ಶಿವಮೊಗ್ಗ, ಸೆ. 19ಃ : ಈ ಬಾರಿ ಶಿವಮೊಗ್ಗ ದಸರಾ ಭಾಗವಾಗಿ ಆಯೋಜನೆಗೊಂಡಿರುವ ಶಿವಮೊಗ್ಗ ರಂಗ ದಸರಾ ಕಾರ್ಯಕ್ರಮಗಳನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಯೋಜಿಸಲಾಗುತ್ತಿದೆ ಎಂದು ರಂಗ ದಸರಾ ಸಮಿತಿಯ ಸದಸ್ಯ ಎಸ್. ಎನ್. ಚೆನ್ನಬಸಪ್ಪ ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸೆ. 27ರಂದು ಬೆಳಿಗ್ಗೆ 10.30ಕ್ಕೆ ಮಹಾನಗರ ಪಾಲಿಕೆಯಿಂದ ಕುವೆಂಪು ರಂಗಮಂದಿರದ ವರೆಗೆ ನಡೆಯುವ ರಂಗ ಜಾಥಾಗೆ ಹಿರಿಯ ರಂಗ ಕರ್ಮಿ ಹಾಲೇಶ್‍ರವರು ಚಾಲನೆ ನೀಡಲಿದ್ದು, ನಂತರ ರಂಗ ಕರ್ಮಿ, ನಾಟಕಕಾರ ಗಜಾನನ ಶರ್ಮರವರು ರಂಗ ದಸರಾವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ರಂಗ ಕರ್ಮಿಗಳ ಸಮಾವೇಶ ನಡೆಯಲಿದ್ದು, ರಂಗ ಕರ್ಮಿ, ಚಿಂತಕ ವಿಜಯವಾÀಮನ ಸಂವಹನಕಾರರಾಗಿ ಭಾಗವಹಿಸಲಿದ್ದಾರೆ ಎಂದರು.
ಮಧ್ಯಾಹ್ನ 2.30ಕ್ಕೆ ಮೂಕಾಭಿನಯ ಸ್ಪರ್ಧೆಯನ್ನು ಹಿರಿಯ ರಂಗ ಕರ್ಮಿ ಕಾಂತೇಶ್ ಕದರಮಂಡಲಗಿಯವರು ಚಾಲನೆಗೊಳಿಸಲಿದ್ದು, ಸಂಜೆ 6.30ಕ್ಕೆ ರಂಗ ತುಣುಕುಗಳನ್ನು ರಂಗ ಕರ್ಮಿ ರೇಣುಕಪ್ಪ ಉದ್ಘಾಟಿಸಲಿದ್ದಾರೆ.
ಸೆ. 28ರಂದು ಸರ್ಕಾರಿ ನೌಕರರ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಜಿಲ್ಲಾ ಮಟ್ಟದ ಏಕಾಪಾತ್ರಾಭಿನಯ ಸ್ಪರ್ಧೆ (ಶಾಲಾ, ಕಾಲೇಜು ಮತ್ತು ಸಾರ್ವಜನಿಕ ವಿಭಾಗಗಳಲ್ಲಿ) ನಡೆಯಲಿದ್ದು, ರಂಗಕರ್ಮಿ ಹರಿಗೆ ಗೋಪಾಲ ಸ್ವಾಮಿ ಚಾಲನಕ್ಷ ನೀಡಲಿದ್ದಾರೆ. ಅಂದು ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ಧೆ ನಡೆಯಲಿದ್ದು, ಹಿರಿಯ ರಂಗ ಕರ್ಮಿ, ಪರಿಸರ ವಾದಿ ಪೆÇ್ರ. ಬಿ.ಎಂ.ಕುಮಾರ್ ಸ್ವಾಮಿ ಚಾಲನೆ ನೀಡಲಿದ್ದು, ರಂಗ ನಟ ರಾಜ್ ಕುಮಾರ್ ಡಿ.ಎಂ. ಹಾಗೂ ರಂಗ ಕಲಾವಿದೆ ಗಾಯತ್ರಿ ಉಪಸ್ಥಿತರಿರಲಿದ್ದಾರೆ.
ಸೆ. 29 ಮತ್ತು 30 ರಂದು ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ಧೆ ಮುಂದುವರಿಯಲಿದೆ.
