ಶಿವಮೊಗ್ಗ, ಏಪ್ರಿಲ್ 20 : ಶಿವಮೊಗ್ಗ ಮಹಾನಗರ ಪಾಲಿಕೆಯ ಆಶ್ರಯ ಯೋಜನೆಯಡಿ ರಾಜೀವ್ ಗಾಂಧೀ ಗ್ರಾಮೀಣ ವಸತಿ ನಿಗಮದಡಿ ನವುಲೆ ಗ್ರಾಮದ ಸರ್ವೇ ನಂ. 56ರ ‘ಹೆಚ್ ಬ್ಲಾಕ್’ನಲ್ಲಿ ನಿರ್ಮಾಣಗೊಂಡ 221 ನಿವೇಶನಗಳಿಗೆ ಆಯ್ಕೆಯಾದ ಫಲಾನುಭವಿಗಳಲ್ಲಿ ಕೆಳಕಂಡ 31 ಜನ ಫಲಾನುಭವಿಗಳು ಮನೆಗಳ ನಿರ್ಮಾಣ ಬಾಬ್ತು ರೂ. 40000/- ವಂತಿಕೆ, ರೂ. 70000/- ಬ್ಯಾಂಕ್ ಸಾಲದ ಮೊತ್ತವನ್ನು ಪಾವತಿಸಿದ್ದಲ್ಲಿ ರಶೀದಿಯನ್ನು ಕಚೇರಿಗೆ ಹಾಜರುಪಡಿಸಲು ಹಾಗೂ ಫಲಾನುಭವಿಗಳು ಮನೆಗಳಲ್ಲಿ ವಾಸವಿಲ್ಲದ ಬಗ್ಗೆ ಮಾಹಿತಿ ನೀಡಲು ಎರಡು ಬಾರಿ ನೋಟಿಸ್ ನೀಡಲಾಗಿದ್ದು, ಈವರೆಗೆ ಉತ್ತರ ನೀಡಿರುವುದಿಲ್ಲ. ದಿ: 04/11/2020 ರಲ್ಲಿ ಅಂತಿಮ ನೋಟಿಸ್ ನೀಡಿದ್ದರೂ ಈವರೆಗೆ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ ಹಾಗೂ ಮನೆಗಳಲ್ಲಿ ವಾಸವಿರುವುದಿಲ್ಲ.
ನಿವೇಶನ ಸಂಖ್ಯೆ: 6- ಸಿ.ಎಸ್.ನೇತ್ರಾವತಿ ಕೋಂ ಪಿ.ಶಾಂತಕುಮಾರ್ , ನಿ.ಸಂ.: 25- ವಿನೋದಮ್ಮ ಕೋಂ ವೆಂಕಟೇಶ ಶೆಟ್ಟಿ, ನಿ.ಸಂ.: 26- ಸತ್ಯಭಾಮ ಕೆ.ಆರ್. ಕೋಂ ಗೋಪಾಲಕೃಷ್ಣ ಎ.ವಿ., ನಿ.ಸಂ.: 30- ಪದ್ಮಾವತಿ ಕೋಂ ವಾಸಿ ಎನ್., ನಿ.ಸಂ.: 51-ಹೆಚ್.ಆರ್.ಸುಮಿತ್ರ ಕೋಂ ಬಾಲಕೃಷ್ಣ, ನಿ.ಸಂ.: 52- ಗಾಯತ್ರಿ ಕೋಂ ಭಾಸ್ಕರ್, ನಿ.ಸಂ.: 55 – ನಾಗಮ್ಮ ಕೋಂ ಲೇ.ನರಸಿಂಗಭಟ್ ಜಿ., ನಿ.ಸಂ.: 58- ಮಲರ್ ಕೋಂ ವಿಭೂಷಣ ಆಚಾರಿ, ನಿ.ಸಂ.: 77- ಶಾರದಾಂಬಾ ಕೋಂ ಜಯರಾಮ್, ನಿ.ಸಂ.: 78- ಶಾಂತಮ್ಮ ಕೋಂ ನಾಗಪ್ಪ, ನಿ.ಸಂ.: 84 – ಅನುಸೂಯ ಕೋಂ ಮಂಜುನಾಥ, ನಿ.