ಭಾರತೀಯ ಚುನಾವಣಾ ಆಯೋಗ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಬುಧುವಾರ ರಾತ್ರಿ ನಗರದ ಮುಖ್ಯ ರಸ್ತೆಯಲ್ಲಿ ಕ್ಯಾಂಡಲ್ ಮಾರ್ಚ್ ಆಯೋಜಿಸಲಾಗಿತ್ತು ಶಿವಮೊಗ್ಗ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕ್ಯಾಂಡಲ್ ಮಾರ್ಚ್ ನಡೆಸಿ ಮತದಾನದ ಜಾಗೃತಿಯನ್ನು ಪರಿಚಯಿಸಿತು
ವಿವಿಧ ಜಾನಪದ ಕಲಾತಂಡಗಳು ಡೊಳ್ಳು ಮತ್ತು ಇತರ ವಾದ್ಯಗಳನ್ನು ನುಡಿಸಿ ಮತದಾನದಲ್ಲಿ ಭಾಗವಹಿಸಿ ಎಂಬ ಧ್ಯೇಯ ವಾಕ್ಯವನ್ನು ಪರಿಚಯಿಸಿತು
ಮಹಿಳೆಯರು ಮತದಾನದ ಘೋಷಣೆಗಳನ್ನು ಮಾಡಿ
ತಮ್ಮ ಕಲಾ ಪ್ರದರ್ಶನದ ಮೂಲಕ ಜನರನ್ನು ಮತದಾನದ ಪ್ರಾಮುಖ್ಯತೆಯನ್ನು ತಿಳಿಸುವ ಕಾರ್ಯದಲ್ಲಿ ತೊಡಗಿಸಿದರು
ಓದು ವ್ಯಕ್ತಿತ್ವವನ್ನು ರೂಪಿಸುತ್ತದೆ ಮತದಾನ ಜೀವನವನ್ನು ರೂಪಿಸುತ್ತದೆ ಎನ್ನುವ ಪ್ರಾಮುಖ್ಯತೆಯನ್ನು ಪರಿಚಯಿಸಲಾಯಿತು
ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಯುವಜನರು ಅಧಿಕಾರಿಗಳು ಕ್ಯಾಂಡಲ್ ಮಾರ್ಚ್ ನಲ್ಲಿ ನಲ್ಲಿ ಪಾಲ್ಗೊಂಡು ಮತದಾನದ ದಿನದಂದು ಮತಗಟ್ಟೆಗೆ ಬಂದು ಮತದಾನ ಮಾಡುವಂತೆ ಸೂಚಿಸಿ ಜಾಗೃತಿ ಮೂಡಿಸಲಾಯಿತು

ವಿಕಲಚೇತನರು ಹಿರಿಯ ನಾಗರಿಕರು ಯುವ ಮತದಾರರಿಗೆ ಎಲ್ಲ ರೀತಿಯ ವಿಶೇಷ ಸಹಕಾರವನ್ನು ಭಾರತೀಯ ಚುನಾವಣಾ ಆಯೋಗ ರೂಪಿಸಿದೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಮತದಾನವನ್ನು ಮಾಡುವಂತೆ ಮನವಿಯನ್ನು ಮಾಡಲಾಯಿತು

ಕ್ಯಾಂಡಲ್ ಮಾರ್ಚ್ ಅನ್ನು ಉದ್ದೇಶಿಸಿ ಮಾತನಾಡಿದ ಸ್ನೇಹಲ್ ಸುಧಾಕರ್ ಲೋಖಂಡೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿಲ್ಲಾ ಪಂಚಾಯತ್ ಶಿವಮೊಗ್ಗ ಪ್ರತಿಯೊಬ್ಬರೂ ಮತದಾನದಲ್ಲಿ ತೊಡಗಿಕೊಳ್ಳಬೇಕು. ಮತದಾನ ಅತ್ಯಂತ ಪವಿತ್ರವಾದದ್ದು, ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರಜಾತಂತ್ರದ ಅತ್ಯಂತ ಪವಿತ್ರ ವ್ಯವಸ್ಥೆಯಾದ ಮತದಾರ ನಿಮ್ಮ ಹಕ್ಕು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಸ್ವಸಹಾಯ ಗುಂಪುಗಳು ಯುವ ಮತದಾರರು, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಜಿಲ್ಲಾ ಪಂಚಾಯತ್ ನ ಮತದಾರ ಜಾಗೃತಿ ವಿಭಾಗದ ಮುಖ್ಯಸ್ಥ ಶ್ರೀಕಾಂತ್ ಹಾಗೂ ಮತದಾರ ಜಾಗೃತಿ ಕಾರ್ಯಕ್ರಮದ ನವೀದ್ ಇತರರು ಹಾಜರಿದ್ದರು

error: Content is protected !!