News Next

ಶಿವಮೊಗ್ಗ, ಜುಲೈ 29: ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರಡಿಯಲ್ಲಿ ನೋಂದಣಿಯಾಗಿ ದಾಖಲಾತಿಗಳನ್ನು ಫೈಲಿಂಗ್ ಮಾಡದೇ ಇರುವ ಸಂಘಗಳ ರದ್ದತಿಗೆ ಕ್ರಮವಿಡಲಾಗಿದ್ದು ಸಂಘಗಳ ರದ್ದತಿ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ದಾಖಲೆ ಮತ್ತು ಮಾಹಿತಿಗಳೊಂದಿಗೆ ಸಂಬಂಧಿಸಿದವರು 7 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಸಬಹುದು.
      ಕಾಯ್ದೆಯ ಕಲಂ 13 ರಂತೆ ನೋಂದಣಿಯಾದ ಸಂಘಗಳು ಪ್ರತಿ ವರ್ಷವೂ ವಾರ್ಷಿಕ ಲೆಕ್ಕಪರಿಶೋಧನಾ ತಃಖ್ತೆಗಳನ್ನು ಹಾಗೂ ಸರ್ವ ಸದಸ್ಯರ ಸಭೆಯ ನಡವಳಿ, ಕಾರ್ಯಕಾರಿ ಮಂಡಳಿ ಪಟ್ಟಿ, ದಾಖಲಾತಿಗಳನ್ನು ಸಂಘಗಳ ನೋಂದಣಾಧಿಕಾರಿ ಕಚೇರಿಯಲ್ಲಿ ಕಡ್ಡಾಯವಾಗಿ ಫೈಲಿಂಗ್ ಮಾಡಬೇಕಾಗಿರುತ್ತದೆ. ಆದರೆ ಕೆಳಕಂಡ 20 ಸಂಘಗಳು 5 ವರ್ಷಗಳಿಗೆ ಮೀರಿ ತಹಲ್‍ವರೆವಿಗೂ ವಾರ್ಷಿಕ ದಾಖಲೆಗಳನ್ನು ಸಂಘಗಳ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸದೇ ಇದ್ದಲ್ಲಿ 7 ದಿನಗಳ ಒಳಗಾಗಿ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸಲು ದಿ: 20-01-2021 ರಂದು 11 ಸಂಘಗಳ ಕಾರ್ಯದರ್ಶಿಗಳಿಗೆ ಮತ್ತು ದಿ: 15-03-2021 ರಂದು 09 ಸಂಘಗಳ ಕಾರ್ಯದರ್ಶಿಗಳಿಗೆ ಅಂಚೆ ದೃಢೀಕರಣ ನೋಟಿಸನ್ನು ಕಳುಹಿಸಲಾಗಿದ್ದು ವಿಳಾಸದಾರರು ಇರುವುದಿಲ್ಲವೆಂದು/ಮೃತರಾಗಿರುತ್ತಾರೆಂದು ಅಂಚೆ ಇಲಾಖೆ ಷರಾದೊಂದಿಗೆ ನೋಟಿಸುಗಳು ಹಿಂದಿರುಗಿರುತ್ತವೆ.
