ಶ್ರೀವಿಜಯ ಕಲಾನಿಕೇತನದಿಂದ ಜನವರಿ 29 ರ ಭಾನುವಾರ ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ, ಡಾ|| ಕೆ.ಎಸ್. ಪವಿತ್ರ ಅವರ ನಿರ್ದೇಶನದಲ್ಲಿ ಡಾ|| ಪು.ತಿ.ನ ಅವರ ‘ಗೋಕುಲ ನಿರ್ಗಮನ’ ನೃತ್ಯ ರೂಪಕವನ್ನು ಏರ್ಪಡಿಸಲಾಗಿದೆ. ಡಾ|| ಕೆ.ಎಸ್.ಚೈತ್ರ, ಡಾ|| ಕೆ.ಎಸ್.ಪವಿತ್ರ, ಡಾ|| ಕೆ.ಎಸ್.ಶುಭ್ರತಾ ಮತ್ತು ಶ್ರೀವಿಜಯದ ತಂಡದವರಿಂದ ಈ ನೃತ್ಯ ರೂಪಕ ಮೂಡಿಬರಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್.ಅರುಣ್ ಮತ್ತು ಕನ್ನಡ ಪ್ರಾಧ್ಯಾಪಕರಾದ ಡಾ|| ಚನ್ನೇಶ್ ಹೊನ್ನಾಳಿ ಅವರು ಆಗಮಿಸಲಿದ್ದಾರೆ. ಶ್ರೀವಿಜಯದ ಅಧ್ಯಕ್ಷರಾದ ಡಾ|| ಕೆ.ಆರ್.ಶ್ರೀಧರ್‍ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.. ನೃತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀವಿಜಯದ ನಿರ್ದೇಶಕಿ ಡಾ|| ಕೆ.ಎಸ್.ಪವಿತ್ರ ಕೋರಿದ್ದಾರೆ.

error: Content is protected !!