ಹಾಕುವುದು ಉತ್ತಮ.
• ಆಮ್ಲೀಯ ಮತ್ತು ಹುಳಿ ಸಲ್ಫೇಟ್ ಮಣ್ಣುಗಳು ಅಧಿಕ ಪ್ರಮಾಣದಲ್ಲಿ ಪೆÇೀಷಕಾಂಶಗಳ ಹಿಡಿದಿಡುವ ಕಾರಣ ಅದರ ಕೊರತೆ ಉಂಟಾಗುತ್ತದೆ. ಅದನ್ನು ನಿವಾರಿಸಲು ಸೂಕ್ತ ಬಗೆಯ ರಾಸಾಯನಿಕ ಗೊಬ್ಬರವನ್ನು ಅಗತ್ಯ ಪ್ರಮಾಣದಲ್ಲಿ ಕೊಡುವುದು ಸೂಕ್ತ. ಅದರ ಜೊತೆಗೆ ಅದನ್ನು ಹಾಕುವ ವಿಧಾನ ಮತ್ತು ಬೆಳೆಗಳ ಆಯ್ಕೆ ಬಹುಮುಖ್ಯ.
• ರಾಸಯನಿಕ ಗೊಬ್ಬರಗಳು ಪೂರ್ಣ ಕರಗುವಂತಿರಬೇಕು. ಸಿಂಗಲ್ ಸೂಪರ್ಫಾಸ್ಫೇಟ್, ಟ್ರಿಪಲ್ ಸೂಪರ್ ಫಾಸ್ಫೇಟ್, ಡೈಅಮೋನಿಯಂ ಫಾಸ್ಫೇಟ್ ನಂತಹವುಗಳನ್ನು ವರ್ಜಿಸಿ.
• ಮ್ಯೂರಿಯೇಟ್ ಆಫ್ ಪೊಟ್ಯಾಷ್ಗಿಂತ ಪೊಟ್ಯಾಷಿಯಂ ಸಲ್ಫೇಟ್ ಉತ್ತಮ. ಕ್ಲೋರೈಡ್ ಅಯಾನುಗಳು ಒಣ ಪದಾರ್ಥದ ಮೇಲೆ ಹಾಗೂ ಪಿಷ್ಟದ (ಆಲೂಗಡ್ಡೆ) ಮೇಲೆ ಅಹಿತಕರ ಪರಿಣಾಮ ಬೀರುತ್ತದೆ.
• ಪೊಟ್ಯಾಷಿಯಂ ಧಾತುವಿನ ಮೂಲವಾಗಿ ಪೊಟ್ಯಾಷಿಯಂ ಕ್ಲೋರೈಡ್ಅನ್ನು ಬಳಸುವುದುಂಟು. ಆದರೆ ತಂಬಾಕು, ಟೊಮೆಟೋ ಮತ್ತು ಅನಾನಸ್ ಬೆಳೆಗಳು ಸೂಕ್ಷ್ಮವಿರುತ್ತವೆ.
• ಸುಣ್ಣ ಮತ್ತು ಸಾವಯವ ಉಳಿಕೆಗಳನ್ನು ಧಾರಾಳವಾಗಿ ಬಳಸುವುದರಿಂದ ಲಘು ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು.
• ಮಾಲಿಬ್ಡಿನಂ ಕೊರತೆಯನ್ನು ಸರಿಪಡಿಸಲು ಸೋಡಿಯಂ ಇಲ್ಲವೇ ಅಮೋನಿಯಂ ಮಾಲಿಬ್ಡೇಟ್ಅನ್ನು ಸಣ್ಣ ಪ್ರಮಾಣದಲ್ಲಿ ಬಳಸಬಹುದು.
ಈಗೆ ಮೇಲಿನ ಸುಧಾರಣಾ ಕ್ರಮಗಳನ್ನು ಅನುಸರಿಸಿ, ಹುಳಿ ಅಥವಾ ಆಮ್ಲಿಯ ಮಣ್ಣನ್ನು ಬೆಳೆಗಳಿಗೆ ಸೂಕ್ತವಾದ ಮತ್ತು ಪಲವತ್ತಾದ ಮಣ್ಣಾಗಿ ಗುಣಪಡಿಸಬಹುದು.
ಡಾ. ಅರುಣ್ಕುಮಾರ್ ಬಿ. ಆರ್.
ವಿಜ್ಞಾನಿ (ಮಣ್ಣು ವಿಜ್ಞಾನ)
ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ.
9008898819