ಶೈಕ್ಷಣಿಕ ಕ್ಷೇತ್ರದಲ್ಲಿ ನಿಗದಿಪಡಿಸಿದ ಗುರಿ ತಲುಪಲಿಚ್ಚಿಸುವ ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯೂ.ಸಿ.ಯಲ್ಲಿ ಉತ್ತೀರ್ಣರಾದ ಸರ್ಕಾರಿ ನೌಕರರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹಧನ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

    ತಮ್ಮ ಮಕ್ಕಳ ಭವಿಷ್ಯದ ಬದುಕು ನಮ್ಮ ನಿರೀಕ್ಷೆಯಂತೆಯೆ ಇರಬೇಕು. ಡಾಕ್ಟರ್.. ಇಂಜಿನಿಯರ್ ಆಗಿರಬೇಕು ಎಂಬಂತಹ ಆಸೆ- ಆಕಾಂಕ್ಷೆಗಳಿಂದಾಗಿ ಪೆÇೀಷಕರು ಮತ್ತು ಪೆÇೀಷಕರ ಆಸೆಯಂತೆ ಇಷ್ಟವಿರದಿದ್ದರೂ ಒತ್ತಡದಲ್ಲಿ ದಿನಕಳೆಯುವ ವಿದ್ಯಾರ್ಥಿಗಳ ಮಾನಸಿಕ ಹೊಯ್ದಾಟ, ಚಡಪಡಿಕೆ ಹೇಳತೀರದ್ದಾಗಿರುತ್ತದೆ ಎಂದ ಅವರು ಪೆÇೀಷಕರು ಮಕ್ಕಳಿಗೆ ಅಭ್ಯಾಸಕ್ಕೆ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು. ಬದಲಾಗಿ ಒತ್ತಡ ಹೇರಬಾರದು ಎಂದರು.

ಮಕ್ಕಳೂ ಕೂಡ ನಿರೀಕ್ಷಿತ ಗುರಿ ಸಾಧನೆಗೆ ಸತತ ಪರಿಶ್ರಮ.. ನಿರಂತರ ಅದ್ಯಯನ.. ಸಕಾರಾತ್ಮಕ ಚಿಂತನೆ.. ಉತ್ತಮ ಹವ್ಯಾಸಗಳನ್ನು ಹೊಂದಿರಬೇಕು. ಇದರಿಂದಾಗಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಅವರು ಮಾತನಾಡಿ, ಮಕ್ಕಳ ಪೆÇೀಷಕರ ತುಡಿತ ತುಮುಲವನ್ನು, ಅವರ ಆಶಯವನ್ನು ಅರ್ಥ ಮಾಡಿಕೊಂಡು ಅಧ್ಯಯನ ಮಾಡಬೇಕಾದ ಅಗತ್ಯವಿದೆ ಎಂದ ಅವರು ಮಕ್ಕಳು ಅಹಮಿಕೆ ಮತ್ತು ಸೋಮಾರಿತನದಿಂದ ಹೊರಬರುವಂತೆ ಕಿವಿಮಾತು ಹೇಳಿದರು.

ಮಕ್ಕಳ ಮತ್ತು ಪೆÇೀಷಕರ ಸಂಬಂಧ ಅನೋನ್ಯವಾಗಿದ್ದಾಗ ಮಕ್ಕಳ ಶೈಕ್ಷಣಿಕ ವಾತಾವರಣವೂ ಸಹಜವಾಗಿ ಚೆನ್ನಾಗಿರುತ್ತದೆ. ಮಕ್ಕಳ ಸಾಧನೆ ಪೆÇೀಷಕರಿಗೆ ಅತ್ಯಂತ ಸಂಭ್ರಮದ ಕ್ಷಣವಾಗಿರುತ್ತದೆ ಎಂದರು.

ವಿದ್ಯಾರ್ಥಿಗಳಾಗಿದ್ದವರು ಮೊಬೈಲ್.. ಸಾಮಾಜಿಕ ಜಾಲತಾಣಗಳಿಂದ ಹೊರಬರುವಂತೆ ಸೂಚಿಸಿದ ಅವರು ಗುರಿ ಸಾಧನೆಗೆ ಅಚಲ ಛಲ ಹೊಂದಿರಬೇಕೆಂದವರು ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೆÇಲೀಸ್ ವರಿμÁ್ಠದಿಕಾರಿ ಕೆ.ಎಂ.ಶಾಂತರಾಜು ಅವರು ಮಾತನಾಡಿ, ಸ್ಪರ್ಧಾತ್ಮಕವಾಗಿರುವ ಇಂದಿನ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಬೇಕು. ಗುರಿ ತಲುಪಲು ಶಿಸ್ತಿನ ಜೀವನ ವಿಧಾನ ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ನೌಕರರು ಮಾತ್ರವಲ್ಲ ನೌಕರರ ಕುಟುಂಬದ ಹಿತ-ಸುಖ ಕಾಪಾಡುವ ನಿಟ್ಟಿನಲ್ಲಿ ಸಂಘವು ಸಕ್ರಿಯವಾಗಿದೆ. ನೌಕರರು ತಮ್ಮ ಪ್ರತಿಭಾವಂತ ಮಕ್ಕಳ ಉನ್ನತಿಗೆ ಶ್ರಮಿಸುವಂತೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ನೌಕ್ರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮ.ಸ.ನಂಜುಂಡಸ್ವಾಮಿ, ಆರ್.ಮೋಹನ್ ಕುಮಾರ್, ಐ.ಪಿ.ಶಾಂತರಾಜ್ ಸೇರಿದಂತೆ ನೌಕರರ ಸಂಘದ ಎಲ್ಲಾ ತಾಲೂಕು ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.

error: Content is protected !!