ಇಂದು ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಯುವ ಮೋರ್ಚಾ ವತಿಯಿಂದ 75ನೇ ಅಮೃತ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶದ ಏಕತೆ ಮತ್ತು ಸಮಗ್ರತೆಯ ಮಹತ್ವ ವನ್ನು ನಮ್ಮ ಯುವ ಮಿತ್ರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚನ್ನಮುಂಭಾಪುರ ಗ್ರಾಮದಲ್ಲಿ  ಶಾಸಕರಾದ ಶ್ರೀ ಕೆ.ಬಿ.ಅಶೋಕ್ ನಾಯ್ಕ ರವರು ಸ್ವತಃ ಸೈಕಲ್ ಚಾಲನೆ ಮಾಡುವುದರ ಮೂಲಕ ಜಾಥಾ ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷರಾದ ಪವನ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಮೇಘರಾಜ್, ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿ ಅನಿಲ್, ಅಭಿಲಾಶ್, ತಾಲೂಕು ಎಸ್.ಸಿ. ಮೋರ್ಚಾ ಅಧ್ಯಕ್ಷರಾದ ಮಂಜುನಾಥ, ಹಸೂಡಿ ಮಹಾಶಕ್ತಿ ಅಧ್ಯಕ್ಷರಾದ ಖಾರ ಸುಬ್ಬಣ್ಣ, ಹಾಗೂ ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!