ರಾಜ್ಯದಲ್ಲಿ ದೊಡ್ಡ 500 ಗ್ರಾಮ ಪಂಚಾಯತಿಗಳಲ್ಲಿ “ಹಳ್ಳಿ ಸಂತೆ” ಏರ್ಪಡಿಸಲು ವಿಲೇಜ್‌ ಹಾತ್‌ ಮಾದರಿಯಲ್ಲಿ ಮಾರುಕಟ್ಟೆಗಳನ್ನು ನಿರ್ಮಿಸಲು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಅಯ್ದ ಗ್ರಾಮಗಳಲ್ಲಿ ಹಳ್ಳಿಸಂತೆ ಯೋಜನೆಯಡಿ ಮಾರುಕಟ್ಟೆಗಳನ್ನು ನಿರ್ಮಿಸಲು ಹಳ್ಳಿಸಂತೆ ಯೋಜನೆಯಡಿ ಮಾರುಕಟ್ಟೆ ನಿರ್ಮಾಣ ಮಾಡಲು ಅನುಷ್ಟಾನ ಏಜೆನ್ಸಿಯಾಗಿ ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ( ಕೆ.ಆರ್.ಐ.ಡಿ.ಎಲ್) ಬೆಂಗಳೂರು ನ್ನು ನಿಗದಿಪಡಿಸಿ, ರಾಜ್ಯದಲ್ಲಿ ಆಯ್ದ ಗ್ರಾಮ ಪಂಚಾಯತ್‌ ನಲ್ಲಿ” ಹಳ್ಳಿ ಸಂತೆ” ಯೋಜನೆಗೆ ಮಾರುಕಟ್ಟೆ ಕಟ್ಟಡ ಹಾಗೂ ಪ್ರಾಂಗಣವನ್ನು ನಿರ್ಮಿಸಲಾಗಿತ್ತಿದೆ.

ಮುಂದುವರೆದು ಸದರಿ ಯೋಜನೆಯಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ವ್ಯಾಪ್ತಿಯ ಆನಂದಪುರ, ತ್ಯಾಗರ್ತಿ ಮತ್ತು ಮಾಸೂರು ಗ್ರಾಮ ಪಂಚಾಯತಿಗಳಲ್ಲಿ , ಹೊಸನಗರ ತಾಲ್ಲೂಕು ರಿಪ್ಪನಪೇಟೆ ಗ್ರಾ ಪಂಚಾಯತ್‌, ಶಿಕಾರಿಪುರ ತಾಲ್ಲೂಕು ತೊಗರ್ಸಿ ಗ್ರಾಮ ಪಂಚಾಯತ್‌ ಹಾಗೂ ತೀರ್ಥಹಳ್ಳಿ ತಾಲ್ಲೂಕು ಹಣಗೇರಿ ಗ್ರಾಮ ಪಂಚಾಯತಿ ಗೆ ಒಟ್ಟು 6 ಹಳ್ಳಿ ಸಂತೆ ಮಾರುಕಟ್ಟೆ ಕಟ್ಟದ ನಿರ್ಮಾಣ ಮಾಡಲಾಗಿದ್ದು, ಅದರಲ್ಲಿ 5 ಪೂರ್ಣಗೊಂಡಿದ್ದು, ತೀರ್ಥಹಳ್ಳಿ ತಾಲ್ಲೂಕು ಹಣಗೇರಿ ಗ್ರಾಮ ಪಂಚಾಯತ್‌ ನಲ್ಲಿ ಈ ವಾರದಲ್ಲಿ ಪೂರ್ಣಗೊಳಿಸಲಾಗುವುದು.
ಸರ್ಕಾರದ ಆದೇಶದಂತೆ ಸದರಿ ಹಳ್ಳಿ ಸಂತೆ ಯೋಜನೆಯಡಿಯಲ್ಲಿ ಮಾರುಕಟ್ಟೆ ನಿರ್ಮಾಣ ಪೂರ್ಣಗೊಂಡ ನಂತರ ವ್ಯಾಪಾರ ಚಟುವಟಿಕೆ ಪ್ರಾರಂಭಿಸುವಾಗ ಹಳ್ಳಿ ಸಂತೆ ಮಾರುಕಟ್ಟೆ ಪ್ರದೇಶದಲ್ಲಿನ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM) ಯೋಜನೆಯಡಿಯಲ್ಲಿ ರಚನೆ ಮಾಡಲಾಗಿರುವ ಸಂಜೀವಿನಿ ಗ್ರಾಮ ಪಂಚಾಯತ್‌ ಮಟ್ಟದ ಒಕ್ಕೂಟ(GPLF) ಗಳಲ್ಲಿನ ಸ್ವ ಸಹಾಯ ಗುಂಪುಗಳಿಗೆ ಆದ್ಯತೆ ನೀಡಿ ತಮ್ಮ ಉತ್ಪಾದನೆಗಳನ್ನು ಮಾರಾಟ ಮಾಡಲು ಮಳಿಗೆ ಗಳನ್ನು ಹಂಚಿಕೆ ಮಾಡಬೇಕು ಎಂದೂ ಆದೇಶ ನೀಡಲಾಗಿದ್ದು. ಅದರಂತೆ ಶಿವಮೊಗ್ಗ ಜಿಲ್ಲಾ ಪಂಚಾಯತ್‌ ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಅತಿ ಮುತವರ್ಜಿ ವಹಿಸುವುದರೊಂದಿಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಆಡಳಿತದೊಂದಿಗೆ ಚರ್ಚಿಸಿ ಹಾಗೂ ಬೇಟಿ ಮಾಡಿ ಗ್ರಾಮ ಪಂಚಾಯತಿಯಿಂದ ಸದರಿ ಹಳ್ಳಿ ಸಂತೆ ಮಾರುಕಟ್ಟೆಯ ಮಳಿಗೆಗಳನ್ನು ಸ್ಥಳೀಯ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಸ್ವ ಸಹಾಯ ಗುಂಪಿಗಳಿಗೆ ತಮ್ಮ ಉತ್ಪಾದನೆ ಯನ್ನು ಮಾರಾಟ ಮಾಡಲು ಮತ್ತು ಸದರಿ ಕಟ್ಟಡ ನಿರ್ವಹಣೆ ಜವಬ್ದಾರಿಯನ್ನು ಒಕ್ಕೂಟಕ್ಕೆ ಹಸ್ತಾಂತರಿಸುವ ಕುರಿತು ಕರಾರು ಒಪ್ಪಂದ ಮಾಡಿಕೊಳ್ಳಲಾಗಿದ್ದು. ಮುಂದಿನ ವಾರದಿಂದ ಸದರಿ ಮಾರುಕಟ್ಟೆಯ 38 ಮಳಿಗೆಗಳಲ್ಲಿ ಸ್ವ ಸಹಾಯ ಗುಂಪಿನ ಸದಸ್ಯರು ವ್ಯಾಪಾರ/ ಉತ್ಪಾದಿಸಲಾದ ಉತ್ಪನ್ನಗಳನ್ನು ಮಾರಟ ಮಾಡಲು ಮತ್ತು ಸದರಿ ಕಟ್ಟಟ ನಿರ್ವಹಣೆ ಮಾಡಲು ಸೂಚನೆ ನೀಡಲಾಗಿರುತ್ತದೆ.

error: Content is protected !!