ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ನುಡಿಯಂತೆ ನಾವು ಸೇವಿಸುವ ಆಹಾರವೇ ನಮ್ಮ ಆರೋಗ್ಯಕ್ಕೆ ಕಾರಣ. ಪೌಷ್ಟಿಕ ಆಹಾರವು, ಉತ್ತಮ ಸ್ವಾಸ್ಥ್ಯ ಮತ್ತು ಬೆಳವಣಿಗೆಗೆ ಅತ್ಯವಶ್ಯಕ. ಇತ್ತೀಚಿನ ದಿನಗಳಲ್ಲಿ ಸಿದ್ದ ಆಹಾರದ ಬಳಕೆ ಹೆಚ್ಚಾಗಿದ್ದು ಪೌಷ್ಟಿಕ ಆಹಾರದ ಕೊರತೆಯಿಂದ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತಿದ್ದು ಹೆಚ್ಚನ ಪ್ರಮಾಣದಲ್ಲಿ ಜನರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಹಾಗೆಯೇ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಪೌಷ್ಟಿಕತೆಯ ಕೊರತೆಯಿಂದ ನರಳುತ್ತಿದ್ದಾರೆ. ಕುಟುಂಬಕ್ಕೆ ಉತ್ತಮ ಆಹಾರ ಹಾಗು ಆರೋಗ್ಯ ಒದಗಿಸುವದು ಒಂದು ಸಾಮಾಜಿಕ ಹೊಣೆಯಾಗಿದೆ. ಪೌಷ್ಟಿಕ ಆಹಾರ ಕುರಿತು ನಾವು ತಿಳಿದುಕೊಳ್ಳುವುದು ಮಾತ್ರವಲ್ಲದೆ ಇತರರಿಗೂ ತಿಳಿಸಿಹೇಳುವುದೂ ಇಂದಿನ ನಾಗರೀಕ ಕರ್ತವ್ಯಗಳಲ್ಲಿ ಒಂದಾಗಿದೆ.


ಆಹಾರದ ಕೊರತೆಯಿಂದ ಆಗುವ ಪರಿಣಾಮಗಳೆಂದರೆ- ಕುಂಠಿತ / ಅಸಮರ್ಪಕ ಬೆಳವಣಿಗೆ, ಬೌದ್ಧಿüಕ ವಿಕಾಸಕ್ಕೆ ತಡೆ , ಅನಾರೋಗ್ಯ ಮತ್ತು ನಿಶ್ಯಕ್ತಿ ,ಪೋಷಕಾಂಶಗಳ ಕೊರತೆಯ ಸಮಸ್ಯೆಗಳು, ಕುಂದಿದ ದೈಹಿಕ ಸಾಮಥ್ರ್ಯ ಹಾಗು ಜೀವನ ಗುಣಮಟ್ಟ. ಕೆಲವು ಪೋಷಕಾಂಶಗಳ ಕೊರತೆಯಿಂದ ಉಂಟಾಗುವ ದುಷ್ಪರಿಣಾಮಗಳೆಂದರೆ, ಶಕ್ತಿ ಹಾಗು ಸಸಾರಜನಕ ಕೊರತೆಯಿಂದ ಕ್ವಾಶಿಯೋರ್ಕರ್ ಮತ್ತು ಮರಾಸ್ಮಸ್, “ಎ” ಅನ್ನಾಂಗದ ಕೊರತೆಯಿಂದ ಇರುಳು ಕುರುಡು ಮತ್ತು ದೃಷ್ಟಿಹೀನತೆ, ಕಬ್ಬಿಣಾಂಶದ ಕೊರತೆಯಿಂದ ರಕ್ತಹೀನತೆ ಮತ್ತು ಕುಂಠಿತ ನಿರೋಧಕ ಶಕ್ತಿ ಹಾಗೂ ಅಯೋಡಿನ್ ಮತ್ತು ಸತುವಿನ ಕೊರತೆಯಿಂದ ಗಳಗಂಡ ಮತ್ತು ಬುದ್ಧಿ ಮಂದತೆ ,ಬೌದ್ಧಿಕ ವಿಕಸನ ಹಾಗು ಆರೋಗ್ಯ ನಿರ್ವಹಣೆಗೆ ತಡೆ ಉಂಟಾಗುವುದು.