      ಅನಂತಾಶ್ರಮಮ ಆಫ್ ಶಿವಾನುಭವ ಸಂಘ ಶಿವಮೊಗ್ಗ, ವನಿತಾಶ್ರಮ ಫಾರ್ ವುಮೆನ್ ಅಂಡ್ ಚಿಲ್ಡ್ರನ್ ಆಫ್ ಶಿವಾನುಭವ ಸಂಘ ಆಚಾಪುರ ಸಾಗರ, ಉದಯ ಕಲಾವಿದರು ಸಾಗರ, ಮಹಿಳಾ ಮಂಡಳ ಕೋಣಂದೂರು ತೀರ್ಥಹಳ್ಳಿ, ಶಿವಮೊಗ್ಗ ಡಿಸ್ಟ್ರಿಕ್ಟ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಶಿವಮೊಗ್ಗ, ಭದ್ರಾವತಿ ತಾಲ್ಲೂಕು ವಿಶ್ವಕರ್ಮ ಗೋಲ್ಡ್‍ಸ್ಮಿತ್ ಅಸೋಸಿಯೇಷನ್ ಭದ್ರಾವತಿ, ಪ್ರೈವೇಟ್ ಅಸೋಸಿಯೇಷನ್ ಶಿವಮೊಗ್ಗ, ಮಹಿಳಾ ಸಮಾಜ ಆನವೇರಿ ಭದ್ರಾವತಿ, ವನಿತಾ ಸೇವಾ ಸಮಾಜ ಶಂಕರಘಟ್ಟ ಭದ್ರಾವತಿ, ಶ್ರೀರಾಮ ಸೇವಾ ಸಂಘ ಶಿವಮೊಗ್ಗ, ವಿಶ್ವಕರ್ಮ ಅಕ್ಕಸಾಲಿಗರ ಸೇವಾ ಸಮಾಜ, ಭದ್ರಾವತಿ, ಭಾರತಿ ವಿದ್ಯಾ ಸಂಘ ಶಿವಮೊಗ್ಗ, ಶ್ರೀಕುಂದ ವಿದ್ಯಾಪೀಠ ಹುಂಚ ಹೊಸನಗರ, ದಿ ಬಾಪೂಜಿ ಹರಿಜನ ಸೇವಾ ಸಂಘ ಭದ್ರಾವತಿ, ಫುಲ್ ಗಾಸ್ಪೆಲ್ ಅಸೋಸಿಯೇಷನ್ ಶಿವಮೊಗ್ಗ, ಶರಾವತಿ ಮಹಿಳಾ ಮಂಡಳ, ಬೇಳೂರು ಸಾಗರ, ಮಹಿಳಾ ಸಮಾಜ ಹಳ್ಳಿಕೆರೆ ಭದ್ರಾವತಿ, ಮಹಿಳಾ ಮಂಡಳ ಮತ್ತೂರು ಶಿವಮೊಗ್ಗ, ಅಕ್ಕಮಹಾದೇವಿ ಸೇವಾ ಸಮಾಜ ಭದ್ರಾವತಿ, ಶ್ರೀಗಾಯತ್ರಿ ಮಹಿಳಾ ಸಮಾಜ ತಾಳಗುಪ್ಪ, ಸಾಗರ ಈ ಸಂಘಗಳ ರದ್ದತಿಗೆ ಕ್ರಮವಿಡಲಾಗಿದೆ.
    ಆದ್ದರಿಂದ ಸಂಬಂಧಪಟ್ಟವರು ಈ ಸಂಘಗಳ ರದ್ದತಿ ಕುರಿತು ಆಕ್ಷೇಪಣೆಗಳೇನಾದರೂ ಇದ್ದಲ್ಲಿ ದಾಖಲೆ ಮತ್ತು ಮಾಹಿತಿಯೊಂದಿಗೆ 7 ದಿನಗಳ ಒಳಗಾಗಿ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಜಿಲ್ಲಾ ನೋಂದಣಾಧಿಕಾರಿಗಳು(ಸಂಘ-ಸಂಸ್ಥೆ) ಶಿವಮೊಗ್ಗ ಇವರ ಕಚೇರಿಗೆ ಸಲ್ಲಿಸುವುದು. ತಪ್ಪಿದಲ್ಲಿ ಸಂಘಗಳ ಅಸ್ತಿತ್ವವಿಲ್ಲ ಎಂದು ಭಾವಿಸಿ ನೋಂದಣಿ ರದ್ದತಿಗೆ ಕ್ರಮವಿಡಲಾಗುವುದು ಎಂದು ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ಪ್ರಕಣೆಯಲ್ಲಿ ತಿಳಿಸಿದ್ದಾರೆ.

error: Content is protected !!