ಸೆ. 01ರಂದು ಕುವೆಂಪು ರಂಗ ಮಂದಿರದಲ್ಲಿ ಮಕ್ಕಳ ರಂಗೋತ್ಸವ – ಸರ್ಕಾರಿ ಶಾಲಾ ಮಕ್ಕಳಿಂದ 5 ನಾಟಕ ಪ್ರದರ್ಶನ ನಡೆಯಲಿದ್ದು, ಬೆಳಿಗ್ಗೆ 10.00 ಕುವೆಂಪು ರಂಗಮಂದಿರ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾ„ಕಾರಿಗಳು, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಾಗೂ ಹಿರಿಯ ರಂಗಕರ್ಮಿ ವಿಜಯ ಲಕ್ಷ್ಮೀಯವರು ಚಾಲನೆ ನೀಡಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ರಂಗ ಕರ್ಮಿ, ಪ್ರಾಚಾರ್ಯ ಡಾ|| ಹೆಚ್.ಎಸ್.ನಾಗಭೂಷಣ,
ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ರಂಗ ದಸರಾ ಸಮಿತಿ ಅಧ್ಯಕ್ಷ ಶಿರೀಶ್, ಸದಸ್ಯರಾದ ಆರ್. ಸಿ. ನಾಯಕ್, ಪ್ರಭಾಕರ್ (ಪ್ರಭು), ಹೆಚ್. ಮೂರ್ತಿ, ಕಾರ್ಯದರ್ಶಿ ಮಧು ನಾಯಕ್ ಉಪಸ್ಥಿತರಿದ್ದರು.
ಬಾಕ್ಸ್
ಇದೇ ಸಂದರ್ಭದಲ್ಲಿ ನಗರದ ವಿವಿಧೆಡೆಗಳಲ್ಲಿ ಪ್ರತಿನಿತ್ಯ ಸಂಜೆ 6.30ರಿಂದ ರಂಗ ಗೀತೆಗಳ ಗಾಯನ ಕಾರ್ಯಕ್ರಮಗಳು ನಡೆಯಲಿದ್ದು, ವಿವರಗಳು ಇಂತಿವೆ
ಸೆ. 27, ಗೋಪಾಲ ಗೌಡ ಬಡಾವಣೆಯ ನಿಸರ್ಗ ಪಾರ್ಕ್‍ನಲ್ಲಿ ಮಧುರಾ ಕಲಾ ತಂಡ, ಸೆ. 28ರಂದು, ವಿನೋಬ ನಗರ ಪಿ ಅಂಡ್ ಟಿ ಕಾಲೋನಿಯ ಪಾರ್ಕ್‍ನಲ್ಲಿ ರಂಗ ಬೆಳಕು ತಂಡ, ಸೆ. 29ರಂದು ಇಸ್ಲಾಪುರದ ನಾಗ ಚೌಡೇಶ್ವರಿ ದೇವಾಲದ ಪಾರ್ಕ್‍ನಲ್ಲಿ ಸಹ್ಯಾದ್ರಿ ಕಲಾ ತಂಡ, ಸೆ. 30ರಂದು ರಾಜೇಂದ್ರ ನಗರ ಪಾರ್ಕ್‍ನಲ್ಲಿ ನಮ್ ಟೀಮ್ ತಂಡ ಹಾಗೂ ಅ. 01ರಂದು ಕೋಟೇ ಬಯಲು ರಂಗಮಂದಿರದ್ಲಿ ಚಲುವ ರಂಗ ತಂಡದಿಂದ ರಂಗ ಗೀತೆಗಳ ಗಾಯನ ನಡೆಯಲಿದೆ.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಹಾಸ್ಯ ನಾಟಕ ರಚನಾ ಸ್ಪರ್ಧೆ ಕೂಡಾ ನಡೆಯಲಿದ್ದು, ನಾಟಕ ರಚನೆಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ.
ಕಡ್ಡಾಯವಾಗಿ ಸದಭಿರುಚಿಯ ಹಾಸ್ಯ ನಾಟಕವಾಗಿರಬೇಕು, ಸುಮಾರು ಒಂದು ಗಂಟೆ ಕಾಲಾವ„ಯ ಪ್ರದರ್ಶನಕ್ಕೆ ಅನುಕೂಲವಾಗುವ ಹಾಗೆ ಇರಬೇಕು, ವಸ್ತು – ವಿಷಯವನ್ನು ಯಾವುದೇ ಕಾದಂಬರಿ, ಕಥೆಗಳಿಂದ ಎರವಲು ಪಡೆದಿರಬಾರದು. ಸಂಪೂರ್ಣ ಸ್ವಂತದ್ದಾಗಿರಬೇಕು, ನಾಟಕಗಳನ್ನು ನುಡಿ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಕಳಿಸಬೇಕು, ವಿಜೇತರ ಹೆಸರು ಹಾಗೂ ಬಹುಮಾನ ವಿತರಣಾ ದಿನಾಂಕವನ್ನು ನಂತರ ತಿಳಿಸಲಾಗುವುದು. ನಾಟಕಗಳನ್ನು ಅ.15ರ ಒಳಗಾಗಿ ಛಿomeಜಥಿsಛಿಡಿiಠಿಣsmg@gmಚಿiಟ.