ಕೊಳಚೆ ಪ್ರದೇಶದ ನಿವಾಸಿಗಳಿಗೆ ತಕ್ಷಣ ಹಕ್ಕು ಪತ್ರ ನೀಡಿ: ಆಮ್ ಆದ್ಮಿ ಪಕ್ಷ ಆಗ್ರಹ
ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ಇಂದು ಮನವಿಯನ್ನು ಸಲ್ಲಿಸಿದರು.
ಶಿವಮೊಗ್ಗ ನಗರದಲ್ಲಿ ಸರ್ಕಾರಿ ಮಾಲೀಕತ್ವದಲ್ಲಿ ಮಹಾನಗರ ವ್ಯಾಪ್ತಿಯಲ್ಲಿ ಖಾಸಗಿ ಜಾಗದಲ್ಲಿ ಕೊಳಚೆ ನಿರ್ಮೂಲನ ಮಂಡಳಿ ಮಾಲೀಕತ್ವದ ಪ್ರದೇಶ ಸೇರಿದಂತೆ ಒಟ್ಟು 53 ಕೊಳಚೆ
ಪ್ರದೇಶಗಳಿವೆ. ಇಲ್ಲಿ 15 ಸಾವಿರಕ್ಕೂ ಹೆಚ್ಚು
ಜನರು ವಾಸವಾಗಿದ್ದಾರೆ. ಇವೆಲ್ಲವೂ
ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿದ್ದರೂ ಕೂಡ ಇದುವರೆಗೂ ಮೂಲಭೂತ
ಸೌಕರ್ಯಗಳನ್ನು ಸರ್ಕಾರ ಒದಗಿಸಿ
ಎಂದು ಪ್ರತಿಭಟನಕಾರರು ದೂರಿದರು.
ಕೊಳಚೆ ನಿರ್ಮೂಲನ ಮಂಡಳಿ ಇನ್ನೆರಡು
ತಿಂಗಳಲ್ಲಿ ಹಕ್ಕುಪತ್ರ ಕೊಡುವುದಾಗಿ
ಹೇಳುತ್ತಿದೆ. ನಗರದಲ್ಲಿರುವ ಎಲ್ಲ
ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಕೂಡ
ಶಾಶ್ವತ ಹಕ್ಕುಪತ್ರ ನೀಡಬೇಕು ಎಂದು
ಮನವಿಯಲ್ಲಿ ಆಗ್ರಹಿಸಲಾಯಿತು
ಆಮ್ ಆದ್ಮಿ ಪಕ್ಷದ ಪ್ರಮುಖರಾದ ನೇತ್ರಾವತಿ
ರೋಹಿತ್, ರವಿಕುಮಾರ್, ಪುಷ್ಪಲತ
ಸುರೇಶ್ ಕೋಟೆಗಾರ್, ಮಕ್ಕುಲ್ ಅಹ್ಮದ್
ಪ್ರದೀಪ್ ಸೇರಿದಂತೆ ಹಲವರಿದ್ದರು.
.