ಶಿವಮೊಗ್ಗ, ಏ.24: ಗ್ರಾಮೀಣ ಭಾಗದ ಮಕ್ಕಳನ್ನು ಹೆಚ್ಚಾಗಿ ಹೊಂದಿರುವ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ವರ್ಷದ ಫಲಿತಾಂಶ ವಿಶೇಷವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಶೇಕಡ 99 ರಷ್ಟು ಫಲಿತಾಂಶ ಲಭಿಸಿದೆ. ಅಂತೆಯೇ ವಾಣಿಜ್ಯ ವಿಭಾಗದಲ್ಲಿ 98 ರಷ್ಟು ಬಂದಿದ್ದು ಒಟ್ಟು ಎರಡೂ ಕಡೆ 33 ಮಕ್ಕಳು ಅತ್ಯುತ್ತಮ ಅಂಕ ಪಡೆದಿದ್ದಾರೆ.
ವಿಜ್ಞಾನ ವಿಭಾಗದ ಪರೀಕ್ಷೆಗೆ ಭಾಗವಹಿಸಿದ್ದ 72 ವಿದ್ಯಾರ್ಥಿಗಳಲ್ಲಿ 71 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 20 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದಿದ್ದು 38 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದಾರೆ. 13 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿದ್ದಾರೆ.
ವಿಜ್ಞಾನ ವಿಭಾಗದ ನಿತ್ಯಶ್ರೀ ಅವರು 578 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಶಬೀರ್ 570 ಅಂಕ ಪಡೆದಿದ್ದಾರೆ. ಪೂಜಾ 562, ಮಹೇಶ್ 550, ಭಾವನ ಎನ್.ಕೆ.550 ಅಂಕ ಗಳಿಸಿದ್ದಾರೆ
ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 42 ವಿದ್ಯಾರ್ಥಿಗಳಲ್ಲಿ 41 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 13 ಉನ್ನತ ಶ್ರೇಣಿ, 24 ಪ್ರಥಮ ಶ್ರೇಣಿ ಹಾಗೂ 04 ದ್ವಿತೀಯ ಶ್ರೇಣಿ ಪಡೆದಿದ್ದಾರೆ.
ವಾಣಿಜ್ಯ ವಿಭಾಗದ ಬೆನಕೇಶ್ ಪಿ. ಜಿ. ಹಾಗೂ ಬಿಂದು ಜಿ.ಅವರು 567 ಅಂಕ ಪಡೆಯುವ ಮೂಲಕ ಕಾಲೇಜಿಗೆ ಪ್ರಥಮವಾಗಿ ಹೊರಹೊಮ್ಮಿದ್ದಾರೆ. ಉಳಿದಂತೆ ನಂದ ಕುಮಾರ್ 561, ವಿನುಶ್ರೀ 559, ಪ್ರಜ್ವಲ್ 558, ಸುನಿಧಿ 555 ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ವಿದ್ಯಾರ್ಥಿಗಳನ್ನು, ಬೋಧಕ ವರ್ಗವನ್ನು, ಪ್ರಾಂಶುಪಾಲರನ್ನು, ಹಾಗೂ ಆಡಳಿತ ಮಂಡಳಿಯ ಸರ್ವರನ್ನು ಅಭಿನಂದಿಸಿದ್ದಾರೆ.