ಛಿom ಈ ಮೇಲ್ ಗೆ ಕಳಿಸಬೇಕು. ಲೇಖಕರ ಸಂಪೂರ್ಣ ವಿಳಾಸ, ಈ ಮೇಲ್ ವಿಳಾಸ, ಭಾವಚಿತ್ರ, ದೂರವಾಣಿ, ವಾಟ್ಸಪ್ ಸಂಖ್ಯೆಗಳನ್ನು ಸ್ಪಷ್ಟವಾಗಿ ನಮೂದಿಸುವುದು. ಐದು ವಿಜೇತ ನಾಟಕಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ನಾಟಕ ರಚನಾ ಸ್ಪರ್ಧೆ ಮಾಹಿತಿಗಾಗಿ 9448138183, 9844456505ರಲ್ಲಿ ಸಂಪರ್ಕಿಸಬಹುದು. ವಿಜೇತರಿಗೆ ಪ್ರಥಮ ಬಹುಮಾನ 10,000/-, ದ್ವಿತೀಯ ಬಹುಮಾನ 08,000/-, ತೃತೀಯ ಬಹುಮಾನ 06,000/- ಸಮಾಧಾನಕರ ಬಹುಮಾನ ತಲಾ 4,000/-ದ ಎರಡು ಬಹುಮಾನಗಳಿವೆ
ಹಾಸ್ಯ ನಾಟಕ ಸ್ಪರ್ಧೆಯ ನಿಬಂಧನೆಗಳು
ಕಡ್ಡಾಯವಾಗಿ ಸದಭಿರುಚಿಯ ಹಾಸ್ಯ ನಾಟಕವಾಗಿರಬೇಕು, ಸುಮಾರು 45ರಿಂದ 60 ನಿಮಿಷ ಕಾಲಾವ„ಯಲ್ಲಿ ಇರಬೇಕು
ಒಂದು ತಂಡದಲ್ಲಿ ಕನಿಷ್ಠ 10 ಮಂದಿ ಇರಬೇಕು ಪಾಲ್ಗೊಂಡ ಪ್ರತೀ ತಂಡಕ್ಕೂ ಸ್ಮರಣಿಕೆ ಹಾಗೂ ಸರ್ಟಿಫಿಕೇಟ್ ನೀಡಲಾಗುವುದು, ಪ್ರತೀ ತಂಡಕ್ಕೂ ಸಾಮಾನ್ಯ ಊಟ, ಡಾರ್ಮೆಟರಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗುವುದು, 06 ಮೊದಲ ಮೂರು ನಾಟಕಗಳಿಗೆ ನಗದು ನೀಡಲಾಗುವುದು, ಮೊದಲ ಮೂರು ನಾಟಕಗಳಿಗೆ ನಗದು ಹಾಗೂ ಟ್ರೋಫಿ ಕೊಡಲಾಗುವುದು, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಹಾಸ್ಯ ನಟ, ಅತ್ಯುತ್ತಮ ಹಾಸ್ಯ ನಟಿಗೆ ನಗದು ಪುರಸ್ಕಾರವಿದೆ. ನಾಟಕ ಸ್ಪರ್ಧೆ ಶಿವಮೊಗ್ಗದ ಕುವೆಂಪು ರಂಗಮಂದಿದಲ್ಲಿ ರಂಗ ದಸರಾ ಉತ್ಸವದಲ್ಲಿ ಸೆಪ್ಟಂಬರ್ 29 ಹಾಗೂ 30 ರಂದು ನಡೆಯಲಿವೆ. ತಂಡ ಹಾಗೂ ನಾಟಕದ ವಿವರಗಳನ್ನು ಸೆಪ್ಟಂಬರ್ 24ರ ಒಳಗಾಗಿ comedyscriptsmg@gmail.com ಈ ಮೇಲ್ ಗೆ ಕಳಿಸಬೇಕು. ಸ್ಪರ್ಧೆಗೆ ಆಯ್ಕೆಯಾದ ನಾಟಕ ತಂಡಗಳಿಗೆ ವೈಯಕ್ತಿಕವಾಗಿ ತಿಳಿಸಲಾಗುವುದು. ಮೊದಲ ಬಹುಮಾನ ಪಡೆದ ತಂಡವು ಬಹುಮಾನ ವಿತರಣೆ ದಿನ, ಆದೇ ನಾಟಕವನ್ನು ಪ್ರದರ್ಶಿಸಬೇಕು. ನಾಟಕ ಸ್ಪರ್ಧೆ ಮಾಹಿತಿಗಾಗಿ 9448138183, 9844456505 , ವಿಜೇತರಿಗೆ ಪ್ರಥಮ ಬಹುಮಾನ 30,000/-, ದ್ವಿತೀಯ ಬಹುಮಾನ 25,000/-, ತೃತೀಯ ಬಹುಮಾನ 20,000/- ಶ್ರೇಷ್ಟ ನಟ, ಶ್ರೇಷ್ಟ ನಟಿ, ಶ್ರೇಷ್ಟ ನಿರ್ದೇಶಕರಿಗೆ ತಲಾ 5,000 ರೂ.ಗಳ ಬಹುಮಾನವಿದೆ.