ಶಿವಮೊಗ್ಗ ನಗರದ 110 ವರ್ಷಗಳ ಇತಿಹಾಸವುಳ್ಳ ಪ್ರತಿಷ್ಠಿತ ಸಿಟಿಕೋ ಆಪರೇಟಿವ್ ಬ್ಯಾಂಕ್ ನ ಉಪಾಧ್ಯಕ್ಷರ ಚುನಾವಣೆಯಲ್ಲಿ ಕೆ ರಂಗನಾಥ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದು
ಈ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಎಸ್ ಕೆ ಮರಿಯಪ್ಪನವರು ಹಸ್ತ ಲಗಾವ್ ಮಾಡುವುದರ ಮುಖಾಂತರ ಶುಭ ಕೋರಿದರು, ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಉಮಾಶಂಕರ ಉಪಾಧ್ಯಾಯರವರು ಖಜಾಂಚಿ ಉಮೇಶ್ ಪುಟ್ಟಪ್ಪನವರು ಎಲ್ಲಾ ಗೌರವಾನ್ವಿತ ನಿರ್ದೇಶಕರು ಹಾಜರಿದ್ದರು, ಬ್ಯಾಂಕಿನ ಚುನಾವಣೆ ಅಧಿಕಾರಿಯಾಗಿ ಜಿಲ್ಲಾ ಸಹಕಾರಿ ಸಂಘಗಳ ಅಧಿಕಾರಿಗಳಾದ ಶ್ರೀ ಅಶೋಕ್ ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಧಿಕಾರಿ ಮನೋಜ್ ಕುಮಾರ್ ಎಲ್ಲರಿಗೂ ವಂದಿಸಿದರು