ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಶಿವಮೊಗ್ಗ ಜಿಲ್ಲಾ ಸಂಘಟನ ಕಾರ್ಯದರ್ಶಿಯಾಗಿ ಪತ್ರಕರ್ತ ಪುನೀತ್ ಬೆಳ್ಳೂರು ಅವರನ್ನ ಆಯ್ಕೆ ಮಾಡಿ ರಾಜ್ಯ ಅಧ್ಯಕ್ಷರಾದ ಸತ್ಯಜಿತ್‌ ಸುರತ್ಕಲ್ ಅದೇಶ ಹೊರಡಿಸಿದ್ದಾರೆ,ಹಾಗೂ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಕಾರ್ಯಧ್ಯಕ್ಷ ರಾಘವೇಂದ್ರ ಮುಡುಬ,ಜಿಲ್ಲಾಧ್ಯಕ್ಷ ಪ್ರವೀಣ್ ಇಡಗೋಡು,ಹೊದಲ ಶಿವು, ಸೇರಿದಂತೆ ಕಾರ್ಯಕರ್ತರು ಅಭಿನಂದನೆ ತಿಳಿಸಿದ್ದಾರೆ.ಇದೇ ಸಂದರ್ಭದಲ್ಲಿ ತಿಳಿಸಿದ ಪುನೀತ್ ಬೆಳ್ಳೂರು ಸಂಘಟನೆಯು ನನಗೆ ಅತ್ಯಂತ ಜವಾಬ್ದಾರಿ ಇರುವ ಹುದ್ದೆಯನ್ನ ನೀಡಿದೆ,ಹಾಗೂ ನನ್ನ ಈ ಒಂದು ಹುದ್ದೆ ನೀಡಲು ನನ್ನ ಗುರುತಿಸಿದ ಶಿವಮೊಗ್ಗ ಜಿಲ್ಲಾ ಸಮಿತಿಗೆ ನಾನು ಧನ್ಯವಾದ ತಿಳಿಸುತ್ತೇನೆ,ನಮ್ಮ ಸಮಾಜಕ್ಕೆ ಈ ವರೆಗೆ ಯಾವುದೇ ಮೂಲ ಸೌಕರ್ಯವನ್ನ ಸರ್ಕಾರ ನೀಡಿಲ್ಲ,ನಮ್ಮ ಸಮಾಜಕ್ಕೆ ಅಭಿವೃದ್ಧಿ ನಿಗಮ ನೀಡುವಲ್ಲಿ ಸರ್ಕಾರ ಮುಂದಾಗಬೇಕು,ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಈಗಾಗಲೇ ಹಲವು ಸಮಾಜ ಮುಖಿ ಕೆಲಸ ಮಾಡುತ್ತ ಬಂದಿದೆ,ಸಮಾಜದವರಿಗೆ ಅಲ್ಲಾದೆ ಪ್ರತಿ ಹೋಬಳಿ ಮಟ್ಟದಲ್ಲಿ ಪ್ರತಿಯೊಬ್ಬರಿಗೂ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ,ರಕ್ತದಾನ ಶಿಬಿರ ,ವಿದ್ಯಾರ್ಥಿಗಳು ಹಾಗೂ ರೈತರಿಗೆ ಅನುಕೂಲ ದೃಷ್ಟಿಯಿಂದ ಸರ್ಕಾರದಿಂದ ಬರುವ ಸೌಲಭ್ಯಗಳ ಮಾಹಿತಿ ತತ್ಕ್ಷಣ ನೀಡುತ್ತಿದೆ, ಇದೊಂದು ವಿಭಿನ್ನ ಪ್ರಯತ್ನ ,ಸಂಘಟನೆ ಬಹಳ ಸ್ಪಂದನೆ ಮಾಡುತ್ತಿದೆ,ಈಗ ನಾನಗೆ ಒಂದು ಜವಾಬ್ದಾರಿ ಸ್ಥಾನ ಕೊಟ್ಟಿದೆ ನಾನು ಪ್ರತಿಯೊಬ್ಬರಿಗೂ ಸ್ಪಂದನೆ ಮಾಡುತ್ತೇನೆ,ಸಂಘಟನೆ ನೀಡಿದ ಜವಾಬ್ದಾರಿ ನಿರ್ವಾಹಿಸಿ ಸಂಘಟನೆ ಕಟ್ಟಲು ನಾನು ಶ್ರಮಿಸುತ್ತೇನೆ ಎಂದರು,ಹಾಗೂ ಪುನೀತ್ ಬೆಳ್ಳೂರು ಅವರ ಸಂಪರ್ಕ 9591553208

error: Content is protected !!