ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯ ಚಿಕ್ಕಲ್ ಗೆ ಭೇಟಿ ನೀಡಿದ ಶಿಶು ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಹಾಗು ಅಂಗನವಾಡಿ ಕಾಯ೯ಕತೆ೯ಯರು ಗ್ರಾಮಕ್ಕೆ ಭೇಟಿ ಮಾಡಿ ಹರಿಯಾಣ ರಾಜ್ಯದ 10 ಅಲೆಮಾರಿ ಕುಟುಂಬಗಳು ಇದ್ದು ಇವರ ಮೂಲ ಕಸಬು ಚಾಪೆ ನೇಯುವುದು ಪ್ಲಾಸ್ಟಿಕ್ ಹೂ, ಗೊಂಬೆ ತಯಾರಿಕೆ ಮಾಡಿ ಮಾರಾಟ ಮಾಡುವುದು. ಇವರನ್ನು ಗುರುತಿಸಿ ಲಾಕ್ ಡೌನ್ ಕಾರಣ ಇವರು ಹಾಲಿ ಚಿಕ್ಕಲ್ ಗುರುಪುರ ಇಲ್ಲಿ ತಾತ್ಕಾಲಿಕ ೧೦ ಟೆಂಟ್ ಗಳನ್ನು ಹಾಕಿಕೊಂಡು ವಾಸವಾಗಿದ್ದಾರೆಎಂದು ತಿಳಿದು ಬಂದ ಹಿನ್ನಲೆಯಲ್ಲಿ ೧೦ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಮಾಡಿದರು. ಶಿಶು ಅಭಿವೃದ್ದಿ ಇಲಾಖೆಯ ಆಧಿಕಾರಿ . ಎನ್.ಚಂದ್ರಪ್ಪ, ಹಾಗು ಅಂಗನವಾಡಿ ಕಾಯ೯ಕತೆ೯ಯರು ಉಪಸ್ಥಿತರಿದ್ದರು.