ಈ ಕೊರತೆಗಳನ್ನು ನೀಗಿಸಲು ಪೋಷಕಾಂಶ ಭರಿತ ಆಹಾರಗಳಾದ ಧಾನ್ಯಗಳು, ಬೇಳೆಕಾಳುಗಳು, ಮೀನು, ಮಾಂಸ ಮತ್ತು ಮೊಟ್ಟೆ, ಶಕ್ತಿ ಹಾಗು ಸಸಾರಜನಕ ಕೊರತೆಯನ್ನು ನೀಗಿಸುತ್ತವೆ. ಸೊಪ್ಪುತರಕಾರಿಗಳು, ಹಣ್ಣುಗಳು, ಅಳವಿ ್ಲಬೀಜ, ಬೆಲ್ಲ, ಮಾಂಸ ಕಬ್ಬಿಣದ ಕೊರತೆಯನ್ನು ನೀಗಿಸುತ್ತವೆ. ಹಸಿರು ಸೊಪ್ಪುಗಳು, ಹಳದಿ ಮತ್ತು ಕೇಸರಿ ಬಣ್ನದ ಹಣ್ನು ತರಕಾರಿಗಳು, ಹೈನು ಉತ್ಪನ್ನಗಳು, ಮೀನು, ಮೊಟ್ಟೆ “ಎ” ಅನ್ನಾಂಗದ ಕೊರತೆಯನ್ನು ನೀಗಿಸುತ್ತವೆ ಹಾಗೂ ಧಾನ್ಯಗಳು, ಬೇಳೆಕಾಳು ಮತ್ತು ಎಣ್ಣೆ ಬೀಜಗಳು, ಮೀನು, ಮಾಂಸ ಮತ್ತು ಮೊಟ್ಟೆ ಇವುಗಳು ಸತುವಿನ ಕೊರತೆಯನ್ನು ನೀಗಿಸುತ್ತವೆ.

   ಹಣ್ಣು ಮತ್ತು ತರಕಾರಿಗಳು  ಪೋಷಣೆಯಲ್ಲಿ ಮಹತ್ವದ ಸ್ಥಾನ ಪಡೆದಿವೆ. ಇವುಗಳುÀ ಖನಿಜಲವಣಗಳ ಮತ್ತು ಜೀವಸತ್ವಗಳ ಭಂಡಾರವೇ ಆಗಿವೆ. ಗಡ್ಡೆಗೆಣಸುಗಳು  ಶಕ್ತಿಯನ್ನು ಧಾರಾಳವಾಗಿ ಹೊಂದಿವೆ. ತರಕಾರಿಗಳು ನಾರಿನಾಂಶವನ್ನು ಸಹ ಅಧಿಕವಾಗಿ ಹೊಂದಿರುತ್ತವೆ. ಮಧುಮೇಹ, ರಕ್ತದೊತ್ತಡ ಮುಂತಾದ ಕಾಯಿಲೆಗಳಿಂದ ಬಳಲುವವರು ತರಕಾರಿಗಳನ್ನು ಹೆಚ್ಚು ಸೇವಿಸುವುದು ಅಗತ್ಯ.ಅಲ್ಲದೆ ಜೈವಿಕ ರಾಸಾಯನಿಕ ಕ್ರಿಯೆಗಳಿಗೆ ನೆರವಾಗಬಲ್ಲ ಚೋದಕ ಹಾಗು ಕಿಣ್ವಗಳ ಉತ್ಪತ್ತಿ ಹಾಗು ಚಟುವಟಿಕೆಗಳಿಗೆ ನೆರವಾಗುತ್ತವೆ. ತರಕಾರಿಗಳು ಸ್ಥೂಲಕಾಯಿಗಳಿಗೆ ತೂಕ ಇಳಿಸಲೂ ಸಹ ತುಂಬಾ ಸಹಾಯಕಾರಿ. ತರಕಾರಿಗಳಲ್ಲಿ ಉತ್ಕರ್ಷಣೆಯನ್ನು ತಡೆಯಬಲ್ಲ “ಆಂಟಿಆಕ್ಸಿಡೆಂಟ್‍ಗಳು” ಹೇರಳವಾಗಿವೆ. ಹೀಗಾಗಿ ಇವು ಕ್ಯಾನ್ಸರ್ ರೋಗದಿಂದ ರಕ್ಷಣೆ ನೀಡುತ್ತದೆ. 


ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ. ಹೀಗೆ ತರಕಾರಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಆರೋಗ್ಯವರ್ಧನೆಯಲ್ಲಿ ಮಹತ್ವದ ಸ್ಥಾನ ಪಡೆದಿವೆ. ತರಕಾರಿಗಳಲ್ಲಿರುವÀ ಅಧಿಕ ತೇವಾಂಶದಿಂದಾಗಿ ಇವು ಬೇಗನೆ ಬಾಡುತ್ತವೆ ಅಥವಾ ಕೊಳೆಯುತ್ತವೆ. ತರಕಾರಿಗಳನ್ನು ಒಣಗಿಸಿ ಸಂಗ್ರಹಿಸಿಟ್ಟುಕೊಂಡರೆ ಬೇಕಾದಾಗ ಅಡಿಗೆಗೆ ಬಳಸಹುದು ಉದಾ: ಸೊಪ್ಪು, ಈರುಳ್ಳಿ, ಹಸಿಮೆಣಸಿನಕಾಯಿ ಇತ್ಯಾದಿ.ಹಸಿರು ಸೊಪ್ಪು ಮತ್ತು ಇತರ ತರಕಾರಿಗಳನ್ನು ಅಧಿಕವಾಗಿ ಬೆಳೆದಾಗ ಅಥವಾ ಕಡಿಮೆ ಬೆಲೆಯಲ್ಲಿ ಲಭ್ಯವಾದಾಗ ಸೂಕ್ತ ವಿಧಾನಗಳಿಂದ ಒಣಗಿಸಿ ಅಥವಾ ಸಂಸ್ಕರಿಸಿ ಸಂಗ್ರಹಿಸಬಹುದು. ಆಗ ಎಲ್ಲಾ ಋತುಮಾನಗಳಲ್ಲಿ ಇವು ಸವಿಯಲು ಲಭ್ಯವಾಗುತ್ತವೆ ಹಾಗೂ ಪೋಷಕಾಂಶಗಳ ನಷ್ಟ ತಪ್ಪಿಸಬಹುದು. ಒಣಗಿಸಿದ ಸೊಪ್ಪನ್ನು ದಿನವೂ ಉಪಯೋಗಿಸುವ ಹಿಟ್ಟುಗಳಿಗೆ ಬಳಸಿ ಪುಷ್ಟಿಕರ ಸಿದ್ಧಮಿಶ್ರ್ರಣ ತಯಾರಿಸಿಟ್ಟುಕೊಳ್ಳಬಹುದು ಉದಾ: ಪುಷ್ಟಿಕರ ಮುದ್ದೆ / ಚಪಾತಿ ಹಿಟ್ಟು, ಚಕ್ಕಲಿ/ ನಿಪ್ಪಟ್ಟು ಮಿಣ, ಹಪ್ಪಳ ಸಂಡಿಗೆಗಳ ಶುದ್ಧಮಿಶ್ರಣ. ಮಿಶ್ರತರಕಾರಿಗಳ ಉಪ್ಪಿನಕಾಯಿ ಅಥವಾ ಸಂಡಿಗೆ  ಮಾಡಿಟ್ಟುಕೊಂಡರೆ ವರ್ಷದವರೆಗೆ ಸಂಗ್ರಹಿಸಬಹುದು

ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ), ಕೆ.ವಿ.ಕೆ., ಶಿವಮೊಗ್ಗ , 93539 78995
error: Content is protected !!