ಸಂ.: 90- ಮಂಗಳ ಕೋಂ ಅಣ್ಣಪ್ಪ, ನಿ.ಸಂ.: 100- ಎಸ್. ಶಂಕರಮೂರ್ತಿ (ಅಂಗವಿಕಲ) ಬಿನ್ ನರಸೇಗೌಡ, ನಿ.ಸಂ.: 103- ಕೆ.ಜಿ.ಪ್ರೇಮಾಲತ ಕೋಂ ಲೇ. ಕೆ.ನಾರಾಯಣ, ನಿ.ಸಂ.: 139- ಅನ್ನಪೂರ್ಣ ಕೋಂ ನಾಗರಾಜ್ ಕೆ.ಬಿ., ನಿ.ಸಂ.: 140- ಪ್ರತಿಭಾ ಎನ್. ಬೋನ್ಸ್ಲೆ ಕೋಂ ಹೆಚ್.ಬಿ. ಸತ್ಯನಾರಾಯಣ, ನಿ.ಸಂ.: 144- ಮಂಜುಳಾ ಕೋಂ ಪಂಚಮೂರ್ತಿ, ನಿ.ಸಂ.: 151- ಎ. ಮಂಜುಳಾ ಕೋಂ ಮಲ್ಲಿಕಾರ್ಜುನ ಸಿ.ಎಂ., ನಿ.ಸಂ.: 152- ಶಾಂತ ಕೋಂ ಜಗದೀಶ್, ನಿ.ಸಂ.: 164- ಮಂಜುಳ ಸೆಲ್ವಿ ಕೋಂ ಶ್ರೀನಿವಾಸ, ನಿ.ಸಂ.: 165- ರಾಜೇಶ್ವರಿ ಕೋಂ ಲೇ. ಜಿ.ಮೋಹನ್, ನಿ.ಸಂ.: 174- ಸರಸ್ವತಿ ಕೋಂ ಚಿಕ್ಕಹನುಮಯ್ಯ, ನಿ.ಸಂ.: 180- ಪದ್ಮ ಕೋಂ ಮಣಿ, ನಿ.ಸಂ.: 193- ಸಭೀಹಾ ಬೇಗಂ ಕೋಂ ನಜೀರ್ ಅಹ್ಮದ್, ನಿ.ಸಂ.: 196- ಜಿ.ಡಿ.ರಾಜೇಶ್ವರಿ ಕೋಂ ಜಿ.ವಿ.ದ್ರವಕುಮಾರ್, ನಿ.ಸಂ.: 207- ಗೀತಾ ಕೋಂ ಅಶೋಕ್, ನಿ.ಸಂ.: 211- ಕಮಲಬಾಯಿ ಕೋಂ ಸತ್ಯಕುಮಾರ್, ನಿ.ಸಂ.: 217- ಸುಮಿತ್ರ ಕೋಂ ನಂಜುಂಡಪ್ಪ, ನಿ.ಸಂ.: 218- ಕುಸುಮ ಕೋಂ ಮಂಜಪ್ಪ, ನಿ.ಸಂ.: 219- ಕಲಾವತಿ ಕೋಂ ಅಶ್ವಧಪ್ಪ ಈ ಎಲ್ಲಾ 31 ಫಲಾನುಭವಿಗಳಿಗೆ ಆಶ್ರಯ ಸಮಿತಿ ಸಭೆಯಲ್ಲಿ ಮನೆಗಳನ್ನು ರದ್ಧುಪಡಿಸಲು ತೀರ್ಮಾನ ಕೈಗೊಂಡಿದ್ದು, ಈ ಪತ್ರಿಕಾ ಪ್ರಕಟಣೆಗೊಂಡ 30 ದಿನಗಳೊಳಗೆ ದಾಖಲೆಗಳನ್ನು ಹಾಜರುಪಡಿಸಲು ಹಾಗೂ ಈ ವಿಚಾರವಾಗಿ ಆಕ್ಷೇಪಣೆ/ತಕರಾರು ಇದ್ದಲ್ಲಿ ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಸಲ್ಲಿಸಲು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.