ಬೆಳಕು ಯೋಜನೆಯಿಂದ ಮಲೆನಾಡಿನ ಜನತೆಯಲ್ಲಿ ಹರ್ಷ
ಶಿವಮೊಗ್ಗ ಜಿಲ್ಲೆಯಲ್ಲಿ ಮೆಸ್ಕಾಂನ ಬೆಳಕು ಯೋeನೆ ಯಶಸ್ವಿಯಾಗಿದ್ದು ಮಲೆನಾಡಿನಲ್ಲಿ ಇದುವರೆವಿಗೂ ಕೂಡ ವಿದ್ಯುತ್ ಕಾಣದ ಮನೆಗಳು ಈಗ ಇಲಾಖೆಯ ಬೆಳಕು ಯೋಜನೆಯ ಗುಡ್ಡಗಾಡು ಪ್ರದೇಶದ ಮನೆಗಳಿಗೂ ಕೂಡ ವಿದ್ಯುತ್ ಬೆಳಕು ಕಲ್ಪಿಸಲಾಗುತ್ತಿದೆ. ವಿದ್ಯುತ್ ಬೆಳಕನ್ನೇ ಕಾಣದ ಜನ ಹಾಗು ವಿದ್ಯಾರ್ಥಿಗಳಲ್ಲಿ ಬೆಳಕು ಬಂದಂತಾಗಿದೆ.

ಮೆಸ್ಕಾಂ ಇಲಾಖೆ ಮಲೆನಾಡಿನಲ್ಲಿ ಬೆಟ್ಟಗುಡ್ಡಗಳ ಪ್ರದೇಶಗಳಿಗೆ ಕಂಬಗಳನ್ನು ಹಾಕಿ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ನೀಡಿ ಬೆಳಕನ್ನು ಒದಗಿಸುತ್ತಿದೆ. ಬೆಳಕು ಯೋಜನೆಯಡಿ ಜಿಲ್ಲೆಯಾದ್ಯಂತ 4 ಸಾವಿರಕ್ಕೂ ಹೆಚ್ಚು ಪಲಾನುಭವಿಗಳನ್ನು ಗುರುತಿಸಿ ಈಗಾಗಲೇ 450 ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಪೂರೈಸಿ ಬೆಳಕನ್ನು ನೀಡಲಾಗಿದೆ.
ನ್ಯೂಸ್‍ನೆಕ್ಷ್ಟ್‍ನೊಂದಿಗೆ ಮಾತನಾಡಿದ ರಾಮಣ್ಣ ಈ ಮೊದಲು ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೇ ತುಂಬಾ ಕಷ್ಟ ಆಗುತ್ತಿತ್ತು ಇದೀಗ ವಿದ್ಯುತ್ ಸಂಪರ್ಕ ಕಲ್ಪಿಸಿರುವುದರಿಂದ ಜನರಿಗೆ ಅನುಕೂಲವಾಗಿದೆ ಎಂದು ತಿಳಿದರು

News Next ನೊಂದಿಗೆ ಮಾತನಾಡಿದ ಮೆಸ್ಕಾಂ ಅಧೀಕ್ಷಕ ಶಶಿಧರ್ ಮಾತನಾಡಿ 4ಸಾವಿರದ 300 ಫಲಾನುಭವಿಗನ್ನು ಗುರುತಿಸಲಾಗಿದ್ದು ಹಂತ ಹಂತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ತೀಥಹಳ್ಳಿ ತಾಲ್ಲೂಕಿನ ಮೇಳಿಗೆ ಗ್ರಾಮದ ಆಶಾ News Next ನೊಂದಿಗೆ ಮಾತನಾಡಿ ನಾವುಗಳು ವಿದ್ಯುತ್ ಬೆಳಕು ಇಲ್ಲದೆÀ ನಾವು ತುಂಬಾ ಕಷ್ಟ ಆಗುತ್ತಿತ್ತು ಸರ್ಕಾರದವರು ಬೆಳಕು ಯೋಜನೆಯನ್ನು ತಂದು ನಮ್ಮ ಮನೆಗೆ ಬೆಳಕನ್ನು ಕೊಟ್ಟಿದ್ದಾರೆ. ಇದರಿಂದ ನಮಗೆ ತುಂಬಾ ಅನುಕೂಲವಾಗಿದೆ.ಇಲ್ಲಿ ರಾತ್ರಿ ಹೊತ್ತು ಕಾಡು ಪ್ರಾಣಿಗಳು ಬರುÀತಿದ್ದವು ವಿದ್ಯುತ್ ಇಲ್ಲದೆ ನಮಗೆ ತುಂಬಾ ಹೆದರಿಕೆ ಆಗುತ್ತಿತ್ತು. ಹಾಗು ಮಕ್ಕಳ ವಿದ್ಯಭ್ಯಾಸಕ್ಕೂ ಕೂಡ ಅನಾನುಕೂವಾಗಿತ್ತು ಈಗ ಎಲ್ಲವೂ ಕೂಡ ಚೆನ್ನಾಗಿ ನಡೆಯುತ್ತಿದೆ ಎಂದು ತಿಳಿಸಿದರು.

News Next ನೊಂದಿಗೆ ಮಾತನಾಡಿದ ವಿದ್ಯಾರ್ಥಿ ಅಕಿಲೇಶ್ ಸರ್ಕಾರದವರು ನಮ್ಮ ಮನೆಗೆ ಬೆಳಕನ್ನು ಕೊಟ್ಟಿದ್ದಾರೆ ನನಗೆ ವಿದ್ಯಭ್ಯಾಸ ಮಾಡುವದಕ್ಕೆ ಈ ಹಿಂದೆ ತುಂಬಾ ತೊಂದರೆಯಾಗುತ್ತಿತ್ತು ಈಗ ವಿದ್ಯುತ್ ಬೆಳಕಿನಿಂದ ಓದುವುದಕ್ಕೆ ಖುಷಿಯಾಗುತ್ತಿದೆ.ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಹಾಗು ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.

error: Content is protected !!