
ಶಿವಮೊಗ್ಗ : ಸರ್ಜಿ ಆಸ್ಪತ್ರೆಗಳ ಸಮೂಹಕ್ಕೆ ಈಗ ಹೊಸದೊಂದು ಸೇರ್ಪಡೆಗೊಂಡಿದ್ದು, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಭಾನುವಾರ ಹೃದ್ರೋಗ ಚಿಕಿತರಸಾ ವಿಭಾಗವನ್ನು ದೀಪ ಬೆಳಗಿಸುವ ಮೂಲಕ ದಕ್ಷಿಣಮ್ನಾಯ ಶೃಂಗೇರಿ ಪೀಠಾಧೀಶ್ವರರಾದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಧಾನಂಗಳವರು ಲೋಕಾರ್ಪಣೆ ಗೊಳಿಸಿದರು.
ಜಗದ್ಗುರುಗಳು ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಮಂಗಳವಾಧ್ಯದೊಂದಿಗೆ ಅವರನ್ನು ಬರಮಾಡಿಕೊಳ್ಳಲಾಯಿತು.
ಜಗದ್ಗುರುಗಳು ಹೃದ್ರೋಗ ವಿಭಾಗದಲ್ಲಿ ಪೂಜೆ ಸಲ್ಲಿಸಿ, ಎಲ್ಲರಿಗೂ ಫಲ, ಪುಷ್ಪವನ್ನು ನೀಡಿ ಅನುಗ್ರಹಿಸಿದರು. ಅಲ್ಲದೇ ಆಸ್ಪತ್ರೆಯ ಎಲ್ಲ ವಿಭಾಗಗಳಿಗೂ ಭೇಟಿ ನೀಡಿ ವೀಕ್ಷಿಸಿ, ಆಶೀರ್ವದಿಸಿದರು.
ಆರ್ಸ್ಎಸ್ನ ಪ್ರಮುಖರಾದ ಪಟ್ಟಾಭಿರಾಮ್, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಧನಂಜಯ ಸರ್ಜಿ, ನಿರ್ದೇಶಕಿ ನಮಿತಾ ಸರ್ಜಿ,ಆಡಳಿತಾಧಿಕಾರಿ ಕೆ.ಆರ್.ಪುರುಷೋತ್ತಮ ಅವರು ಸೇರಿದಂತೆ ಸರ್ಜಿ ಆಸ್ಪತ್ರೆಗಳ ಸಮೂಹದ ವೈದ್ಯರು, ಸಿಬ್ಬಂದಿ ಹಾಗೂ ಭಕ್ತ ವೃಂದದವರು ಹಾಜರಿದ್ದರು.

ಶಿವಮೊಗ್ಗ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಭಾನುವಾರ ಹೃದ್ರೋಗ ಚಿಕಿತರಸಾ ವಿಭಾಗವನ್ನು ದಕ್ಷಿಣಮ್ನಾಯ ಶೃಗೇರಿ ಪೀಠಾಧೀಶ್ವರರಾದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಧಾನಂಗಳವರು ಲೋಕಾರ್ಪಣೆ ಗೊಳಿಸಿದರು.